Advertisement

ಗುರುವಾರದ ರಾಶಿ ಫಲ : ಇಂದು ಈ ರಾಶಿಯವರಿಗೆ ನಿರೀಕ್ಷಿತ ಧನಸಂಪತ್ತು ವೃದ್ಧಿ

07:24 AM Sep 29, 2022 | Team Udayavani |

ಗುರುವಾರ

Advertisement

ಮೇಷ: ಪರರ ಧನ ಸಂಪತ್ತಿನ ವ್ಯವಹಾರದಲ್ಲಿ ಜಾಗ್ರತೆ ವಹಿಸಿ. ಸ್ತ್ರೀ ಪುರುಷರು ಬಾಂಧವ್ಯ ವೃದ್ಧಿಗೆ ಶ್ರಮ. ಪಾರದರ್ಶಕತೆಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮ. ಭೂಮ್ಯಾದಿ ಆಸ್ತಿ ಕ್ರಯ ವಿಕ್ರಯದಲ್ಲಿ ಸಫ‌ಲತೆ. ಉದ್ಯೋಗದಲ್ಲಿ ಪ್ರಗತಿ.

ವೃಷಭ: ನೂತರ ಮಿತ್ರರ ಸಮಾಗಮದಿಂದ ಮನಃ ಸಂತೋಷ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯೆ ಜ್ಞಾನ ಸಂಪಾದನೆಯಲ್ಲಿ ಸಫ‌ಲತೆ. ಮನಃ ಸಂತೋಷ. ಪ್ರಯಾಣದಲ್ಲಿ ಸಂತೋಷ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿದಾಯಕ ಬದಲಾವಣೆ.

ಮಿಥುನ: ಸಣ್ಣ ಪ್ರಯಾಣ. ಅಧಿಕ ಪರಿಶ್ರಮ ದಿಂದ ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಅಗತ್ಯ. ಮನೆಯಲ್ಲಿ ಸಂತೋಷಕ್ಕೆ ಕೊರತೆ ಆಗದಂತೆ ನೋಡಿಕೊಳ್ಳಿ.

ಕರ್ಕ: ಮಿತ್ರರ ಮೇಲೆ ಹೆಚ್ಚು ಅವಲಂಭಿತರಾಗುವುದ ರಿಂದ ಕಾರ್ಯ ವೈಖರಿಯಲ್ಲಿ ಹಿನ್ನಡೆ ತೋರೀತು. ಪಾಲುಗಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಗುರು ಹಿರಿಯರಲ್ಲಿ ತಾಳ್ಮೆ ಸಹನೆ ವರ್ತನೆಯಿಂದ ಲಾಭ. ಆರೋಗ್ಯದಲ್ಲಿ ಸುಧಾರಣೆ. ಮಕ್ಕಳೊಂದಿಗೆ ಚರ್ಚೆ ಬೇಡ.

Advertisement

ಸಿಂಹ: ನಿರೀಕ್ಷಿತ ಧನಸಂಪತ್ತು ವೃದ್ಧಿ. ಅಧಿಕ ಲಾಭ ಉತ್ತಮ ವಾಕ್‌ಚತುರತೆ. ಜನಮನ್ನಣೆ. ಬರಹಗಾರರಿಗೆ ಪ್ರಾಶಸ್ತ್ಯ ಲಭಿಸೀತು. ಅನ್ಯರಿಂದ ಸಹಾಯ ನಿರೀಕ್ಷಿಸದೆ ಸ್ವಂತ ಪರಿಶ್ರಮಕ್ಕೆ ಆದ್ಯತೆ ನೀಡಿ. ಆರೋಗ್ಯದಲ್ಲಿ ಪುಷ್ಠಿ. ಮಾನಸಿಕ ನೆಮ್ಮದಿ.

ಕನ್ಯಾ: ದೀರ್ಘ‌ ಪ್ರಯಾಣದಿಂದ ಅನುಕೂಲ. ದೂರದ ವ್ಯಾಪಾರ ವ್ಯವಹಾರದಲ್ಲಿ ಲಾಭ. ಅನಿರೀಕ್ಷಿತ ಧನ ವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿದ ಜಮಾಬ್ದಾರಿ. ಗುರು ಹಿರಿಯರ ಜವಾಬ್ದಾರಿ ವಹಿಸಿದ ಸಂತೋಷ. ಗೃಹದಲ್ಲಿ ಸಂತಸದ ವಾತಾವರಣ.

ತುಲಾ: ದೀರ್ಘ‌ ಪ್ರಯಾಣ. ನೂತನ ಉದ್ಯೋಗ ವ್ಯವಹಾರ ಲಭ್ಯ. ಪರರ ಧನಸಂಪತ್ತಿನ ವಿಚಾರ ದಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ಸ್ಥಾನ ಪ್ರಾಪ್ತಿಗೆ ಧನವ್ಯಯ. ದಾಂಪತ್ಯದಲ್ಲಿ ಕಲಹಕ್ಕೆ ಅವಕಾಶ ನೀಡದಿರಿ. ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ.

ವೃಶ್ಚಿಕ: ದೂರ ಪ್ರಯಾಣ ನೂತನ ಮಿತ್ರರ ಸಮಾಗಮ ಸಂತೋಷ. ಪಾರದರ್ಶಕತೆ ವ್ಯವ ಹಾರದಿಂದ ಜನಮನ್ನಣೆ. ಬಾಂಧವ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣದಿಂದ ನೆಮ್ಮದಿ. ನಿರೀಕ್ಷಿತ ಫ‌ಲಿತಾಂಶ ಪ್ರಾಪ್ತಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಧನು: ಗೃಹ ವಾಹನ ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಸ್ಥಾನಮಾನ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ಗುರು ಹಿರಿಯರ ಉತ್ತಮ ಮಾರ್ಗದರ್ಶನ ಲಭ್ಯ. ದಂಪತಿಗಳು ಪರಸ್ಪರ ಸಹಕಾರ ಪ್ರವೃತ್ತರಾಗಿ.

ಮಕರ: ಆರೋಗ್ಯ ವೃದ್ಧಿ. ಸಮಾಜದಲ್ಲಿ ಗೌರವ ವೃದ್ಧಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ದಂಪತಿಗಳಲ್ಲಿ ಅನುರಾಗ ವೃದ್ಧಿ. ದೂರದ ವ್ಯವಹಾರಗಳಲ್ಲಿ ತಲ್ಲೀನತೆ. ಗೃಹದಲ್ಲಿ ಸಂತೋಷದ ವಾತಾವರಣ.

ಕುಂಭ: ದೂರ ಪ್ರಯಾಣದಲ್ಲಿ ಸಫ‌ಲತೆ. ನಿರೀಕ್ಷಿತ ಧನ ಸ್ಥಾನಮಾನ ಪ್ರಾಪ್ತಿ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳೊಂದಿಗೆ ಚರ್ಚೆ. ಗುರು ಹಿರಿಯರ ಆರೋಗ್ಯ ಗಮನಿಸಿ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃತೃಪ್ತಿ.

ಮೀನ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನ ಸುಖ ಲಭ್ಯ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ಪರರ ಸಹಾಯದಿಂದ ಪ್ರಗತಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ. ದಂಪತಿಗಳು ಅನಗತ್ಯ ಚರ್ಚೆಗೆ ಆಸ್ಪದ ನೀಡಿದಿರಿ. ಅನಿರೀಕ್ಷಿತ ಧನ ಲಾಭ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next