Advertisement

ರೈತರಿಗೆ ತೋಟಗಾರಿಕಾ ಮಿಷನ್‌ ವರದಾನ

06:17 PM Sep 13, 2021 | Team Udayavani |

ಚಿಕ್ಕಬಳ್ಳಾಪುರ; ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮ ನೈರ್ಮಲ್ಯ ಕಾಪಾಡಲು ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾದರೆ, ಮತ್ತೂಂದೆಡೆ ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆ ಜಿಲ್ಲೆಯ ರೈತರ ಪಾಲಿಗೆ ವರದಾನವಾಗಿದೆ. ರಾಜ್ಯದಲ್ಲಿ ಬರಪೀಡಿತ ಪ್ರದೇಶವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲ.

Advertisement

ಈ ಭಾಗದ ರೈತರು ಮಳೆ ನೀರನ್ನು ಆಶ್ರಯಿಸಿಕೊಂಡು ರೇಷ್ಮೆ, ಹೈನುಗಾರಿಕೆ, ತರಕಾರಿ, ಹೂ, ಹಣ್ಣು ಉತ್ಪಾದನೆ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಈ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು1,500ರಿಂದ2000 ಅಡಿವರೆಗೆ ಕೊಳವೆ ಬಾವಿ ಕೊರೆದರೂ ನೀರು ಸಿಗದಿರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಂಕಿ- ಅಂಶಗಳ ಪ್ರಕಾರ ದೇಶದಲ್ಲಿ ಅತಿಹೆಚ್ಚು ಅಂತರ್ಜಲವನ್ನು ಬಳಕೆ ಮಾಡುವ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿಕೊಂಡಿರುವ ದುರಂತವೇ ಸರಿ.

ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನ:
ಸರ್ಕಾರಗಳು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಲಭ್ಯ ವೃದ್ಧಿಗೊಳಿಸುವ ಜೊತೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಅನೇಕ ಯೋಜನೆ ರೂಪಿಸಿ, ಅನುಷ್ಠಾನಗೊಳಿಸುವ ಕೆಲಸವನ್ನು ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರಿಗೆ ಸರ್ಕಾರದ ಯೋಜನೆ ಒದಗಿಸುವ ಮೂಲಕ ರೈತರು ಆರ್ಥಿಕ ಅಭಿವೃದ್ಧಿಗಾಗಿ ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತಿದ್ದಾರೆ.

ತೋಟಗಾರಿಕೆ ಬೆಳೆಗೆ ಮಳೆ ನೀರು: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಸೌಕರ್ಯ ಕಲ್ಪಿಸಲು ಸಂಘ- ಸಂಸ್ಥೆ, ರೈತ ಗುಂಪುಗಳಿಗೆ ನೀರು ಸಂಗ್ರಹಣೆಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಯೋಜನೆ ಮೂಲಕ ಸಮುದಾಯ ನೀರು ಸಂಗ್ರಹಣಾ ಘಟಕ ನಿರ್ಮಿಸಲು ಸಹಾಯಧನ ಮತ್ತು ಪ್ರೋತ್ಸಾಹ ನೀಡುವ ಕೆಲಸ ನಡೆಯುತ್ತಿದೆ. ಇದರಿಂದ ಜಿಲ್ಲೆಯ ಜನರು ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ಸಂರಕ್ಷಣೆ ಮಾಡಿಕೊಂಡು ತೋಟಗಾರಿಕೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಸರ್ಕಾರದ ಈ ಯೋಜನೆ ಸದ್ಬಳಕೆ ಮಾಡಿಕೊಂಡಿರುವ ಅನೇಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವುದು ವಿಶೇಷ.

Advertisement

ವೈಯಕ್ತಿಕವಾಗಿ ಸರ್ಕಾರದ ಸೌಲಭ್ಯಕಲ್ಪಿಸಿದರು ಸಹ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕ ಅಭಿವೃದ್ಧಿ ಹೊಂ¨ಲು ‌ ಸರ್ಕಾರ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಮೂಲಕ ಮಳೆ ನೀರು ಸಂರಕ್ಷಣೆಗೆ ಅನುಕೂಲ ಕಲ್ಪಿಸಿದರಲ್ಲದೆ, ಬರಪೀಡಿತ ಪ್ರದೇಶದಲ್ಲಿ ಮಳೆಗಾಲದಲ್ಲಿ ಬೀಳುವ ನೀರು ಶೇಖರಣೆ ಮಾಡಿ, ಬೆಳೆಗಳನ್ನು ಇಟ್ಟುಕೊಳ್ಳಲು ಸಮುದಾಯ ನೀರು ಸಂಗ್ರಹಣಾ ಘಟಕಗಳ ‌ ರೈತರ ಕೈಹಿಡಿದಿದೆ. ಈಗಾಗಲೇ ರೈತರು ರೇಶ್ಮೆ ತರ ‌ಕಾರಿ, ಸೀಬೆ, ಮಾವು, ದಾಳಿಂಬೆ ಟೊಮೇಟೋ ಮುಂತಾದಬೆಳೆಗಳನ್ನುಇಟ್ಟು ಆದಾಯ ಗಳಿಸಿದ್ದಾರೆ.

ಮಳೆನೀರು ಸಂರಕ್ಷಿಸಿ ಅದರ ಮೂಲಕ ತೋಟಗಾರಿಕೆ ಬೆಳೆಗೆ ಪ್ರೋತ್ಸಾಹಿಸಲು ಸರ್ಕಾರ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆ ಜಾರಿಗೊಳಿಸಿದೆ. ತಾಲೂಕಿನಲ್ಲಿ ಸಮುದಾಯ ನೀರು ಶೇಖರಣಾಘಟಕ ನಿರ್ಮಾಣದಿಂದ ರೈತರಿಗೆ ಅನುಕೂಲವಿದೆ.
ಪ್ರಧಾನಿ ಆಶಯದಂತೆ ರೈತರ ಆದಾಯ ದ್ವಿಗುಣ ಮಾಡಲುಯೋಜನೆ ಸಹಕಾರಿ.

ರಮೇಶ್‌, ಹಿರಿಯ ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ, ಶಿಡ್ಲಘಟ್ಟ

ಯೋಜನೆಯಿಂದ ನಮಗೆ ಅನುಕೂಲವಾಗಿದೆ. ಮಳೆನೀರು ಸಂರಕ್ಷಿಸಿ ಮಿಶ್ರಬೆಳೆ ಬೆಳೆದು ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಅಧಿಕಾರಿಗಳು ಎಲ್ಲಾ ರೀತಿಯ
ಸಹಕಾರ, ಮಾರ್ಗದರ್ಶನ ನೀಡುತ್ತಿದ್ದಾರೆ. ರೈತರುಈ ಯೋಜನೆ ಬಳಸಿಕೊಳ್ಳಬೇಕು.
ಆಂಜನೇಯರೆಡ್ಡಿ, ನೀರು
ಸಂಗ್ರಹಣಾ ಘಟಕ ನಿರ್ಮಿಸಿದ ರೈತ

ರೈತರುಬೆಳೆದಿರುವ ಉತ್ಪನ್ನಗಳಿಗೆ ಬೆಂಬಲಬೆಲೆ ನೀಡುವ ಮೂಲಕ ಸರ್ಕಾರ ಪ್ರೋತ್ಸಾಹಿಸುವ ಯೋಜನೆ ಜಾರಿಗೊಳಿಸಬೇಕು. ಮಳೆ ನೀರು ಸಂರಕ್ಷಣೆಗೆ ಜಿಲ್ಲಾದ್ಯಂತ ಮಳೆ ನೀರು ಶೇಖರಣಾಘಟಕ ನಿರ್ಮಾಣಕ್ಕೆ ಸರ್ಕಾರವಿಶೇಷ ಅನುದಾನ ಬಿಡುಗಡೆಗೆಕ್ರಮಕೈಗೊಳ್ಳಬೇಕು.
●ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ
ಹಸಿರುಸೇನೆ

ಎಂ.ಎ.ತಮೀಮ್ ಪಾಷ

Advertisement

Udayavani is now on Telegram. Click here to join our channel and stay updated with the latest news.

Next