Advertisement

ರಾಶಿ ಫಲ: ಈ ರಾಶಿಯವರಿಂದು ತಾಳ್ಮೆಯಿಂದ ವ್ಯವಹರಿಸಿ

07:44 AM Sep 09, 2022 | Team Udayavani |

ಮೇಷ: ಹೆಚ್ಚಿದ ಪರಿಶ್ರಮ. ಹಠಮಾಡದೇ ತಾಳ್ಮೆಯಿಂದ ಕಾರ್ಯ ಪ್ರವೃತ್ತರಾಗಿ. ದೂರದ ವ್ಯವಹಾರಗಳಿಂದ ಹೆಚ್ಚಿದ ವರಮಾನ. ಗುರುಹಿರಿಯರ ಮೇಲಧಿಕಾರಿಗಳ ಮಾರ್ಗದರ್ಶನ ಪಾಲಿಸುವುದರಿಂದ ಯಶಸ್ಸು ಲಭಿಸೀತು. ಗೃಹದಲ್ಲಿ ನೆಮ್ಮದಿಯ ವಾತಾವರಣ.

Advertisement

ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ಉದಾರತೆ ತೋರುವುದರಿಂದ ಜನಮನ್ನಣೆ. ನಿರೀಕ್ಷಿತ ಸ್ಥಾನ ಸುಖ. ಯಶಸ್ಸು ಲಭಿಸಿದ ಮನತೃಪ್ತಿ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ದೀರ್ಘ‌ ಪ್ರಯಾಣ. ಧೈರ್ಯದಿಂದ ಕಾರ್ಯ ಸಿದ್ಧಿ. ಧನಾಗಮನಕ್ಕೆ ಕೊರತೆ ಇರದು.

ಮಿಥುನ: ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ಮಾಡಿ. ದಂಪತಿಗಳು ಪಾಲುದಾರರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ನಿರೀಕ್ಷಿತ ಧನಾಗಮ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ.

ಕರ್ಕ: ಉತ್ತಮ ಸ್ಥಾನಮಾನಕ್ಕಾಗಿ ಪ್ರಯತ್ನ. ಅಧ್ಯಯನದಲ್ಲಿ ತತ್ಪರತೆ. ಕುಟುಂಬಿಕರಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ಪರಕಾರ್ಯದಲ್ಲಿ ಆಸಕ್ತಿ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ಸಾಂಸಾರಿಕ ಸುಖ ಮಧ್ಯಮ. ಆಲಸ್ಯ ತೋರದಿರಿ. ಗುರುಹಿರಿಯರ ಬಗ್ಗೆ ಚಿಂತೆ ಕಾಡೀತು.

ಸಿಂಹ: ಹಿರಿಯರಿಂದ ಸಂತೋಷ. ಗೃಹ ವಾಹನಾದಿ ವಿಚಾರಗಳಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಣಯದಿಂದ ನಷ್ಟ ಸಂಭವ.

Advertisement

ಕನ್ಯಾ: ದೈರ್ಯ ಪರಾಕ್ರಮದಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷೆಗೂ ಮೀರಿದ ಧನಾಗಮನ ಹಾಗೂ ವರಮಾನ. ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಗೌರವ ಪ್ರಾಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಅನಿರೀಕ್ಷಿತ ಸ್ಥಾನ ಗೌರವದ ಸುಖ.

ತುಲಾ: ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯ.

ವೃಶ್ಚಿಕ: ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಗೌರವ ಇತ್ಯಾದಿ ಶುಭಫ‌ಲ.

ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ.

ಮಕರ: ಉತ್ತಮ ಸ್ಥಿರ ಆರೋಗ್ಯ. ವಿವೇಕದಿಂದ ಕೂಡಿದ ಕೆಲಸ ಕಾರ್ಯಗಳು. ಜನಮನ್ನಣೆ. ಉತ್ತಮ ವಾಕ್‌ ಚತುರತೆಯಿಂದ ಹೆಚ್ಚಿದ ಧನಾರ್ಜನೆ. ಕುಟುಂಬ ಸುಖ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಕುಂಭ: ಅನ್ಯರ ಸಹಾಯ ನಿರೀಕ್ಷಿಸದ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿರಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಯಶಸ್ಸು. ದಾಂಪತ್ಯ ಸುಖ ತೃಪ್ತಿದಾಯಕ. ಗಣಿ ಭೂವ್ಯವಹಾರ ಆಹಾರೋದ್ಯಮದವರಿಗೆ ಅನುಕೂಲ

ಮೀನ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ಘ‌ ಪ್ರಯಾಣದಿಂದ ಲಾಭ. ರಾಜಕೀಯ ಕಾರ್ಯ ಕ್ಷೇತ್ರದಲ್ಲಿ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ದಂಪತಿಗಳು ಅನ್ಯೋನ್ಯತೆಗೆ ಗಮನಹರಿಸಿ. ಅಭಿವೃದ್ಧಿದಾಯಕ ಧನಾರ್ಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next