Advertisement

Horoscope: ರಾಜಕಾರಣಿಗಳಿಗೆ ನೆಮ್ಮದಿ ಭಂಗವಾಗಲಿದೆ

07:39 AM Oct 01, 2024 | Team Udayavani |

ಮೇಷ:  ದೇಹ, ಮನಸ್ಸು ಎರಡಕ್ಕೂ ಕೊಂಚ ಕಿರಿಕಿರಿ.  ಉದ್ಯೋಗ ಕ್ಷೇತ್ರದಲ್ಲಿ ಕಾರ್ಯ ಮಧ್ಯಮ. ಸರಕಾರಿ ನೌಕರರಿಗೆ ಕೆಲಸದ ಹೊರೆ. ಉತ್ತರದ ಬಂಧುಗಳಿಂದ ಸಕಾಲಕ್ಕೆ ಸಹಾಯ. ವಾಹನ ಚಾಲನೆಯಲ್ಲಿ ಎಚ್ಚರಿಕೆ.

Advertisement

ವೃಷಭ:  ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ.  ಸ್ವಂತ  ವ್ಯವಹಾರ ನಡೆಸುವವರಿಗೆ  ಸಮಯದ ಅಭಾವ.ಕಟ್ಟಡ ನಿರ್ಮಾಣ, ವಸ್ತ್ರೋದ್ಯಮ,  ಸºರ್ಣೋದ್ಯಮ  ಮೊದಲಾದ ಉದ್ಯಮಗಳಿಗೆ ಲಾಭ.

ಮಿಥುನ: ಅನಿವಾರ್ಯವಾದ ಅನಿರೀಕ್ಷಿತ ವೆಚ್ಚಗಳು. ಮನೆಯಲ್ಲಿ ಅನುಕೂಲಕರ ವಾತಾವರಣ. ಉದ್ಯೋಗಸ್ಥರಿಗೆ ಹಿತವಾದ ಸನ್ನಿವೇಶ.  ರಾಜಕಾರಣಿಗಳಿಗೆ ನೆಮ್ಮದಿ ಭಂಗ. ದೇವತಾರ್ಚನೆಯಲ್ಲಿ  ಪಾಲುಗೊಳ್ಳುವಿಕೆ.

ಕರ್ಕಾಟಕ: ಉದ್ಯೋಗ ರಂಗದಲ್ಲಿ ಸಾಧನೆ ಮಧ್ಯಮ.  ಉದ್ಯಮಿಗಳ ಉತ್ಪನ್ನಗಳಿಗೆ ಮಧ್ಯಮ ಬೇಡಿಕೆ.   ಕಲೋಪಾಸಕರಿಗೆ ಮನಸ್ಸಂತೋಷ, ವಿದ್ವಾಂಸರಿಗೆ ಜನಮನ್ನಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳ ಮುನ್ನಡೆ.

ಸಿಂಹ: ಹಿರಿಯರ ಆಶೀರ್ವಾದದಿಂದ ವಿಘ್ನಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ  ಮಟ್ಟದ ಯಶಸ್ಸು. ಅಧಿಕಾರಿಗಳಿಗೆ ಅವಧಿಗಿಂತ ಮೊದಲೇ ವರ್ಗಾವಣೆ ಸಂಭವ.  ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ.

Advertisement

ಕನ್ಯಾ: ಕಾರ್ಯದಲ್ಲಿ ಪ್ರಗತಿ,   ಸಮಾಜದಲ್ಲಿ ಗೌರವ ಪ್ರಾಪ್ತಿ. ಉದ್ಯೋಗಸ್ಥರ ಸಾಧನೆಗೆ ಮೇಲಧಿಕಾರಿಗಳ ಪ್ರಶಂಸೆ.  ಉದ್ಯಮ ವಿಸ್ತರಿಸಿದ ವಸ್ತ್ರದ ವ್ಯಾಪಾರಿಗಳಿಗೆ ಉತ್ತಮ ಲಾಭ. ಉತ್ತರ ದಿಕ್ಕಿನಿಂದ ಶುಭವಾರ್ತೆ.

ತುಲಾ:  ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ  ಸತ್ವ ಪರೀಕ್ಷೆ. ಸ್ವಂತ  ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಕೃಷಿ ಉತ್ಪನ್ನಗಳು, ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಮಧ್ಯಮಲಾಭ. ಪಿತೃಕಾರ್ಯದಲ್ಲಿ ಪಾಲುಗೊಂಡ ತೃಪ್ತಿ.

ವೃಶ್ಚಿಕ: ಸ್ವಂತದ ಆರೋಗ್ಯದ ಕಡೆಗೆ ಗಮನವಿರಲಿ. ಪರಿಶೋಧಕರು, ಸಿವಿಲ್‌ ಎಂಜಿನಿಯರರಿಗೆ ಸಮಯದ ಒತ್ತಡ. ದೀರ್ಘ‌ ಕಾಲದಿಂದ ಕಾಡುತ್ತಿದ್ದ ಸಮಸ್ಯೆಗೆ ಅನಿರೀಕ್ಷಿತ ಪರಿಹಾರ. ಕುಶಲ ಕರ್ಮಿಗಳಿಗೆ ನಿರೀಕ್ಷೆಗೆ ತಕ್ಕಂತೆ ಉತ್ತಮ ಆದಾಯ.

ಧನು: ಹೊಂದಾಣಿಕೆ ಮನೋಭಾವದ ನಿಮಗೆ ಎಲ್ಲವೂ ಸುಲಭ.  ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಗ್ರಾಹಕರಿಂದ ಪ್ರಶಂಸೆಯ ಸುರಿಮಳೆ. ವೈದ್ಯರಿಗೆ ವೃತ್ತಿಯಲ್ಲಿ ಯಶಸ್ಸಿನೊಂದಿಗೆ ಒಳ್ಳೆಯ ಹೆಸರು. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತೋಷದ ವಾತಾವರಣ.

ಮಕರ: ಪ್ರಾಪಂಚಿಕ ಕರ್ತವ್ಯಗಳ ಸೆಳೆತ. ನಿಗದಿತ ಸಮಯದಲ್ಲಿ ಕೆಲಸವನ್ನು ಮುಗಿಸುವ ಒತ್ತಡ.  ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆ. ಹಿತಶತ್ರುಗಳ ಕಾಟದಿಂದ ಅಭಿವೃದ್ಧಿ ಯೋಜನೆಗಳಿಗೆ ವಿಘ್ನ.

ಕುಂಭ: ಸಮಾಜದ ಋಣ  ತೀರಿಕೆಯಲ್ಲಿ ಮುಂಚೂಣಿಯ ಸೇವೆ. ಉದ್ಯೋಗ ಕ್ಷೇತ್ರದ ಸಾಧನೆಗೆ ಮೇಲಿನವರಿಂದ ಶ್ಲಾಘನೆ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಅಧ್ಯಾಪಕರು, ವೈದ್ಯರು ಮೊದಲಾದವರಿಗೆ ಸಮಾಜದಲ್ಲಿ  ಗೌರವ ವೃದ್ಧಿ.

ಮೀನ: ನಿಗದಿತ ಸಮಯದ ಮೊದಲೇ ಕಾರ್ಯ ಪೂರೈಸಿದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸು.ಸರಕಾರಿ ಕಚೇರಿಗಳಲ್ಲಿ ನೌಕರ ವರ್ಗದವರಿಂದ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿ. ವ್ಯಾಪಾರ ಸ್ಥಾನ ನವೀಕರಣ ಕಾರ್ಯಕ್ಕೆ ತಾತ್ಕಾಲಿಕ ತಡೆ.

Advertisement

Udayavani is now on Telegram. Click here to join our channel and stay updated with the latest news.

Next