Advertisement

Horoscope Today: ಈ ರಾಶಿ ಅವರಿಗಿಂದು ವಧು-ವರಾನ್ವೇಷಿಗಳಿಗೆ ಯೋಗ್ಯ ಜೋಡಿ ಲಭಿಸುವ ಸಾಧ್ಯತೆ

07:34 AM Sep 13, 2023 | Suhan S |

ಮೇಷ: ಆರೋಗ್ಯ ಉತ್ತಮ.ಉದ್ಯೋಗದಲ್ಲಿ ಸ್ಥಿರವಾಗುವ ಯೋಗವಿದೆ. ದೀರ್ಘ‌ ಕಾಲದ ಯೋಜನೆಗಳ ಕುರಿತು ಗುರುಹಿರಿಯರೊಂದಿಗೆ ಸಮಾ ಲೋಚನೆ. ಹಿತೈಷಿಗಳಿಂದ  ಅಪೇಕ್ಷಿತ ನೆರವು ಸಕಾಲದಲ್ಲಿ ಕೈಸೇರಿ ಸಮಾಧಾನ.ಹೊಸ ವಾಹನ ಖರೀದಿಗೆ ಸಿದ್ಧತೆ.

Advertisement

ವೃಷಭ: ಕ್ರಮಬದ್ಧ ಯೋಜನೆಗಳ ಫ‌ಲವು ಕೈಗೆ ಬರುವ ಸಮಯ.ಹಣಕಾಸು ಪರಿಸ್ಥಿತಿ ಗಣನೀಯ ಸುಧಾರಣೆ. ಉದ್ಯೋಗಸ್ಥರಿಗೆ ಪದೋನ್ನತಿ, ವೇತನ ಏರಿಕೆ ಸಂಭವ. ಹಿತಶತ್ರುಗಳ ವಿಷಯದಲ್ಲಿ ಎಚ್ಚರವಿರಲಿ. ಹಿರಿಯ ಹಿತೈಷಿಯಿಂದ ಉಪಯುಕ್ತ ಸಲಹೆ.

ಮಿಥುನ: ದೇವತಾರಾಧನೆ ಯಲ್ಲಿ  ಆಸಕ್ತಿ.  ಪ್ರಾಪಂಚಿಕ ಚಿಂತೆಗಳಿಂದ ಮನಸ್ಸನ್ನು ಮುಕ್ತ ಗೊಳಿಸಿಕೊಳ್ಳುವ ಪ್ರಯತ್ನ. ಉದ್ಯೋಗಸ್ಥರಿಗೆ  ಹೆಚ್ಚು ಕಾರ್ಯಾವಕಾಶ. ನಿರ್ಮಾಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ. ಆಪ್ತರಿಂದ ಸಕಾಲದಲ್ಲಿ ನೆರವು ಲಭ್ಯ.

ಕರ್ಕಾಟಕ: ಕ್ಷಮಾಗುಣದಿಂದ ಮನಸ್ಸಿಗೆ ಸಮಾಧಾನ. ವಿಘ್ನೇಶ್ವರನ ಉಪಾಸನೆಯಿಂದ ಸಮಸ್ಯೆ ದೂರ. ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿ. ವಸ್ತ್ರೋದ್ಯಮಿಗಳಿಗೆ, ಸಿದ್ಧ  ಉಡುಪು   ಮಾರಾಟಗಾರರಿಗೆ  ಲಾಭ. ದೂರದಲ್ಲಿರುವ ಬಂಧುವರ್ಗದಿಂದ ಶುಭ ಸಮಾಚಾರ.

ಸಿಂಹ: ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಹೊಸ ಜವಾಬ್ದಾರಿಗಳು ಮತ್ತು ಸವಾಲುಗಳು ಎದುರಾಗಲಿವೆ. ಮನೆಯಲ್ಲಿ ಸಮಾಧಾನದ ವಾತಾವರಣ. ಅಪರೂಪದ ಅತಿಥಿಗಳ ಆಗಮನ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಕೂಡಿ ಬರುವ ಸಾಧ್ಯತೆ.

Advertisement

ಕನ್ಯಾ: ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ನೆಮ್ಮದಿ. ಆಭರಣ ತಯಾರಿ ವೃತ್ತಿಯವರಿಗೆ ವಿಶೇಷ ಅವಕಾಶಗಳು ಒದಗಲಿವೆ. ಲೆಕ್ಕ ಪರಿಶೋಧಕರು, ನ್ಯಾಯವಾದಿಗಳು, ವೈದ್ಯರು ಎಂಜಿನಿಯರ್‌ ಮೊದಲಾದ ವೃತ್ತಿಪರರಿಗೆ ಕಿರಿಕಿರಿ. ಹಿರಿಯರ, ಗೃಹಿಣಿಯರ ಹಣಕಾಸು ಸುಧಾರಣೆ.

ತುಲಾ: ದೂರ ಪ್ರಯಾಣ ಸಂಭವ. ಆರೋಗ್ಯದಲ್ಲಿ ಸುಧಾರಣೆ. ನೆಂಟರಿಷ್ಟರ ಭೇಟಿಯಿಂದ ಮನಸ್ಸು ನಿರಾಳ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ. ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆಯಿಂದ ಜನಗೌರವ ಪ್ರಾಪ್ತಿ. ಪಶುಪಾಲನೆಯಲ್ಲಿ ಆಸಕ್ತಿಯುಳ್ಳವರಿಗೆ ಶುಭಫ‌ಲ.

ವೃಶ್ಚಿಕ: ಅನ್ಯರ ಸಾಧನೆಯನ್ನು ನೋಡಿ ಕುರುಬದಿರಿ. ಮನೆ ಮಂದಿಯಿಂದ ಉತ್ತಮ ಸಹಕಾರ. ವ್ಯವಹಾರ ಕ್ಷೇತ್ರದಲ್ಲಿ ಏಳಿಗೆ. ಉದ್ಯೋಗಾ ಕಾಂಕ್ಷಿಗಳ ಮನವಿಗೆ ಆಸಕ್ತ ವಲಯಗಳಿಂದ  ಅನುಕೂಲಕರ ಸ್ಪಂದನೆ. ವಧು-ವರಾನ್ವೇಷಿಗಳಿಗೆ  ಯೋಗ್ಯ ಜೋಡಿ ಲಭಿಸುವ ಸಾಧ್ಯತೆ.

ಧನು: ಶ್ರೀಗುರುದೇವತಾನುಗ್ರಹ ದಿಂದ ಕಾರ್ಯಸಿದ್ಧಿ. ಬಂಧು ಮಿತ್ರವರ್ಗದವರಿಂದ ಉತ್ತಮ ಸಹಕಾರ. ಉದ್ಯೋಗದಲ್ಲಿ ಪ್ರಗತಿ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳು ನಿಮ್ಮದಾಗಲಿವೆ. ತೋಟಗಾರಿಕೆಯಲ್ಲಿ ಆಸಕ್ತಿ. ಹೂವು, ಹಣ್ಣು ವ್ಯಾಪಾರಿಗಳಿಗೆ   ಮಧ್ಯಮ ಲಾಭ.

ಮಕರ: ಭವಿಷ್ಯದ ಕುರಿತು ಅತಿಯಾದ ಚಿಂತೆಯಿಂದ  ಆರೋಗ್ಯಕ್ಕೆ ಹಾನಿ. ಮನೆ ಮಂದಿ ಯೆಲ್ಲರಿಂದ ಉತ್ತಮ ಸಹಕಾರ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಗೆ ಮೆಚ್ಚುಗೆ. ಕಾರ್ಯನಿಮಿತ್ತ ಪಕ್ಕದ ಪ್ರದೇಶಕ್ಕೆ ಭೇಟಿ ಸಂಭವ.

ಕುಂಭ: ನಿರಂತರ ಚಟುವಟಿಕೆಗಳ ದಿನ. ಮನೆಗೆ ದೂರದ ಬಂಧುಗಳ ಆಗಮನ. ಉದ್ಯೋಗ ಕ್ಷೇತ್ರದಲ್ಲಿ ಹೊಸ  ಜವಾಬ್ದಾರಿಗಳ  ನಿರ್ವಹಣೆಯಲ್ಲಿ ಯಶಸ್ವಿಯಾಗುವಿರಿ. ಅಪರಿ ಚಿತರೊಬ್ಬರ ಭೇಟಿಯಿಂದ ಲಾಭ. ಹೊಸ ವ್ಯವಹಾರ ಕ್ಷೇತ್ರ ಪ್ರವೇಶಕ್ಕೆ ಅವಸರ ಬೇಡ.

ಮೀನ: ಗೊಂದಲಗಳಿಂದ ಮುಕ್ತಿ. ಗುರುಸೇವೆಯಿಂದ ತೃಪ್ತಿ. ಉದ್ಯೋಗಸ್ಥರಿಂದ ಹೊಸ ಸವಾಲುಗಳ ಯಶಸ್ವೀ ನಿರ್ವಹಣೆ. ಹೊಸದೊಂದು ಕಾರ್ಯಕ್ಷೇತ್ರಕ್ಕೆ ಪದಾರ್ಪಣೆ. ಹಿರಿಯರ ಆರೋಗ್ಯ ಸುಧಾರಣೆ. ವ್ಯವಹಾರ ಕ್ಷೇತ್ರದಲ್ಲಿ ಸಂಗಾತಿಯಿಂದ ಉತ್ತಮ ಸಹಕಾರ.

Advertisement

Udayavani is now on Telegram. Click here to join our channel and stay updated with the latest news.

Next