Advertisement

Horoscope: ಉದ್ಯೋಗದಲ್ಲಿ ಸುಲಭವಾಗಿ ಸವಾಲುಗಳ ನಿರ್ವಹಣೆ

07:00 PM Dec 08, 2023 | Team Udayavani |

ಮೇಷ: ನಿರೀಕ್ಷೆಯ ಪ್ರಕಾರ  ಸರಿ ಹೊಂದಿರುವ ಸಮಗ್ರ ಪರಿಸ್ಥಿತಿ. ಉದ್ಯೋಗದಲ್ಲಿ  ಮತ್ತೆ ಗೌರವದ ಸ್ಥಾನ ಪ್ರಾಪ್ತಿ. ಸರಕಾರಿ ನೌಕರರಿಗೆ  ನಿಶ್ಚಿಂತೆಯ ವಾತಾವರಣ. ಉದ್ಯಮದ ನೌಕರರಿಗೆ ಪ್ರೋತ್ಸಾಹಕ ಧನ ಲಭಿಸಿ  ಇಮ್ಮಡಿ ಉತ್ಸಾಹ. ಬಂಧುವರ್ಗದಲ್ಲಿ ವಿವಾಹದ  ನಿಶ್ಚಯ.

Advertisement

ವೃಷಭ: ಶಿಸ್ತುಬದ್ಧ ನಡೆಯಿಂದ ಯಶಸ್ಸು ಶತಃಸಿದ್ಧ. ಸರಕಾರಿ ಅಧಿಕಾರಿಗಳಿಗೆ ಬಯಸಿದ ಸ್ಥಾನಕ್ಕೆ ವರ್ಗಾವಣೆ.  ಕೃಷಿಕ್ಷೇತ್ರದಲ್ಲಿ ಬೆಳೆ ಪರಿಸ್ಥಿತಿ ಸುಧಾರಣೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.

ಮಿಥುನ: ಈ ರಾಶಿಯ ಎಲ್ಲರಿಗೂ ದೈಹಿಕ ಆರೋಗ್ಯ ಉತ್ತಮ. ಉದ್ಯಮಿಗಳಿಗೆ ಸಮಾ ಧಾನದ  ಸಮಾಚಾರ. ಸರಕಾರಿ ನೌಕರರಿಗೆ ಅನುಕೂಲ ಸ್ಥಳಕ್ಕೆ  ವರ್ಗಾವಣೆ.  ನೂತನ ವಾಹನ ಖರೀದಿಗೆ ಚಿಂತನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ.

ಕರ್ಕಾಟಕ: ಕುಗ್ಗದ ಮಹತ್ವಾಕಾಂಕ್ಷೆಯೊಂದಿಗೆ ಕಾರ್ಯರಂಗ ಪ್ರವೇಶ.  ಉದ್ಯೋಗದಲ್ಲಿ ಗೌರವದ ಸ್ಥಾನದಲ್ಲಿ ಮುಂದುವರಿಕೆ. ಉದ್ಯಮದ   ಕಾರ್ಯವ್ಯಾಪ್ತಿ ವಿಸ್ತರಣೆಯಿಂದ ಲಾಭ. ಮಕ್ಕಳ ಅನುಕೂಲಕ್ಕೋಸ್ಕರ ವೆಚ್ಚ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ.

ಸಿಂಹ:  ಪುನರಾರಂಭವಾದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಸ್ವಂತ ಉದ್ಯಮದ ಉತ್ಪನ್ನಗಳ ಮಾರಾಟ ಜಾಲ ವಿಸ್ತರಣೆ. ಉದ್ಯೋಗಸ್ಥರಿಗೆ  ಆಯಕಟ್ಟಿನ ಸ್ಥಾನದಲ್ಲಿ ಜವಾಬ್ದಾರಿ. ಯಂತ್ರಗಳ ಬಿಡಿಭಾಗ ವ್ಯಾಪಾರಿಗಳಿಗೆ ನಿರೀಕ್ಷಿತ  ವ್ಯಾಪಾರ ವೃದ್ಧಿ. ಸಿವಿಲ್‌ ಎಂಜಿನಿಯರ್‌ಗೆ  ಕೆಲಸ ಮುಗಿಸುವ ಒತ್ತಡ.

Advertisement

ಕನ್ಯಾ: ಎದುರಾದ  ತೊಂದರೆಗಳನ್ನು ಬದಿಗೆ ಸರಿಸಿ ಸಾಗುವ ಛಾತಿ. ಉದ್ಯೋಗದಲ್ಲಿ ನಿತ್ಯದ ಕೆಲಸಗಳೊಂದಿಗೆ ಹೆಚ್ಚುವರಿ ವಿಭಾಗಗಳ ಹೊಣೆಗಾರಿಕೆ.ಸ್ವಂತ ವ್ಯವಹಾರದ ಪ್ರಗತಿ ಅಬಾಧಿತ. ವ್ಯವಹಾರದ ಸಂಬಂಧ ಸ್ವಲ್ಪ ದೂರಕ್ಕೆ ಸಣ್ಣ ಪ್ರವಾಸದ ಸಾಧ್ಯತೆ.

ತುಲಾ: ಅಸಾಧ್ಯವೆಂದು  ಎಣಿಸಿದ್ದು  ಭಗವದನು ಗ್ರಹದಿಂದ ಸಾಧ್ಯವಾದ ಅನುಭವ. ಉದ್ಯೋಗ ಸ್ಥಾನದಲ್ಲಿ ಕೊಂಚ ಏರುಪೇರು ಸಂಭವ. ಹಿರಿಯರ ಕ್ಷೇಮ ಸಮಾಚಾರ ತಿಳಿ ಉದ್ಯೋಗ ಧಾನ.  ಅನಿರೀಕ್ಷಿತವಾಗಿ ಭೇಟಿಯಾದ ಬಾಲ್ಯದ ಒಡನಾಡಿಯೊಂದಿಗೆ ಹತ್ತಿರದ ದೇವಮಂದಿರ ಸಂದರ್ಶನ.

ವೃಶ್ಚಿಕ: ಅನಿರೀಕ್ಷಿತವಾಗಿ  ನಡೆದ ಒಳ್ಳೆಯ  ಘಟನೆಗಳು. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಪ್ರಶಂಸೆ. ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ  ಆದಾಯ ವೃದ್ಧಿ. ಕೃಷಿಕ್ಷೇತ್ರಕ್ಕೆ ಕಾಲಿಡಲು ಕಿರಿಯರಿಗೆ ಸಹಾಯ. ಸಾಮಾಜಿಕ ಕಾರ್ಯಗಳಲ್ಲಿ ಪಾಲುಗೊಳ್ಳುವ ಆಸಕ್ತಿ.

ಧನು: ಚಾಲನೆಯಲ್ಲಿರುವ ಕ್ರಿಯಾಶೀಲತೆ ಯಿಂದಾಗಿ ಸಣ್ಣಪುಟ್ಟ ಹಿನ್ನಡೆಗಳು ಕಂಗೆಡಿಸಲಾರವು. ಉದ್ಯೋಗದಲ್ಲಿ  ಸುಲಭವಾಗಿ ಸವಾಲುಗಳ ನಿರ್ವಹಣೆ. ಸಮಾಜೋದ್ಧಾರ, ಪರಿಸರ ರಕ್ಷಣೆಯ  ಕಾರ್ಯಗಳಲ್ಲಿ ಆಸಕ್ತಿ. ದೇವತಾನುಗ್ರಹ ಉತ್ತಮ.

ಮಕರ: ಬೆಂಬಿಡದ ಹಿತಶತ್ರುಗಳ ಬಾಧೆ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ಮಕ್ಕಳಿಗೆ ಶಿಕ್ಷಣದಲ್ಲಿ ಹಾಗೂ ಪಾಠೇತರ ಚಟುವಟಿಕೆಗಳಲ್ಲಿ ಒಳ್ಳೆಯ ಹೆಸರು. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಆಪ್ತ ಸಲಹೆಯಿಂದ ವ್ಯಕ್ತಿತ್ವ ಬೆಳವಣಿಗೆಗೆ ಸಾಧನೆ.

ಕುಂಭ: ಕೆಲಸದಲ್ಲೇ ಆನಂದ ತರುವ ನಿರಂತರ ಕ್ರಿಯಾಶೀಲತೆ. ದಿನಕ್ಕೊಂದರಂತೆ ಹೊಸ ಹೊಣೆಗಾರಿಕೆಗಳು. ಸ್ವಂತ ಉದ್ಯಮದಲ್ಲಿ  ಹೊಸ ವಿಭಾಗ ಆರಂಭ.ಹತ್ತಿರದ ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನ.

ಮೀನ: ಸರ್ವತೋಮುಖ  ಪ್ರಗತಿಯ  ವೇಗ ವರ್ಧನೆ.ವೃತ್ತಿಬಾಂಧವರ ಸಕ್ರಿಯ ಸಹಕಾರ. ಸರಕಾರಿ ನೌಕರರ ಸಕಾಲಿಕ ಸ್ಪಂದನದಿಂದ ಸುಲಭವಾದ ಕೆಲಸಗಳು. ಸಾರ್ವಜನಿಕರ ಮೆಚ್ಚುಗೆ.ಸಾಮಾಜಿಕ ಕಾರ್ಯಗಳಿಂದ ಕೀರ್ತಿ ವರ್ಧನೆ.ಕುಟುಂಬದ ಹಿರಿಯರಿಂದ ಅಭಿಮಾನ ಪ್ರಕಟನೆ. ದಾಂಪತ್ಯ ಜೀವನ ಸುಖಮಯ, ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.ಗುರುಸ್ಥಾನಕ್ಕೆ ಭೇಟಿ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next