Advertisement

Horoscope Today: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭದ ಯೋಗವಿದೆ

07:37 AM Sep 14, 2023 | Suhan S |

ಮೇಷ: ಕಾರ್ಯತತ್ಪರರಾಗಿರುವ ನಿಮಗೆ ಸಮಯದ ಹೊಂದಾಣಿಕೆ ಸುಲಭವಾಗದು. ಆರೋಗ್ಯ ಒಟ್ಟಿನಲ್ಲಿ ಚೆನ್ನಾಗಿದ್ದರೂ ಹಲವು ಕೆಲಸಗಳ ಒತ್ತಡದಿಂದ ದೇಹಾಲಸ್ಯ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಗೃಹಿಣಿಯರ ಆರೋಗ್ಯ ಉತ್ತಮ.

Advertisement

ವೃಷಭ: ತರಾತುರಿಯ ನಿರ್ಧಾರಗಳಿಂದ ಎಡವಟ್ಟಿನಲ್ಲಿ ಸಿಲುಕದಂತೆ ಎಚ್ಚರಿಕೆ ವಹಿಸಿರಿ. ಉದ್ಯೋಗಸ್ಥರಿಂದ ಜವಾಬ್ದಾರಿಗಳ ಯಶಸ್ವೀ ನಿರ್ವಹಣೆ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿಗಳನ್ನು ಎದುರಿಸಲು ಯೋಗ್ಯ ಕಾರ್ಯತಂತ್ರಗಳ ತಯಾರಿ.

ಮಿಥುನ: ಮುಂದೇನು ಮಾಡಲೆಂಬ ಚಿಂತೆಯಲ್ಲಿ ಮುಳುಗದೆ ಕಾರ್ಯದಲ್ಲಿ ಮುಂದುವರಿಯಿರಿ. ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ಉದ್ಯೋಗದಲ್ಲಿ ಸಿಕ್ಕಿದ ಅವಕಾಶಗಳಿಂದ ತೃಪ್ತರಾಗಿರಿ.

ಕರ್ಕಾಟಕ: ಗೃಹಸಂಬಂಧಿ ವ್ಯವಹಾರಗಳಲ್ಲಿ ಸಮಯ ವ್ಯಯ. ಸಂಸಾರದಲ್ಲಿ ಎಲ್ಲರೂ ಕ್ಷೇಮ. ಹೊಸ ಕಾರ್ಯಕ್ಷೇತ್ರಗಳ ಅನ್ವೇಷಣೆ. ಉದ್ಯೋಗಸ್ಥರಿಗೆ ಸಾಮಾನ್ಯವಾಗಿ ಸಮಾಧಾನದ ಸ್ಥಿತಿ. ಕೃಷಿ ಕಾರ್ಯನಿರತರಿಗೆ ಉತ್ಸಾಹದ ಸನ್ನಿವೇಶ.

ಸಿಂಹ: ಉದ್ಯೋಗ, ವ್ಯವಹಾರದಲ್ಲಿ ನಿರೀಕ್ಷೆ ಮೀರಿದ ಯಶಸ್ಸು. ಸರ್ವತ್ರ ಆದರಕ್ಕೆ ಪಾತ್ರ ರಾಗುವಿರಿ.ಅನಿರೀಕ್ಷಿತ ಧನಲಾಭ ಯೋಗವಿದೆ. ಸಂಸಾರ ದಲ್ಲಿ ವಿವಾಹ ಪ್ರಯತ್ನ ಮುನ್ನಡೆ. ಹಳೆಯ ಗೆಳೆಯ ರೊಬ್ಬರಿಂದ ವ್ಯವಹಾರ ಸಂಬಂಧಿ ಉಪಯುಕ್ತ ಸಲಹೆ.

Advertisement

ಕನ್ಯಾ: ಶೀಘ್ರ ಕೋಪದ ಸ್ವಭಾವವನ್ನು ತಿದ್ದಿಕೊಳ್ಳುವುದು ಏಳಿಗೆಯ ದೃಷ್ಟಿಯಿಂದ ಅನಿವಾರ್ಯ. ಬದುಕಿನಲ್ಲಿ ಹೊಸ ತಿರುವು ತೆರೆದುಕೊಳ್ಳುವ ಸೂಚನೆ. ಗಣ್ಯರ ಪರಿಚಯದಿಂದ ಉದ್ಯೋಗ, ವ್ಯವಹಾರಕ್ಕೆ ಪ್ರಯೋಜನ. ಹಿರಿಯರ ಆರೋಗ್ಯದ ಕಡೆಗೆ ಲಕ್ಷ್ಯವಿರಲಿ.

ತುಲಾ: ಪಂಚಮ ಶನಿಯ ಪ್ರಭಾವದಿಂದ ಆರೋಗ್ಯ ಸಮಸ್ಯೆ ತಲೆದೋರಿದರೂ ಶಿವ, ವಿಷ್ಣು, ಆಂಜನೇಯರ ಪ್ರಾರ್ಥನೆಯಿಂದ ಸಮಸ್ಯೆ ದೂರ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಅಬಾಧಿತ. ವ್ಯವಹಾರ ಕ್ಷೇತ್ರದಲ್ಲಿ ಮಂದಗತಿಯ ಪ್ರಗತಿ.

ವೃಶ್ಚಿಕ: ಗೃಹಿಣಿಯರಿಗೆ ವಸ್ತ್ರ, ಆಭರಣ ಖರೀದಿ ಯೋಗ. ಸರಕಾರಿ ಉದ್ಯೋಗಸ್ಥರಿಗೆ ವರ್ಗಾವಣೆ ಸಂಭವ. ಆಪ್ತ ಮಿತ್ರರ ಭೇಟಿಯ ಸಾಧ್ಯತೆ. ದೂರದಲ್ಲಿರುವ ಬಂಧುವಿನ ಆಗಮನ. ಸ್ವಂತ ಉದ್ಯೋಗಸ್ಥರಿಗೆ ವ್ಯವಹಾರದಲ್ಲಿ ನಿಧಾನ.

ಧನು: ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿರ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರಿಂದಲೂ ಒಳ್ಳೆಯ ಸಹಕಾರ. ಅನಿರೀಕ್ಷಿತವಾಗಿ ಒದಗಿ ಬರುವ ಸಹಾಯದಿಂದಾಗಿ ಸಮಸ್ಯೆ ದೂರ. ಕಟ್ಟಡ ನಿರ್ಮಾಣ ಗುತ್ತಿಗೆದಾರರು, ಸಿವಿಲ್‌ ಎಂಜಿನಿಯರ್‌, ಲೆಕ್ಕ ಪರಿಶೋಧಕರಿಗೆ ಚಿಂತೆ.

ಮಕರ: ಏಳೂವರೆ ಶನಿಯ ಮಹಿಮೆಯಿಂದ ಆಗಾಗ ಕಿರಿಕಿರಿಯಾದರೂ ಗಂಭೀರ ಸಮಸ್ಯೆ ಗಳು ದೂರ. ದೇಹಾರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುವ ಆವಶ್ಯಕತೆಯಿದೆ. ಉದ್ಯೋಗ ರಂಗದಲ್ಲಿ ಹೆಚ್ಚಿನ ಕಾರ್ಯಭಾರಕ್ಕೆ ಗುರಿಯಾಗುವುದು ಅನಿವಾರ್ಯ.

ಕುಂಭ: ಸಮಾಜಮುಖೀ ಜೀವನಕ್ಕೆ ಹೆಚ್ಚು ಒತ್ತು. ರಾಜಕಾರಣಿಗಳಿಂದ ಜನೋಪಕಾರಕ್ಕೆ ಅವಕಾಶ. ಉದ್ಯೋಗಸ್ಥರ ಪಾಲಿಗೆ ಹೊಸ ಜವಾಬ್ದಾರಿಗಳು ಒದಗಲಿವೆ. ಅವಿವಾಹಿತರ ವಧು-ವರಾನ್ವೇಷಣೆಯಲ್ಲಿ ಪ್ರಗತಿ.

ಮೀನ: ಬಹುಮಟ್ಟಿಗೆ ಸಂತೃಪ್ತಿಯ ದಿನ. ಮನೆಯಲ್ಲಿ ಮಕ್ಕಳಿಂದ ಆನಂದದ ಸನ್ನಿವೇಶ. ಹಿರಿಯರಿಗೆ ಸಮಾಧಾನ. ಗೃಹಿಣಿಯರಿಗೆ ಉಲ್ಲಾಸ ಹಾಗೂ ಪತಿಯ ವ್ಯವಹಾರದಲ್ಲಿ ಸಕ್ರಿಯ ಪಾಲುದಾರಿಕೆ. ಸಂಸಾರದ ಆದಾಯ ಗಣನೀಯ ವೃದ್ಧಿ. ಬಂಧುಗಳ ಅಕಸ್ಮಾತ್‌ ಆಗಮನದಿಂದ ಹರ್ಷ. ಹತ್ತಿರದ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ.

Advertisement

Udayavani is now on Telegram. Click here to join our channel and stay updated with the latest news.

Next