Advertisement

ಮಂಗಳವಾರದ ರಾಶಿಫಲ; ಇಲ್ಲಿದೆ ನಿಮ್ಮ ಗ್ರಹಬಲ

07:38 AM Oct 04, 2022 | Team Udayavani |

ಮೇಷ: ಅಧಿಕ ಧನ ಸಂಚಯನ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ದೇವತಾ ಸ್ಥಳ ಸಂದರ್ಶನ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ. ವೃಷಭ: ನಿರೀಕ್ಷಿತ ಸ್ಥಾನಮಾನ ಗೌರವಾದಿ ವೃದ್ಧಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಕಾಲ. ಅನಿರೀಕ್ಷಿತ ಧನ ಸಂಪತ್ತು ಲಭ್ಯ. ಕೆಲಸ ಕಾರ್ಯಗಳಲ್ಲಿ ಶ್ಲಾಘನೆ ಇತ್ಯಾದಿ ಶುಭಫ‌ಲ.

Advertisement

ಮಿಥುನ: ದೂರ ಪ್ರಯಾಣ ಸಂಭವ. ಸಂಪತ್ತಿನ ಉಳಿತಾಯಕ್ಕೆ ಚಿಂತನೆ. ಮಾತೃ ಸಮಾನ ವರ್ಗದವರ ನಿಮಿತ್ತ ಖರ್ಚು. ಮಿತ್ರರೊಂದಿಗೆ ಜಾಗೃತೆಯಿಂದ ವ್ಯವಹರಿಸಿ. ಪಾಲುದಾರಿಕೆ ವ್ಯವಹಾರಗಳಲ್ಲಿ ಅಧಿಕ ಶ್ರಮದಿಂದ ಯಶಸ್ಸು ಲಭ್ಯ.

ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ನೇತೃತ್ವ, ತಲ್ಲೀನತೆ. ನಿರೀಕ್ಷಿತ ಕೆಲಸಗಳಲ್ಲಿ ಸಫ‌ಲತೆ. ಮಿತ್ರ ಸಮಾನರಿಂದ ಅನುಕೂಲ. ಆರೋಗ್ಯದಲ್ಲಿ ಸುಧಾರಣೆ. ಸಾಂಸಾರಿಕ ಸುಖಕ್ಕೆ ಪರಿಶ್ರಮ ಅಗತ್ಯ. ಅನಗತ್ಯ ಖರ್ಚಿಗೆ ಆಸ್ಪದ ನೀಡದಿರಿ.

ಸಿಂಹ: ವಿದ್ಯಾರ್ಥಿಗಳಿಗೆ, ಜ್ಞಾನಿಗಳಿಗೆ ಅನುಕೂಲಕರ ಪರಿಸ್ಥಿತಿ. ತಿಳಿದಂತಹ ವಿದ್ಯೆಯನ್ನು ಪರರಿಗೆ ಹಂಚಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಹಣ ಸಂಪತ್ತಿನ ವೃದ್ಧಿ. ದೇವತಾ ಕಾರ್ಯಗಳಲ್ಲಿ ಅಡಚಣೆ ಎದುರಾದೀತು.

ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ. ನೇತೃತ್ವ ವಹಿಸಿದ ನೆಮ್ಮದಿ. ದೀರ್ಘ‌ ಪ್ರಯಾಣ ಸಂಭವ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯದ ಬಗ್ಗೆ ಗಮನಹರಿಸಿ.

Advertisement

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ದೂರ ಪ್ರಯಾಣ ಸಂಭವ. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಹಠಮಾರಿತನ ಸಲ್ಲದು. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ ಪ್ರಗತಿ. ಅನಗತ್ಯ ಹಣಕಾಸಿನ ಖರ್ಚಿಗೆ ಆಸ್ಪದ ನೀಡದಿರಿ.

ವೃಶ್ಚಿಕ: ದಂಪತಿಗಳಲ್ಲಿ ಅನ್ಯೋನ್ಯತೆ. ಮನೋರಂಜನೆ, ಪಾಲುಗಾರಿಕಾ ವ್ಯವಹಾರದಲ್ಲಿ ಪ್ರಗತಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಉತ್ತಮ ಧನ ವೃದ್ಧಿ. ಮಿತ್ರರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ.

ಧನು: ಧಾರ್ಮಿಕ ಕಾರ್ಯಗಳ ನೇತೃತ್ವ. ಅನ್ಯರಿಗೆ ಉತ್ತಮ ಮಾರ್ಗದರ್ಶನ ಮಾಡುವಲ್ಲಿ ಸಫ‌ಲತೆ. ಪ್ರಶಂಸೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಗುರುಹಿರಿಯರಿಂದ ಪ್ರೋತ್ಸಾಹ.ಮಕ್ಕಳ ನಿಮಿತ್ತ ಹೆಚ್ಚಿದ ಪರಿಶ್ರಮ.

ಮಕರ: ದೂರ ಪ್ರಯಾಣ. ಧಾರ್ಮಿಕ ಸ್ಥಳ ಸಂದರ್ಶನದಿಂದ ಮನಃಸಂತೋಷ. ಉತ್ತಮ ಧನ ಸಂಚಯನ. ಗುರು ಹಿರಿಯರಿಂದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ. ದೂರದ ಊರುಗಳಲ್ಲಿ ಉಳಿತಾಯದ ಆಲೋಚನೆ. ಗೃಹದಲ್ಲಿ ಸಂಭ್ರಮದ ಸ್ಥಿತಿ.

ಕುಂಭ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ತಾಯಿ ಸಮಾನ ವರ್ಗದವರಿಂದ ಪ್ರೋತ್ಸಾಹ. ಮಾರ್ಗದರ್ಶನ. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಸೇವಾ ವರ್ಗದವರಿಗೆ ಲಾಭ.

ಮೀನ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ ಜನಮನ್ನಣೆ ಪ್ರಾಪ್ತಿ. ನಿರೀಕ್ಷಿಸಿದಂತೆ ಸಹಾಯ ಲಭ್ಯ. ದಂಪತಿಗಳು ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಸಂತೋಷ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next