Advertisement

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

07:59 AM Dec 10, 2024 | Team Udayavani |

ಮೇಷ: ಪಾರದರ್ಶಕ ವ್ಯವಹಾರದಿಂದ  ಯಶಸ್ಸು ಖಚಿತ. ಉದ್ಯೋಗಸ್ಥರಿಗೆ  ಪದೋನ್ನತಿ ಅಥವಾ ವೇತನ ಶ್ರೇಣಿ ಪರಿಷ್ಕರಣೆ. ಉದ್ಯಮಿಗಳಿಗೆ  ಯಶಸ್ಸಿನ ಅನುಭವ. ಹಿರಿಯರ ಯೋಗಕ್ಷೇಮವನ್ನು ವಿಚಾರಿಸುತ್ತಿರಿ.

Advertisement

ವೃಷಭ: ಅವಕಾಶ ತಪ್ಪಿ ಹೋಗುವ ಭಯ ಬೇಡ. ಕೆಲಸದಲ್ಲಿ ಪರಿಪೂರ್ಣತೆಯಿಂದ  ಜನರ ಮೆಚ್ಚುಗೆ ಪ್ರಾಪ್ತಿ . ಲೇವಾ ದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ.

ಮಿಥುನ: ನಿರೀಕ್ಷಿತ ಸಹಾಯ ಕೊನೆಗೂ ಕೈಸೇರಿ ಸಂತೃಪ್ತಿ. ಹೊಸ ಬಗೆಯ  ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನ. ಹೂಡಿಕೆ ವ್ಯವಹಾರದಲ್ಲಿ  ಸಮಾಧಾನಕರ  ಪ್ರಗತಿ. ದೇವತಾ ಕಾರ್ಯಕ್ಕೆ  ಧನವಿನಿಯೋಗ.

ಕರ್ಕಾಟಕ: ಮಂದಗತಿಯ, ಆದರೆ ಸ್ಥಿರವಾದ ಪ್ರಗತಿಯನ್ನು  ಕಾಣುವಿರಿ. ಸಣ್ಣ ಕೈಗಾರಿಕೆಗಳ ಸಮಸ್ಯೆ ಪರಿಹಾರ. ಅಲ್ಪಕಾಲದ ಹೂಡಿಕೆಯನ್ನು ಮಾಡುವ ಯೋಚನೆಯನ್ನು ಕೈಬಿಡಿ. ಮಕ್ಕಳ ಸ್ಮರಣ ಶಕ್ತಿ ವೃದ್ಧಿಗೆ  ವಿಶೇಷ ಪ್ರಯತ್ನ.

ಸಿಂಹ: ಇದುವರೆಗಿನ ಪ್ರಗತಿಯನ್ನು ಅವಲೋಕಿಸಿ ಮುನ್ನಡೆಯಿರಿ. ಹೊಸ ಪ್ರಸ್ತಾವ  ಗಳನ್ನು ಪರೀಕ್ಷಿಸಿ ನಿರ್ಧಾರಕ್ಕೆ ಬನ್ನಿ. ಉದ್ಯೋಗಸ್ಥರಿಗೆ ಯಶಸ್ಸು, ಪ್ರಶಂಸೆ ಸಂಭವ. ದೂರದಿಂದ ಶುಭವಾರ್ತೆ ಬಂದು ಹರ್ಷ.

Advertisement

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆ, ಜಾಣತನ ದಿಂದ ಯಶಸ್ಸು. ಆಶ್ರಿತರ ಯೋಗಕ್ಷೇಮದ ಕಡೆಗೆ ಹೆಚ್ಚು ಗಮನ ಕೊಡಿ.  ಹತ್ತಿರದ ದೇವತಾ ಸನ್ನಿಧಿಗೆ ಸಂದರ್ಶನ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣ.

ತುಲಾ:  ಉದ್ಯೋಗಸ್ಥರಿಗೆ ದಿನದ ಕೊನೆಯಲ್ಲಿ ಶುಭವಾರ್ತೆ. ಅನ್ಯರ ಹಣಕಾಸು ವ್ಯವಹಾರ ನಿರ್ವಹಣೆಯಲ್ಲಿ ಎಚ್ಚರ. ದಾನ – ಧರ್ಮ ಮಾಡುವಾಗ ವಿವೇಕಕ್ಕೆ ಅಗ್ರ ಪ್ರಾಶಸ್ತ್ಯ ದಿನವಿಡೀ ಮಿಶ್ರಫ‌ಲಗಳನ್ನು ಅನುಭವಿಸುವಿರಿ.

ವೃಶ್ಚಿಕ: ದೇವತಾರ್ಚನೆಯತ್ತ ಹೆಚ್ಚಾದ ಒಲವು. ಉದ್ಯೋಗ ರಂಗದಲ್ಲಿ ತೃಪ್ತಿಕರ ಸಾಧನೆ. ವ್ಯವಹಾರಸ್ಥರಿಗೆ ಹೆಚ್ಚಿನ ಯಶಶುÕ. ಕಿರಿಯರ ವಿವಾಹ ಮಾತುಕತೆ ಮುಂದುವರಿಕೆ. ಕೃಷ್ಯುತ್ಪನ್ನಗಳಿಂದ ಸಮಾಧಾನಕರ ಲಾಭ.

ಧನು: ಕಾರ್ಯನಿಷ್ಠೆ, ಸಹನೆಗೆ ಮೇಲಧಿಕಾರಿ ಗಳ ಮೆಚ್ಚುಗೆ. ವ್ಯವಹಾರಸ್ಥರಿಗೆ ಹೊಸ ಸವಾಲುಗಳ  ಅನುಭವ. ಕೋಳಿಸಾಕಣೆ, ಮತ್ಯೋದ್ಯಮಿಗಳಿಗೆ ಅನುಕೂಲದ ವಾತಾವರಣ. ಮಕ್ಕಳ ಯಶಸ್ಸಿನಿಂದ ಹಿರಿಯರಿಗೆ ಸಂತಸ.

ಮಕರ: ಯಶಸ್ವೀ ಕಾರ್ಯನಿರ್ವಹಣೆ ಯಿಂದ  ಪರಿಸರದವರಿಗೆಲ್ಲ ಮೆಚ್ಚುಗೆ.ಮನೆಯಲ್ಲಿ ಮಂಗಲ ಕಾರ್ಯದ ಸಮಯ ಸನ್ನಿಹಿತ. ದೇವತಾ ಪ್ರಾರ್ಥನೆಯಿಂದ ಕಾರ್ಯಗಳು ಸುಗಮ. ಅರ್ಹರಿಗೆ ನೆರವಾಗುವ ಯೋಗದಿಂದಸಮಾಧಾನ.

ಕುಂಭ: ಸೇವಾ ಕಾರ್ಯಗಳನ್ನು ಹೆಚ್ಚಿಸುವ ಕುರಿತು ಚಿಂತನೆ. ಉದ್ಯೋಗರಂಗದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ಹಾಗೂ ಗೌರವ ಪ್ರಾಪ್ತಿ. ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಲಾಭ.  ಸಂಗಾತಿಯ ಆರೋಗ್ಯದತ್ತ ಗಮನವಿರಲಿ. ಮನೆಮಂದಿಯೆಲ್ಲರಿಂದ ಉತ್ತಮ ಸಹಕಾರ

ಮೀನ: ಸ್ಥಿರವಾದ ಆರೋಗ್ಯದ ಅನುಭವ. ಮಾತೃಸಮಾನರ. ಹಿತ ನುಡಿಯಿಂದ ಮನಸ್ಸಿಗೆ ನೆಮ್ಮದಿ. ಬಂಧು ಬಾಂಧವರ ಭೇಟಿ ಸಂಭವ.ಉದ್ಯೋಗ, ವ್ಯವಹಾರದಲ್ಲಿ ಸ್ಥಿರವಾದ ಯಶಸ್ಸಿನ ಅನುಭವ. ವಾಹನ, ಆಸ್ತಿ ಖರೀದಿ, ಮಾರಾಟ ವ್ಯವಹಾರಸ್ಥರಿಗೆ  ಅನುಕೂಲ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next