Advertisement

Horoscope Today: ಈ ರಾಶಿಯವರಿಗಿಂದು ಗೌರವ ಹುದ್ದೆಯೊಂದನ್ನು ನಿರ್ವಹಿಸಲು ಆಹ್ವಾನ ಬರಲಿದೆ

07:45 AM Oct 15, 2023 | Suhan S |

ಮೇಷ: ಸಕಾರಾತ್ಮಕ  ಶಕ್ತಿಗಳು ವಿಜೃಂಭಿಸುವ ಸಮಯ ಆರಂಭ. ಮನೆಯಲ್ಲಿ ಸಂಭ್ರಮದ ವಾತಾವರಣ. ಹತ್ತಿರದ ದೇವಾಲಯಕ್ಕೆ ಭೇಟಿ.ಬಂಧುಗಳ ಆಗಮನ. ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳು, ವಸ್ತ್ರದ ವ್ಯಾಪಾರಿಗಳು ಮುಂತಾದವರಿಗೆ ನಿರೀಕ್ಷೆ ಮೀರಿದ ಲಾಭ.

Advertisement

ವೃಷಭ: ಯಶಸ್ಸಿನತ್ತ ಕಾರ್ಯ ಗಳ ಯಾನ  ಆರಂಭ. ಬಿರುಸಿನ ಚಟುವಟಿಕೆಗಳಿಗೆ ವಿರಾಮ. ಭವಿಷ್ಯದ ಯೋಜನೆಗಳ ರೂಪುರೇಖೆ ತಯಾರಿ. ಮನೆಯಲ್ಲಿ ದೇವತಾ ಕಾರ್ಯ. ನೆಂಟರಿಷ್ಟರ ಆಗಮನ. ವಿರಾಮದಲ್ಲಿ ಬಂದ ತುರ್ತು ಕರೆಯಿಂದ ನೆಮ್ಮದಿ ಭಂಗ.

ಮಿಥುನ: ದೇವತಾರ್ಚನೆ, ಅಧ್ಯಾತ್ಮ ಚಿಂತನೆ,  ಸತ್ಸಂಗಗಳಲ್ಲಿ ದಿನ ಕಳೆಯುವಿರಿ. ಹಳೆಯ ಗೆಳೆಯರ ಸಂಪರ್ಕ ಪುನರಾರಂಭ. ಗೌರವ ಹುದ್ದೆಯೊಂದನ್ನು ನಿರ್ವಹಿಸಲು ಆಹ್ವಾನ. ಸರಕಾರಿ ನೌಕರರಿಗೆ ಹರ್ಷ. ಸಾಹಿತ್ಯೋಪಾಸಕರಿಗೆ  ಮನಸ್ಸಂತೃಪ್ತಿ.

ಕರ್ಕಾಟಕ: ಸಕಾರಾತ್ಮಕ  ಪ್ರೇರಣೆ ಯಿಂದ  ದೈವ ಚಿಂತನೆಯಲ್ಲಿ ಮನಸ್ಸು ಮಗ್ನ. ಪರಿಸರದ ದೈವಿಕ ವಾತಾವರಣದ ಪ್ರಭಾವದಿಂದ ಸತ್ಕಾರ್ಯಗಳಲ್ಲಿ ಭಾಗಿಯಾಗುವಿರಿ. ಹಿರಿಯರಲ್ಲಿ ತುಂಬಿದ ಜೀವನೋತ್ಸಾಹ. ದೇವತಾ ಕಾರ್ಯಗಳಲ್ಲಿ ಮಕ್ಕಳ ಸಹಭಾಗಿತ್ವ.

ಸಿಂಹ: ಭವಿಷ್ಯದ  ಮುಖ್ಯ ಕಾರ್ಯಗಳ ಅವಲೋಕನ ಆರಂಭ. ದೇವತಾ ಕಾರ್ಯದಲ್ಲಿ ಭಾಗಿಯಾಗುವುದರೊಂದಿಗೆ  ಸಾಮಾಜಿಕ ಚಟುವಟಿಕೆಗಳ ಸೆಳೆತ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿಗಳ ಮಾರಾಟಗಾರರಿಗೆ  ಬಿಡುವಿಲ್ಲದಷ್ಟು  ವ್ಯಾಪಾರ.

Advertisement

ಕನ್ಯಾ: ಸಂಗೀತ, ಗಾಯನ ಕಲಿಕೆಯಲ್ಲಿ ಆಸಕ್ತಿ. ಸದ್ಗ್ರಂಥ ವಾಚನ, ಮಹಾಪುರುಷರ ಜೀವನ ಚರಿತ್ರೆ ಪಠಣದಲ್ಲಿ ಕಾಲಯಾಪ. ಆಧ್ಯಾತ್ಮಿಕ ವ್ಯಕ್ತಿಯೊಬ್ಬರ ಭೇಟಿ. ಆಸ್ಪತ್ರೆ, ಅನಾಥಾಶ್ರಮಗಳಿಗೆ ಸಂದರ್ಶನ. ಧಾರ್ಮಿಕ ಸಂಸ್ಥೆಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ.

ತುಲಾ: ಹೆಸರಿಗೆ ತಕ್ಕಂತೆ ಮನಸ್ಸಿನಲ್ಲಿ ಏರುಪೇರುಗಳಾಗುತ್ತಿದ್ದರೂ  ಗಟ್ಟಿ ತೀರ್ಮಾನ ಹಾಗೂ ಕ್ರಮಗಳು ಸುಲಭವಾಗುತ್ತವೆ. ಅಂತರ್ವಾಣಿಯ ಸಲಹೆ ಪಾಲನೆಯಿಂದ ಯಶಸ್ಸು. ಸಮಯಕ್ಕೆ ಸರಿಯಾಗಿ ಹಿರಿಯರಿಂದ ಸೂಕ್ತ ಸಲಹೆ ಲಭ್ಯ.

ವೃಶ್ಚಿಕ: ದೇವೀ ಉಪಾಸನೆಯಿಂದ ಕಷ್ಟಗಳು ಪರಿಹಾರ. ಹಿರಿಯರ ಆರೋಗ್ಯ ಉತ್ತಮ. ಹತ್ತಿರದ ಆರಾಧನಾ ಕೇಂದ್ರಕ್ಕೆ ಭೇಟಿ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ ಯೋಜನೆ. ಕುಟುಂಬದಲ್ಲಿ  ವಿವಾಹ ಮಾತುಕತೆ. ಉದ್ಯೋಗ ಅರಸುವವರಿಗೆ  ಹಿತೈಷಿಯ ಮಾರ್ಗದರ್ಶನ.

ಧನು: ಕೃಷಿ ಆಸಕ್ತರಿಗೆ ಅಪೂರ್ವ ಅವಕಾಶ. ಹೊಸ ಪ್ರಯೋಗ ಗಳಲ್ಲಿ ಯಶಸ್ಸು. ಹೈನುಗಾರಿಕೆ, ಜೇನು ಸಾಕಣೆಯವರಿಗೆ ಪ್ರೋತ್ಸಾಹಕರ ವಾತಾವರಣ. ದೇವತಾರ್ಚನೆ ಮಾಡುವವರಿಗೆ  ಪರಿಸರದ ಪರೀಕ್ಷೆ. ಜಪ, ಧ್ಯಾನ, ಸತ್ಸಂಗ, ಭಜನೆಗಳಲ್ಲಿ ಆಸಕ್ತಿ.

ಮಕರ: ತಳಮಳಕ್ಕೆ ವಿದಾಯ ಕೋರುವ ಸಮಯ.ಸಕಾ ರಾತ್ಮಕ ಶಕ್ತಿಗಳ ವಿಜೃಂಭಣೆ. ಇಷ್ಟ ದೇವರಿಂದ  ರಕ್ಷಣೆ.  ಉದ್ಯೋಗ ಬದಲಾವಣೆಗೆ ಚಿಂತನೆ. ನೂತನ ವಸ್ತ್ರ ಖರೀದಿ. ಶೋಕಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಸರಕಾರಿ ನೌಕರರಿಗೆ ನಿಶ್ಚಿಂತೆಯ ದಿನ.

ಕುಂಭ: ಶುಭಕಾಲ ಆರಂಭ. ಸತ್ಕಾ ರ್ಯಗಳಿಗೆ ಪ್ರೇರಣೆ. ಧಾರ್ಮಿಕ ಕೇಂದ್ರದ ಸೇವಾ ಚಟುವಟಿಕೆಗಳ ಮುಂಚೂಣಿಯಲ್ಲಿ ಕಾರ್ಯವೆಸಗುವ ಅವಕಾಶ ಲಭ್ಯ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಪೂಜೆ, ಭಜನೆ, ಸತ್ಸಂಗದಲ್ಲಿ ಮಗ್ನರು.

ಮೀನ: ಕೆಲವು ದಿನಗಳಿಂದ ಕಾಡುತ್ತಿದ್ದ ತಳಮಳ ದೂರ. ಹೊಸ ಯೋಜನೆಗಳ ಕಾರ್ಯಾ ನುಷ್ಠಾನಕ್ಕೆ ಚಿಂತನೆ. ಉದ್ಯೋಗ ಕ್ಷೇತ್ರದ ಒಡನಾಡಿಗಳಿಂದ ಬೆಂಬಲ. ಅಯಾಚಿತ ಸಹಾಯ ಲಭ್ಯ. ಗುರುಸನ್ನಿಧಿಗೆ ಭೇಟಿ ಸಂಭವ. ದೇವತಾ ಸಾನ್ನಿಧ್ಯದಲ್ಲಿ ಹಬ್ಬದ ಸಂಭ್ರಮ.

Advertisement

Udayavani is now on Telegram. Click here to join our channel and stay updated with the latest news.

Next