Advertisement

Horoscope: ಚಿಂತೆಯನ್ನು ಸಂಪೂರ್ಣ ದೂರವಿಟ್ಟು ಹೊಸ ಸಪ್ತಾಹಕ್ಕೆ ಪದಾರ್ಪಣ ಮಾಡಿ

07:43 AM Jan 08, 2024 | Team Udayavani |

ಮೇಷ: ಚಿಂತೆಯನ್ನು ಸಂಪೂರ್ಣ ದೂರವಿಟ್ಟು ಹೊಸ ಸಪ್ತಾಹಕ್ಕೆ ಪದಾರ್ಪಣ ಮಾಡಿ. ಸಹೋದ್ಯೋಗಿಗಳೊಡನೆ ಕೆಲಸದ ಆನಂದಾನುಭವ. ಉದ್ಯಮಿಗಳಿಗೆ ಸಪ್ತಾಹಾರಂಭದ ವಹಿವಾಟಿನಲ್ಲಿ ಸಾಮಾನ್ಯ ಲಾಭ. ಸಟ್ಟಾ ವ್ಯವಹಾರದಿಂದ ದೂರವಿರಿ.

Advertisement

ವೃಷಭ: ಕುಟುಂಬದ ಕ್ಷೇಮಕ್ಕಾಗಿ ಹಮ್ಮಿಕೊಂಡ ವಿವಿಧ ಯೋಜನೆಗಳ ಅವಲೋಕನ. ಉದ್ಯೋಗಸ್ಥರಿಂದ ಹೆಮ್ಮೆ ಪಡುವಂತಹ ಸಾಧನೆ. ಕೆಲವು ಉದ್ಯಮಗಳಿಗೆ ಅಪರಿಮಿತ ವೃದ್ಧಿಯ ಕಾಲ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಲಾಭ.

ಮಿಥುನ: ಕ್ಷುಲಕ ಕಾರಣಗಳಿಗೆ ಕೊರಗುವುದನ್ನು ಬಿಡಿ. ಉದ್ಯೋಗ ಸ್ಥಾನಕ್ಕೆ ಸಂಸ್ಥೆಯ ಪ್ರಮುಖರ ಭೇಟಿ. ಶಿಕ್ಷಿತ ಯುವಕರಿಗೆ ಕೃಷಿಯಲ್ಲಿ ಆಸಕ್ತಿ. ಉದ್ಯಮಿಗಳಿಗೆ ನೌಕರರ ಸಮಸ್ಯೆಗಳಿಂದ ಬಿಡುಗಡೆ. ಧಾರ್ಮಿಕ ಸಾಹಿತ್ಯ ಅಧ್ಯಯನ.

ಕರ್ಕಾಟಕ: ಫ‌ಲಾಪೇಕ್ಷೆಯಿಲ್ಲದೆ ಕೇವಲ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡುವ ಪ್ರವೃತ್ತಿ. ಉದ್ಯೋಗ ಸ್ಥಾನದಲ್ಲಿ ಕಾರ್ಯಗಳ ಶ್ಲಾಘನಾರ್ಹ ನಿರ್ವಹಣೆ. ಯಜಮಾನರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ. ಆರೋಗ್ಯ ಉತ್ತಮ.

ಸಿಂಹ: ಎಲ್ಲ ವಿಭಾಗಗಳ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ. ಸರಕಾರಿ ನೌಕರರಿಗೆ ದೂರಕ್ಕೆ ವರ್ಗಾವಣೆಯ ಆತಂಕ. ಗೃಹೋತ್ಪನ್ನಗಳಿಗೆ ವಾಪಕ ಬೇಡಿಕೆ. ಇತ್ತೀಚೆಗೆ ಖರೀದಿಸಿದ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು.

Advertisement

ಕನ್ಯಾ: ವಹಿಸಿಕೊಟ್ಟ ಕೆಲಸಗಳನ್ನು ಅವಧಿಗೆ ಮೊದಲೇ ಮುಗಿಸಿದ ಸಮಾಧಾನ. ಅಚ್ಚುಕಟ್ಟಾದ ಕಾರ್ಯಕ್ಕೆ ಮೇಲಿನವರಿಂದ ಪ್ರಶಂಸೆ. ಸಹಕಾರಿ ಕ್ಷೇತ್ರದ ವಿತ್ತ ಸಂಸ್ಥೆಗಳ ಜನಪ್ರಿಯತೆ ವೃದ್ಧಿ. ಮಗಳ ಮನೆಯಲ್ಲಿ ದೇವತಾ ಕಾರ್ಯ.

ತುಲಾ: ಆಯುರ್ವೇದ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ಖಾತೆ ಬದ  ಲಾವಣೆ.ನ್ಯಾಯಾಲಯದಲ್ಲಿರುವ ಆಸ್ತಿ ವ್ಯಾಜ್ಯ ತೀರ್ಮಾನ ವಿಳಂಬ. ಕೃಷ್ಯುತ್ಪನ್ನಗಳಿಂದ ಸಾಮಾನ್ಯ ಆದಾಯ. ಅವಿವಾಹಿತರಿಗೆ ಜೋಡಿ ಲಭಿಸುವ ಸಾಧ್ಯತೆ.

ವೃಶ್ಚಿಕ: ಆನಂದ ಭಾವದೊಂದಿಗೆ ದಿನಾರಂಭ. ಉದ್ಯೋಗ, ವ್ಯವಹಾರಗಳಲ್ಲಿ ವಿಶೇಷ ಸಾಧನೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗಾಗಿ ಗೌರವ. ಲೇವದೇವಿ ಹಾಗೂ ಸಟ್ಟಾ ವ್ಯವಹಾರದಿಂದ ಹಣಕಾಸು ನಷ್ಟ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಧನು: ಅಪರೂಪದಲ್ಲಿ ಭೇಟಿಯಾದ ಬಂಧುವಿನಿಂದ ವಿಶೇಷ ಮಾಹಿತಿ ಲಭ್ಯ. ಉದ್ಯೋಗಸ್ಥಾನದಲ್ಲಿ ವಿಶಿಷ್ಟ ಮಾದರಿಯಲ್ಲಿ ಕಾರ್ಯನಿರ್ವಹಣೆಗೆ. ಪಾಲುದಾರಿಕೆ ಉದ್ಯಮದಲ್ಲಿ ನಿಧಾನ ಪ್ರಗತಿ. ಕೃಷಿ ಆದಾಯ ತೃಪ್ತಿಕರ.

ಮಕರ: ಕ್ಷಿಪ್ರಗತಿಯ ಕಾರ್ಯದಿಂದ ಶೀಘ್ರ ಫ‌ಲ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ನಿರಾಳ ವಾತಾವರಣ. ವೃತ್ತಿಪರರಿಗೆ ನಿರ್ದಿಷ್ಟ ಅವಧಿಯಲ್ಲಿ ಗುರಿ ಮುಟ್ಟಿದ ತೃಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸಾಪ್ತಾಹಿಕ ವಿರಾಮದ ಬಳಿಕ ತುರುಸಿನ ಕಾರ್ಯಕ್ರಮಗಳು. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ.ಉದ್ಯಮದ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ. ಪೂರಕ ವ್ಯವಸ್ಥೆಗಳಿಗಾಗಿ ಧನವ್ಯಯ. ಗೃಹೋತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ. ಸಂಸಾರದಲ್ಲಿ ಎಲ್ಲರ ನಡುವೆ ಪ್ರೀತಿ, ವಾತ್ಸಲ್ಯ, ಸಾಮರಸ್ಯ ವೃದ್ಧಿ

ಮೀನ: ವಿರಾಮದ ಬಳಿಕ ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ. ವಿಸ್ತೃತ ವ್ಯಾಪ್ತಿಯಲ್ಲಿ ಕಾರ್ಯಾಚರಣೆ. ಸರಕಾರಿ ನೌಕರರ ಪೂರ್ಣ ಸಹಕಾರ. ಧಾರ್ಮಿಕ ರಂಗದಲ್ಲಿ ಜವಾಬ್ದಾರಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿಹೊಸ ಪ್ರಯೋಗಗಳು ಯಶಸ್ವಿ. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಸಂಸಾರದಲ್ಲಿ ನೆಮ್ಮದಿಯ ಅನುಭವ. ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next