Advertisement

ಅತಿವೃಷ್ಟಿ ಸಮೀಕ್ಷೆ ಮಾಹಿತಿ ನೀಡಲು ಒತ್ತಾಯ

06:10 PM Sep 07, 2019 | Naveen |

ಹೊಸನಗರ: ಅತಿವೃಷ್ಟಿ ಸಮೀಕ್ಷೆ ಹಾಗೂ ಪರಿಹಾರದ ಕಾರ್ಯದಲ್ಲಿ ತಾಪಂ ಸದಸ್ಯರನ್ನು ತೊಡಗಿಸಿಕೊಳ್ಳುವಂತೆ ಎಲ್ಲಾ ಸದಸ್ಯರು ಒಕ್ಕೊರಲ ಆಗ್ರಹ ಮಾಡಿದರು.

Advertisement

ತಾಪಂ ಅಧ್ಯಕ್ಷ ವಾಸಪ್ಪ ಗೌಡ ಅಧ್ಯಕ್ಷತೆಯಲ್ಲಿ ತ್ತೈಮಾಸಿಕ ಸಾಮಾನ್ಯ ಸಭೆ ನಡೆಯಿತು. ವಿವಿಧ ಇಲಾಖೆಗಳು ಅತಿವೃಷ್ಟಿ ಹಾನಿ ಸಮೀಕ್ಷೆ ಸಮಯದಲ್ಲಿ ತಾಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅವರಿಗೂ ಸಮೀಕ್ಷೆ, ಪರಿಹಾರದ ಪಟ್ಟಿಯನ್ನು ನೀಡುವಂತೆ ಮನವಿ ಮಾಡಿದರು.

ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಬರಬೇಕಾದ ಒಟ್ಟು ಮಳೆಯು ಕೇವಲ ಆಗಸ್ಟ್‌ ತಿಂಗಳಲ್ಲಿ ಬಿದ್ದಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿಯೂ ಮಳೆ ಮುಂದುವರಿದ ಕಾರಣ ನಾಟಿ ಮಾಡಿದ ಭತ್ತದ ಗದ್ದೆ ಕೊಚ್ಚಿ ಹೋಗಿದೆ. ಶುಂಠಿ, ಅಡಕೆ ಬೆಳೆಯು ಕೊಳೆ ರೋಗಕ್ಕೆ ತುತ್ತಾದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಸದಸ್ಯರು ದೂರಿದರು.

ತಾಲೂಕಿನಲ್ಲಿ ಸುಮಾರು ರೂ.1 ಕೋಟಿ ಪರಿಹಾರ ಮಂಜೂರಾಗಿದೆ. ಸಂಪೂರ್ಣ ಮನೆ ಹಾನಿಗೆ ತಲಾ 5 ಲಕ್ಷ, ಅರೆಮನೆ ಹಾನಿಗೆ ರೂ.1ಲಕ್ಷದಂತೆ 45 ಮನೆಗಳಿಗೆ ಪರಿಹಾರ ನೀಡಲಾಗಿದೆ. ಗದ್ದೆ ಹೂಳು ತೆಗೆಯಲು ರೂ.2 ಲಕ್ಷ ವಿತರಿಸಲಾಗಿದೆ ಎಂದು ತಹಶೀಲ್ದಾರ್‌ ಗುರುಮೂರ್ತಿ ಮಾಹಿತಿ ನೀಡಿದರು. ಬಗರ್‌ಹುಕುಂ ಜಮೀನಿಗೂ ಸಹ ಪರಿಹಾರ ನೀಡಬೇಕು. ಮಂಜೂರಾತಿ ಹಂತದಲ್ಲಿರುವ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಬೆಳೆ ವಿಮೆ ಮಾಡಿಸಿ ರೈತರಿಗೆ ಅತಿವೃಷ್ಟಿ ಯೋಜನೆಯಲ್ಲಿ ಪರಿಹಾರ ಮಂಜೂರಾಗುವ ಸಾಧ್ಯತೆ ಇದೆ ಎಂದು ಸಹಾಯಕ ಕೃಷಿ ಅಧಿಕಾರಿ ಸಭೆಗೆ ತಿಳಿಸಿದರು.

ಮಳೆಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸಹಮತದಿಂದ ಕೆಲಸ ಮಾಡುವಂತೆ ಸದಸ್ಯರಾದ ಚಂದ್ರಮೌಳಿ, ವೀರೇಶ ಆಲುವಳ್ಳಿ ಮನವಿ ಮಾಡಿದರು. ಉಪಾಧ್ಯಕ್ಷೆ ಸುಶೀಲಮ್ಮ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಇಒ ಪ್ರವೀಣ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next