Advertisement

ಹೊಂಬುಜದಲ್ಲಿ ಅಪ್ರಕಟಿತ ಶಾಸನ ಪತ್ತೆ

06:02 PM Nov 01, 2019 | Naveen |

ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಅತಿಶಯ ಜೈನಕೇಂದ್ರ ಹೊಂಬುಜದಲ್ಲಿ ಅಪ್ರಕಟಿತ ಶಾಸನ ಪತ್ತೆಯಾಗಿದೆ. 17-18ನೇ ಶತಮಾನದಷ್ಟು ಹಳೆಯದೆನ್ನಲಾದ ಏಕಸಾಲಿನ ಅಪ್ರಕಟಿತ ಶಾಸನವನ್ನು ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ ಎಚ್‌.ಆರ್‌.ಪಾಂಡುರಂಗ, ಬೆಂಗಳೂರಿನ ವೇಮಗಲ್‌ ಮೂರ್ತಿ, ಮುತ್ತುರಾಜ್‌ ಅವರ ಸಹಕಾರದೊಂದಿಗೆ ಸಂಶೋಧನೆ ನಡೆಸಲಾಗುತ್ತಿದೆ.
ಹೊಂಬುಜದಲ್ಲಿ ಒಟ್ಟು 37 ಶಾಸನಗಳಿದ್ದು, ಇದೀಗ ಪತ್ತೆಯಾದ ಶಾಸನ 38ನೇಯದ್ದಾಗಿದೆ. ಇದು ಕುಮುದಾ ಹೊಳೆ ಎಂಬ ಅಪ್ರಕಟಿತ ಪಟ್ಟಿಕಾ ಶಾಸನ ಎಂದು ಇತಿಹಾಸ ತಜ್ಞರು ಅಭಿಪ್ರಾಯಿಸಿದ್ದಾರೆ.

Advertisement

ಪದ್ಮಾವತಿ ದೇವಿ ನೆಲೆಸಿದ, ಕುಮದ್ವತಿ ನದಿ ಉಗಮ ಸ್ಥಾನ ಎಂದೇ ಪ್ರಸಿದ್ಧಿ ಹೊಂದಿದ ಇಲ್ಲಿ ಶಾಸನ ಪತ್ತೆಯಾಗಿರುವುದು ಹೊಂಬುಜ ಐತಿಹ್ಯಕ್ಕೆ ಇನ್ನಷ್ಟು ಮಹತ್ವ ಸಿಕ್ಕಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next