Advertisement

Horoscope: ಈ ರಾಶಿ ಅವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿಯಾಗಲಿದೆ

07:26 AM May 10, 2023 | Suhan S |

ಮೇಷ: ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ದೀರ್ಘ‌ ಪ್ರಯಾಣದಿಂದ ಲಾಭ. ಉತ್ತಮ ಧನಾರ್ಜನೆ. ಆರೋಗ್ಯದಲ್ಲಿ ಸಣ್ಣ ಕಿರಿಕಿರಿ. ಆಸ್ತಿ ಸಂಚಯನ. ನೂತನ ಮಿತ್ರರ ಭೇಟಿ. ಮಾತೃಸಮಾನರಿಂದ ಸಂತೋಷ ವೃದ್ಧಿ.

Advertisement

ವೃಷಭ: ಆರೋಗ್ಯ ಮಧ್ಯಮ. ಉತ್ತಮ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ದಾಂಪತ್ಯ ತೃಪ್ತಿದಾಯಕ. ಶುಭಕಾರ್ಯ ನಿಮಿತ್ತ ಪ್ರಯಾಣ.

ಮಿಥುನ: ಅವಿವಾಹಿತರಿಗೆ ಕಂಕಣ ಭಾಗ್ಯ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಉತ್ತಮ ಬೆಳವಣಿಗೆ. ಅಧಿಕ ಧನಾರ್ಜನೆ. ಗುರುಹಿರಿಯರ ಉತ್ತಮ ಮಾರ್ಗದರ್ಶನ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನದಿಂದ ಪ್ರಗತಿ .

ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಅಧಿಕ ಶ್ರಮ. ನಿರೀಕ್ಷಿಸಿದ ಸ್ಥಾನ ಮಾನ ಸಿಗಲಿಲ್ಲವೆಂದು ಚಿಂತೆ ಕಾಡೀತು. ಗುರುಹಿರಿಯರೊಂದಿಗೆ ಸಂಯಮದಿಂದ ವರ್ತಿಸಿ. ಬೇಸರಕ್ಕೆ ಅವಕಾಶ ನೀಡದಿರಿ. ಮಧ್ಯಮ ಧನಾರ್ಜನೆ.

ಸಿಂಹ: ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಂಯಮವಿರಲಿ. ಅನ್ಯರ ಜೊತೆ ವ್ಯವಹರಿಸುವಾಗ ಜಾಗ್ರತೆ ಇರಲಿ.

Advertisement

ಕನ್ಯಾ: ಗೃಹೋಪಕರಣ ವಸ್ತುಗಳ ಸಂಗ್ರಹ. ಅನಿರೀಕ್ಷಿತ ಭೂಮ್ಯಾದಿ ಆಸ್ತಿ ವಿಚಾರವಾಗಿ ಬದಲಾವಣೆ. ಬಂಧುಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಸಾಂಸಾರಿಕವಾಗಿ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ತೃಪ್ತಿ.

ತುಲಾ: ಪರರ ಸಹಾಯದಿಂದ ಹೆಚ್ಚಿದ ಧನ ಲಾಭ. ಸಂದಭೋìಚಿತವಾದ ವಾಕ್‌ ಚತುರತೆಯಿಂದ ಕಾರ್ಯ ಸಫ‌ಲತೆ. ಹೆಚ್ಚಿದ ಸಾಂಸಾರಿಕ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ದೂರದ ಚಟುವಟಿಕೆಗಳಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ವೃಶ್ಚಿಕ: ಅನಿರೀಕ್ಷಿತ ಧನ ವೃದ್ಧಿ. ಕುಟುಂಬ ಸುಖ ವೃದ್ಧಿ. ಆರೋಗ್ಯದ ಬಗ್ಗೆ ಹೆಚ್ಚಿದ ನಿಗಾ ವಹಿಸುವಿಕೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಮಕ್ಕಳ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ.

ಧನು: ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ಹೂಡಿಕೆಯಲ್ಲಿ ಆಸಕ್ತಿ. ವ್ಯಾಜ್ಯ ವ್ಯವಹಾರಗಳಲ್ಲಿ ಜಯ. ಉತ್ತಮ ಧನಾರ್ಜನೆ‌. ಕುಟುಂಬದೊಂದಿಗೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ ಯಿಂದ ಸಂತಸ. ಗುರುಹಿರಿಯರಿಂದ ಸಂತಸದ ವಾರ್ತೆ.

ಮಕರ: ವಿದೇಶ ವ್ಯವಹಾರಗಳಲ್ಲಿ ವಿಶೇಷ ಗಮನಹರಿಸುವಿಕೆ. ಸಂದಭೋìಚಿತ ಜನರ ಸಹಾಯದಿಂದ ಪ್ರಗತಿ. ಧಾರ್ಮಿಕ ಸ್ಥಳ ಸಂದರ್ಶನ. ಸಂದರ್ಭಕ್ಕೆ ಸರಿಯಾಗಿ ಹಣ ಹೂಡಿಕೆಯಿಂದ ಲಾಭ. ಬಂಧುಮಿತ್ರರ ಭೇಟಿ.

ಕುಂಭ: ಮಾತು ನೀಡುವಾಗ ಯೋಚಿಸಿ ನೀಡಿ. ಅನಗತ್ಯ ತೊಂದರೆಗಳನ್ನು ಆಹ್ವಾನಿಸದಿರಿ. ಉಪಕಾರ ಮಾಡಿ ನಷ್ಟ ಕಷ್ಟ ಅನುಭವಿಸದಿರಿ. ಹಣಕಾಸಿನ ವಿಚಾರದಲ್ಲಿ ಹೆಚ್ಚಿದ ಪರಿಶ್ರಮ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇರಲಿ.

ಮೀನ: ಆರೋಗ್ಯ ಉತ್ತಮ. ಗಣನೀಯ ವೃದ್ಧಿ. ಕೈಗೊಂಡ ಕೆಲಸಕಾರ್ಯಗಳಲ್ಲಿ ಸಫ‌ಲತೆ. ಬಂಧುಮಿತ್ರರ ಸಹಾಯ ಸಹಕಾರ. ಸಮರ್ಥ ನಾಯಕತ್ವದಿಂದ ಜನಮನ್ನಣೆ. ಗುರುಹಿರಿಯರಿಂದ ಉತ್ತಮ ಪ್ರೋತ್ಸಾಹ. ವಸ್ತ್ರ , ಆಭರಣಗಳ ಖರೀದಿ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವರ್ತಿಸಿ.

Advertisement

Udayavani is now on Telegram. Click here to join our channel and stay updated with the latest news.

Next