Advertisement

ನವರಾತ್ರಿ ಮೊದಲ ದಿನದ ರಾಶಿ ಫಲ; ಈ ರಾಶಿಯವರು ಆರೋಗ್ಯದ ಬಗ್ಗೆ ಗಮನಹರಿಸಿ

07:14 AM Sep 26, 2022 | Team Udayavani |

ಮೇಷ: ವಾಹನ ಭೂಮಿ ಇತ್ಯಾದಿ ಆಸ್ತಿ ವಿಚಾರದಲ್ಲಿಯೂ, ಉದ್ಯೋಗ, ಸರಕಾರೀ ವ್ಯವಹಾರಗಳಲ್ಲಿ ಕೂಡಿದ ಚಟುವಟಿಕೆ. ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಧನಾರ್ಜನೆಗೆ ಕೊರತೆಯಾಗದು. ಕುಟುಂಬಿಕರೊಂದಿಗೆ ಸಂತೋಷ. ಉತ್ತಮ ಸ್ಥಾನಮಾನ.

Advertisement

ವೃಷಭ: ಜವಾಬ್ದಾರಿಯುತ ಕಾರ್ಯವೈಖರಿ ಯಿಂದ ಸ್ಥಾನ ಗೌರವಾದಿ ಸುಖ. ಪ್ರಶಂಸೆ. ಆರೋಗ್ಯ ವೃದ್ಧಿ. ಗೃಹೋಪವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ.

ಮಿಥುನ: ಆರೋಗ್ಯದ ಬಗ್ಗೆ ಗಮನ. ಅತಿಯಾದ ಕಾರ್ಯ ಒತ್ತಡ. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ಶ್ರಮ ಅಧಿಕ. ಮಾತಿನಲ್ಲಿ ಸಹನೆ. ಭೂ ಎಚ್ಚರವಿರಲಿ. ಹಣಕಾಸಿನ ಬಗ್ಗೆ ಮತ್ತೂಬ್ಬರಲ್ಲಿ ವ್ಯವಹರಿಸುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ.

ಕರ್ಕ: ದೀರ್ಘ‌ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಹೆಚ್ಚಿನ ಅವಕಾಶ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.

ಸಿಂಹ: ದೇಹಾರೋಗ್ಯ ವಿಚಾರ ನಿರ್ಲಕ್ಷ್ಯ ಬೇಡ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧಿಸಿದ ತೃಪ್ತಿ. ಪತ್ರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿದರಿಂದಲೂ ದೃಢ ನಿರ್ಧಾರದಿಂದ ಕಾರ್ಯ ಸಫ‌ಲತೆ. ದಾಂಪತ್ಯ ಸಮಾದಾನಕರ. ವಿದ್ಯಾರ್ಥಿಗಳಿಗೆ ಯಶಸ್ಸು.

Advertisement

ಕನ್ಯಾ: ಆರೋಗ್ಯ ವೃದ್ಧಿ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಧನ ವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿ.

ತುಲಾ: ಹಠಮಾರಿತನ ಮಾಡದೇ ಕಾರ್ಯ ಪ್ರವೃತ್ತರಾಗಿ. ಅನಾವಶ್ಯಕ ವಾಗ್ವಾದಕ್ಕೆ ಅವಕಾಶ ನೀಡದಿರಿ. ಬಂಧುಮಿತ್ರರಿಂದ ಸಹಕಾರ. ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ವೃಶ್ಚಿಕ: ಬಂಧುಮಿತ್ರರ ಭೇಟಿ. ಭೂ ಸಂಬಂಧೀ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ. ಉತ್ತಮ ಧನಾರ್ಜನೆ. ದೂರದ ವ್ಯವಹಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನ್ಯೋನ್ಯತೆ. ಮಕ್ಕಳಿಂದ ಹೆಚ್ಚಿದ ಸುಖ.

ಧನು: ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ನಿರೀಕ್ಷಿತ ಧನ ಸಂಪತ್ತು ಲಭ್ಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ. ಗುರುಹಿರಿಯರೊಂದಿಗೆ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಮಾತಾಪಿತರಿಗೆ ಹೆಚ್ಚಿದ ಸುಖ.

ಮಕರ: ಆರೋಗ್ಯ ಗಮನಿಸಿ. ಉದ್ಯೋಗದಲ್ಲಿ ನಿರೀಕ್ಷೆಯಂತೆ ಪ್ರಗತಿ. ಯೋಜನೆಗಳ ಸಫ‌ಲತೆ. ದೂರದ ಧನಸಂಪತ್ತು ಪ್ರಾಪ್ತಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ದಾಂಪತ್ಯ ತೃಪ್ತಿಕರ. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ.

ಕುಂಭ: ಸ್ಥಿರ ಉತ್ತಮ ಆರೋಗ್ಯ. ಅಧ್ಯಯನದಲ್ಲಿ ತತ್ಪರತೆ. ಮಕ್ಕಳಿಗೆ ಹೆಚ್ಚಿನ ಸೌಕರ್ಯ. ಉದ್ಯೋಗ ವ್ಯವಹಾರಗಲ್ಲಿ ಗಣನೀಯ ಉತ್ತಮ ಪ್ರಗತಿ. ಹೆಚ್ಚಿದ ವರಮಾನ. ದಾಂಪತ್ಯ ತೃಪ್ತಿದಾಯಕ. ಗುರುಹಿರಿಯರ ರಕ್ಷೆ ಲಭ್ಯ.

ಮೀನ: ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ದೀರ್ಘ‌ ಪ್ರಯಾಣ. ದೂರದ ವ್ಯವಹಾರಗಳಿಂದ ಅನಿರೀಕ್ಷಿತ ಧನಾಗಮ. ಖರ್ಚುವೆಚ್ಚಗಳಲ್ಲಿ ಮುಂಜಾಗ್ರತೆ ವಹಿಸಿ. ದಾಂಪತ್ಯ ಸುಖ ವೃದ್ಧಿ. ಮಕ್ಕಳಿಂದ ಉತ್ತಮ ಪ್ರಗತಿದಾಯಕ ಬದಲಾವಣೆ. ದೇವತಾ ಕಾರ್ಯಕ್ಕೆ ಆದ್ಯತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next