Advertisement

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ಸಂತೋಷದ ವಾತಾವರಣ

07:34 AM Oct 10, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ನಿಗದಿತ ಕೆಲಸಗಳು ಮುಕ್ತಾಯ. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಮನೆಯಲ್ಲಿ ದೇವೀ ಪೂಜೆಯ ಸಂಭ್ರಮ. ಮಾಧ್ಯಮಗಳಲ್ಲಿರುವವರ ಸಣ್ತೀಪರೀಕ್ಷೆಯ ಸನ್ನಿವೇಶಗಳು ಸೃಷ್ಟಿ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಕೊಂಚ ಹಿನ್ನಡೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ. ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ.

ಮಿಥುನ: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಉದ್ಯಮದಲ್ಲಿ ಹೊಸ ವಿಭಾಗ ಕಾರ್ಯಾರಂಭ. ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ.

ಕರ್ಕಾಟಕ: ಹಲವು ದಿನಗಳಿಂದ ನೆನಪಾಗುತ್ತಿದ್ದ ವ್ಯಕ್ತಿಯ ಭೇಟಿ. ಅಕಸ್ಮಾತ್‌ ಧನಾಗಮ ಯೋಗ. ಆಪ್ತಮಿತ್ರನ ಮನೆಯಲ್ಲಿ ವಿವಾಹ. ಆಹಾರಧಾನ್ಯ ಮಾರಾಟದಿಂದ ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.

ಸಿಂಹ: ಸಾಮರ್ಥ್ಯದ ಸಂಪೂರ್ಣ ಉಪಯೋಗಕ್ಕೆ ಅವಕಾಶ. ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕಾರ್ಯಸ್ಥಾನದಲ್ಲಿ ಪೂಜೆಗೆ ಸಿದ್ಧತೆ.

Advertisement

ಕನ್ಯಾ: ಕುಟುಂಬದವರ ಕೂಡುವಿಕೆಯಲ್ಲಿ ದೇವತಾರಾಧನೆ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಬಂಧುಗಳ ಮನೆಯಲ್ಲಿ ವಿವಾಹ ಸಂಭ್ರಮ.

ತುಲಾ: ಪಂಚಮ ಶನಿಯ ಮಹಿಮೆಯ ಕಾರಣದಿಂದ ಆರೋಗ್ಯಕ್ಕೆ ಹಾನಿ. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ದಿನದ ಕೊನೆಯಲ್ಲಿ ಅಪರೂಪದ ವ್ಯಕ್ತಿಯ ಭೇಟಿ.

ವೃಶ್ಚಿಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ಕೊಂಚ ಸುಧಾರಣೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳಿಗೆ ಯಶಸ್ಸು.

ಧನು: ಅವಿಶ್ರಾಂತ ಸಾಧನೆಯಿಂದ ಸಂಪಾದನೆ ವೃದ್ಧಿ. ಒಡನಾಡಿಗಳ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದಿ ಉಡುಪು ಉತ್ಪಾದಕರ ಆದಾಯ ವೃದ್ಧಿ. ಸಮಾಜ ಸುಧಾರಣಾ ಕಾರ್ಯಕ್ರಮಗಳಲ್ಲಿ ಭಾಗಿ.

ಮಕರ: ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ಹೇರಳ ಲಾಭ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ. ಹಿರಿಯರ ಆರೋಗ್ಯದ ಕುರಿತು ಕಾಳಜಿ ಇರಲಿ.

ಕುಂಭ: ಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸವಾಲು. ಟೈಲರಿಂಗ್‌ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯಗಳು ಮುಕ್ತಾಯ. ಪಾಲುದಾರಿಕೆ ವ್ಯವಹಾರ ವಿಸ್ತರಣೆಗೆ ಯೋಜನೆ. ಕುಲದೇವರ ದರ್ಶನಕ್ಕಾಗಿ ಪ್ರಯಾಣ.

ಮೀನ: ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಆಹ್ವಾನ. ಸರಕಾರಿ ಇಲಾಖೆಗಳವರಿಂದ ಸಹಕಾರ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಅನುಕೂಲ. ಕಟ್ಟಡ ನಿರ್ಮಾಣ ವ್ಯವಹಾರದಲ್ಲಿ ಪ್ರಗತಿಯ ಸೂಚನೆ. ಪತ್ನಿಯ ಕಡೆಯ ಬಂಧುಗಳ ಭೇಟಿ.

Advertisement

Udayavani is now on Telegram. Click here to join our channel and stay updated with the latest news.

Next