Advertisement

Horoscope: ಚಿಂತೆಗಳನ್ನು ಮೆಟ್ಟಿ ನಿಲ್ಲುವ ಮನೋಬಲ ನಿಮ್ಮದಾಗಲಿದೆ

07:35 AM Aug 13, 2024 | Suhan S |

ಮೇಷ: ಅನಿರೀಕ್ಷಿತ ಧನಾಗಮದಿಂದ ಮನಸ್ಸಂತೋಷ. ದೇವತೋಪಾಸನೆಯಿಂದ  ವ್ವವಹಾರಸ್ಥರಿಗೆ ಕ್ಷಿಪ್ರಾನುಗ್ರಹ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಮುದ ನೀಡುವ ಸನ್ನಿವೇಶ‌.ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು.

Advertisement

ವೃಷಭ: ನೂತನ ಗೃಹ ನಿರ್ಮಾಣ, ವಾಹನ ಖರೀದಿ ಯೋಜನೆಗಳಿಗೆ ಚಾಲನೆ. ದೀರ್ಘಾವಧಿ ಹೂಡಿಕೆಗಳಲ್ಲಿ  ವಿಶೇಷ ಆಸಕ್ತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಉಳಿತಾಯ ಯೋಜನೆಗಳ  ಏಜೆಂಟರಿಗೆ ಒಳ್ಳೆಯ ದಿನ.

ಮಿಥುನ: ಚಿಂತೆಗಳನ್ನು ಮೆಟ್ಟಿ ನಿಲ್ಲುವ ಮನೋಬಲ.  ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ  ಅಭಿವೃದ್ಧಿಯ ಸಮಯ. ಗೃಹಿಣಿಯರಿಗೆ ಸ್ವಂತ ಆದಾಯ ಗಳಿಕೆಯಲ್ಲಿ ಆಸಕ್ತಿ. ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ವೃದ್ಧಿ.

ಕರ್ಕಾಟಕ: ಉಳಿತಾಯ ಯೋಜನೆಗಳಲ್ಲಿ ಆಸಕ್ತಿ.  ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ವ್ಯವಹಾರದಲ್ಲಿ ಮಂದಗತಿಯ ಪ್ರಗತಿ ವೈದ್ಯರ ಕೀರ್ತಿ ವರ್ಧನೆ.ಉದ್ಯೋಗ ಅರಸುತ್ತಿರುವವರಿಗೆ  ಸದವಕಾಶ. ಉತ್ತರ ದಿಕ್ಕಿನಿಂದ ಶುಭಸಮಾಚಾರ.

ಸಿಂಹ: ಉದ್ಯೋಗ, ವ್ಯವಹಾರಗಳ  ಅಡಚಣೆ ನಿವಾರಣೆ. ನಡೆಗಳಲ್ಲಿ ಪಾರದರ್ಶಕತೆಯುಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನದಿಂದ ಸಂತಸ.ವ್ಯವಹಾರ ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ  ಆಸಕ್ತಿ.

Advertisement

ಕನ್ಯಾ: ತೀರ್ಥಕ್ಷೇತ್ರ ದರ್ಶನದಿಂದ ಲೌಕಿಕ ದುಃಖದೂರ. ಮನೋರಂಜನೆ ಕೇಂದ್ರಿತ   ಉದ್ಯಮಗಳಿಗೆ ಪ್ರಗತಿ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ  ಪ್ರಗತಿಯ ಸೂಚನೆ. ಮಕ್ಕಳ ವಿವಾಹ ಮಾತುಕತೆಯಲ್ಲಿ ಮುನ್ನಡೆ. ಗೃಹೋಪಕರಣಗಳ ಖರೀದಿಗೆ ಧನವ್ಯಯ.

ತುಲಾ: ಉದ್ಯೋಗ ಸ್ಥಾನದಲ್ಲಿ ಅನುಕೂಲ. ಬಂಧುವರ್ಗದವರೊಡನೆ ಮನಸ್ತಾಪ ಮುಕ್ತಾಯ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ. ಮಗಳಿಗೆ ನೆಂಟಸ್ತಿಕೆ ಕುದುರಿಸಲು ಸಣ್ಣ ಪ್ರಯಾಣ.

ವೃಶ್ಚಿಕ: ಪರರ ಸುಖವನ್ನು ನೋಡಿ ಸಂತೋಷಪಡುವ ಸ್ವಭಾವ. ಮಕ್ಕಳ ಹೊಸ ಉದ್ಯಮ ಯೋಜನೆ ಸಾಕಾರ. ವಸ್ತ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರ ಕುಶಲ ಸಾಮಗ್ರಿ ತಯಾರಕರಿಗೆ ಉದ್ಯೋಗಾವಕಾಶ.

ಧನು: ಉತ್ತರದಲ್ಲಿರುವ ಆಪ್ತಮಿತ್ರನಿಂದ  ವಿಶೇಷ ಸಮಾಚಾರ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ  ಯಥೇತ್ಛ  ಆದಾಯ ಉದ್ಯೋಗ ಸ್ಥಾನದಲ್ಲಿ  ಕಾರ್ಯಗಳು ನಿರ್ವಿಘ್ನವಾಗಿ ಮುಂದುವರಿಕೆ. ಆರೋಗ್ಯದ ಬಗ್ಗೆ  ವೈದ್ಯರೊಂದಿಗೆ ಸಮಾಲೋಚನೆ.

ಮಕರ: ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಸವಾಲು. ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚಿಂತೆ. ಸಿವಿಲ್‌ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ. ಲೇವಾದೇವಿ ವ್ಯವಹಾರದಲ್ಲಿ ಕಿಂಚಿತ್‌ ಲಾಭ.

ಕುಂಭ: ನಿತ್ಯದ ವ್ಯವಹಾರಗಳಲ್ಲಿ ಕೊಂಚ ಕಿರಿಕಿರಿ.ಉದ್ಯೋಗಸ್ಥರಿಗೆ ಹಿತಶತ್ರುಗಳಿಂದ ತೊಂದರೆ.ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ.

ಮೀನ: ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು. ಸರಕಾರಿ ಕಾರ್ಯಾ ಲಯಗಳಲ್ಲಿ ಸಹಕಾರ. ಹಣಕಾಸು ವ್ಯವಹಾರ ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next