Advertisement

ಅಂಗನವಾಡಿ ಕಾರ್ಯಕರ್ತರ ಪ್ರೋತ್ಸಾಹಧನ ಹೆಚ್ಚಿಸಿ

04:00 PM May 16, 2020 | Naveen |

ಹೊಸಪೇಟೆ: ಕೋವಿಡ್ ನಿಯಂತ್ರಣಕ್ಕಾಗಿ ನೌಕರಿ ಭದ್ರತೆಯಿಲ್ಲದೇ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ನೌಕರ ವರ್ಗಕ್ಕೆ ಸರ್ಕಾರ 25 ಸಾವಿರ ರೂ ಪ್ರೋತ್ಸಾಹ ಧನ, 50 ಲಕ್ಷ ವಿಮೆ ಘೋಷಣೆ ಮಾಡಬೇಕು ಎಂದು ಸಿಐಟಿಯು ತಾಲೂಕು ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಗ್ರಾಪಂ ನೌಕರರು, ವೃದ್ಧರು, ನರ್ಸ್‌, 108 ಅಂಬುಲೆನ್ಸ್‌ ಸಿಬ್ಬಂದಿ ಸೇರಿದಂತೆ ಇತರ ನೌಕರರಿಗೆ ಸರ್ಕಾರ 25 ಸಾವಿರ ಪ್ರೋತ್ಸಾಹ ಧನ ಹಾಗೂ 50 ಲಕ್ಷ ವಿಮೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಮೃತಪಟ್ಟ ಆಶಾ ಕಾರ್ಯಕರ್ತೆ ಸಾಕಮ್ಮ ಕುಟುಂಬಕ್ಕೆ 50 ಲಕ್ಷ ವಿಮೆ ಹಾಗೂ ಓರ್ವ ಸದಸ್ಯರಿಗೆ ನೌಕರಿ ನೀಡಬೇಕು. ಕಂಟೈನ್ಮೆಂಟ್‌ ವಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸುರಕ್ಷತೆಗಾಗಿ ಪಿಪಿಇ ಕಿಟ್‌ ವಿತರಿಸಬೇಕು. ಕರ್ತವ್ಯ ನಿರತ ಸಿಬ್ಬಂದಿಗೆ ಆಗಾಗ ಪರೀಕ್ಷೆ ನಡೆಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಅಂಗನವಾಡಿ ನೌಕರರ ಸಂಘದ ಮುಖಂಡೆ ಕೆ.ನಾಗರತ್ಮಮ್ಮ ಆಗ್ರಹಿಸಿದರು.

ಸಿಐಟಿಯು ಮುಖಂಡ ಆರ್‌ .ಭಾಸ್ಕರರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನಸುರಿಸುತ್ತಿದ್ದು, ಸರ್ಕಾರ ಜಾರಿ ತಂದಿರುವ ನೂತನ ಕಾರ್ಮಿಕರ ಕಾಯಿದೆ ಕೈ ಬಿಟ್ಟು, ಹಳೆ ಕಾಯಿದೆ ಮುಂದುವರೆಸಬೇಕು. ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜನ್ನು ದೇಶದ ಎಲ್ಲಾ ನಾಗರಿಕರ ಖಾತೆಗೆ ತಲಾ 15 ಸಾವಿರ ರೂಗಳನ್ನು ಜಮಾ ಮಾಡಬೇಕು ಎಂದು ಆಗ್ರಹಿಸಿದರು. ನಂತರ ಗ್ರೇಡ್‌-2 ತಹಶೀಲ್ದಾರ್‌ ಅಮರನಾಥ ಅವರಿಗೆ ಮನವಿ ಸಲ್ಲಿಸಿದರು. ಎ.ಕರುಣಾನಿಧಿ, ಎಂ.ಗೋಪಾಲ, ಸ್ವಪ್ನ, ಶಕುಂತಲಮ್ಮ, ಕೆಂಚಮ್ಮ, ಸುಮಂಗಲಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next