Advertisement
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ನಗರದಲ್ಲಿ ಈಗಾಗಲೇ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುವುದು ಎಂದರು.
Related Articles
Advertisement
ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುವುದು. ಮತದಾರರಿಗೆ ಹೆಂಡ-ಹಣ, ಸೀರೆ, ಇತರೆ ವಸ್ತುಗಳನ್ನು ಅಮಿಷ ಒಡ್ಡುವ ಅಥಾವ ವಿತರಣೆ ಮಾಡುವ ಪ್ರಕರಣಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 21 ಸೆಕ್ಟರ್ ಅಧಿಕಾರಿಗಳು 15 ಫ್ಲಾಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ ಎಂದರು.
ಸಾರ್ವಜನಿಕರು, ಚುನಾ ವಣೆ ಕುರಿತಾದ ದೂರುಗಳು ಸಲ್ಲಿಸಬಹುದಾಗಿದೆ. ದೂರುಗಳನ್ನು ಸಲ್ಲಿಸಲು (08394-232209 ಅಥವಾ 1950) ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು 247ಮತ ಕೇಂದ್ರಗಳಲ್ಲಿ ಏಳು ಅತಿ ಸೂಕ್ಷ್ಮ ಹಾಗೂ 37 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಲಾಗಿದೆ. ಎರಡು ಪಿಂಕ್ ಮತಗಟ್ಟೆಗಳನ್ನು ಮಾಡಲಾಗುವುದು ಎಂದರು. ತಹಶೀಲ್ದಾರ ಡಿ.ಜಿ. ಹೆಗಡೆ ಹಾಗೂ ಚುನಾವಣೆ ಸಿಬ್ಬಂದಿಗಳು ಇದ್ದರು.