Advertisement

ರಾಶಿ ಫಲ; ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆ, ಮಕ್ಕಳಿಗಾಗಿ ಧನ ವ್ಯಯ, ಅವಿವಾಹಿತರಿಗೆ ವಿವಾಹ ಭಾಗ್ಯ

07:14 AM Nov 28, 2022 | Team Udayavani |

ಮೇಷ: ಸರಕಾರಿ ಕೆಲಸಗಳಲ್ಲಿ ಪ್ರಗತಿ. ಗುರುಹಿರಿಯರ ಅವಲಂಬನೆ. ಧಾರ್ಮಿಕ ಕಾರ್ಯಗಳ ನಿಮಿತ್ತ ದೂರ ಪ್ರಯಾಣ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆ ತೋರೀತು. ಮಕ್ಕಳಿಗಾಗಿ ಧನ ವ್ಯಯ. ದಾಂಪತ್ಯ ತೃಪ್ತಿಕರ. ಗೃಹೋಪಕರಣ ವಸ್ತು ಸಂಗ್ರಹ.

Advertisement

ವೃಷಭ: ಬಂಧುಬಳಗದವರಿಂದ ಸಹಕಾರ. ದಾಂಪತ್ಯದಲ್ಲಿ ಪರಸ್ಪರ ಅನುರಾಗ ವೃದ್ಧಿ. ಅಧ್ಯಯನದಲ್ಲಿಯೂ ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಮಕ್ಕಳಿಗೆ ನಿರೀಕ್ಷಿತ ಸ್ಥಾನ ಲಾಭವಾದ್ದರಿಂದ ಸಂತೋಷ ವೃದ್ಧಿ. ಸಹೋದರ ಸಮಾನರಿಗೆ ಪ್ರಯಾಣ ಯೋಗ.

ಮಿಥುನ: ಸುದೃಢ ಆರೋಗ್ಯ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಯಥೇತ್ಛ ಧನಾಗಮನ. ಉದ್ಯೋಗ ವ್ಯವಹಾರಗಳಲ್ಲಿಯೂ ಪಾಲುದಾರಿಕೆಯಲ್ಲಿಯೂ ಹೆಚ್ಚಿದ ಪ್ರಗತಿ. ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ.

ಕರ್ಕ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಸಫ‌ಲತೆ. ನೂತನ ಮಿತ್ರರ ಸಮಾಗಮ. ದೂರದ ವ್ಯವಹಾರಗಳಿಂದ ಧನಾಗಮ. ಮಕ್ಕಳಿಂದಲೂ ಗುರುಹಿರಿಯರಿಂದ ಸಂತೋಷ ವೃದ್ಧಿ. ನಷ್ಟದ್ರವ್ಯ ಪ್ರಾಪ್ತಿ ಇತ್ಯಾದಿ ಶುಭ ಫ‌ಲ.

ಸಿಂಹ: ನಿರಂತರ ಧನ ಲಾಭದ ವಿಚಾರದಲ್ಲಿ ಮಗ್ನತೆ. ನಿರೀಕ್ಷಿಸಿದಂತೆ ಸ್ಥಾನ ಲಾಭ. ಸಂದಭೋìಚಿತ ಕಾರ್ಯ ನಡೆನುಡಿಯಿಂದ ಪ್ರಗತಿ. ಗುರುಹಿರಿಯರಲ್ಲಿ ಬೇಸರ ಬಾರದಂತೆ ಕಾರ್ಯ ನಿರ್ವಹಿಸಿ. ಸಾಂಸಾರಿಕ ಸುಖ ಮಧ್ಯಮ.

Advertisement

ಕನ್ಯಾ: ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ಸಂಭವ. ಧನ ಸಂಪತ್ತಿಗಾಗಿ ದೀರ್ಘ‌ ಪ್ರಯಾಣ ಸಂಭವ. ಪತಿ ಪತ್ನಿಯರ ಆರೋಗ್ಯ ಗಮನಿಸಿ. ಭೂ ಸಂಬಂಧ ವಿಚಾರಗಳಲ್ಲಿ ಜಾಗ್ರತೆ ನಡೆ ಅಗತ್ಯ.

ತುಲಾ: ಗುರು ಹಿರಿಯರ ಆಶೀರ್ವಾದದಿಂದ ಹೆಚ್ಚಿದ ಸ್ಥಾನ ವೃದ್ಧಿ. ಸಹೋದ್ಯೋಗಿಗಳ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಹಾಗೂ ಹೆಚ್ಚಿನ ಸಂಪಾದನೆ ಪ್ರಾಪ್ತಿ. ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಚರ್ಚೆ ಸಂಭವ. ದಾಂಪತ್ಯ ಸುಖ ವೃದ್ಧಿ.

ವೃಶ್ಚಿಕ: ಉದ್ಯೋಗ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷೆಗೆ ಸರಿಯಾಗಿ ಧನಾಗಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅಡಚಣೆ ವಿಳಂಬ. ಮಾನಸಿಕ ಒತ್ತಡ. ದಂಪತಿಗಳಲ್ಲಿ ಪರಸ್ಪರ ಸಹಕಾರ ವೃದ್ಧಿ. ಮಕ್ಕಳಿಂದ ಸಂತೋಷ.

ಧನು: ವಿದ್ಯಾರ್ಜನೆಯಲ್ಲಿ ತಲ್ಲೀನತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಗೃಹದಲ್ಲಿ ಸಂತಸದ ವಾತಾವರಣ. ಅತಿಯಾದ ಪರಿಶ್ರಮದಿಂದ ಧನ ವೃದ್ಧಿ.

ಮಕರ: ದಾಂಪತ್ಯದಲ್ಲಿ ಪರಸ್ಪರ ಅನುರಾಗ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಭೂಮ್ಯಾದಿ ವಿಚಾರಗಳಲ್ಲಿ ಆಸ್ತಿವಿಚಾರಗಳಲ್ಲಿ ಬದಲಾವಣೆ ಸಂಭವ. ಎಚ್ಚರಿಕೆಯ ನಡೆ ಅಗತ್ಯ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ.

ಕುಂಭ: ಆರೋಗ್ಯ ಗಮನಿಸಿ. ನಡೆನುಡಿಗಳಲ್ಲಿ ಸ್ಪಷ್ಟತೆ ಇರಲಿ. ಅನ್ಯಥಾ ತೊಂದರೆಗಳನ್ನು ನಿಯಂತ್ರಿಸದಿರಿ. ಭೂಮ್ಯಾದಿ ವ್ಯವಹಾರಗಳಲ್ಲಿ ಏರುಪೇರು ಸಂಭವ. ಮಕ್ಕಳಿಗೆ ದೂರ ಪ್ರಯಾಣ. ಅಧ್ಯಯನ ನಿಮಿತ್ತ ದಂಪತಿಗಳು ಸಾಮರಸ್ಯ ಕಾಪಾಡಿ.

ಮೀನ: ವೃದ್ಧಿದಾಯಕ ಆರೋಗ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದಂತೆ ಧನಾಗಮನ ಸ್ಥಾನ ಕೀರ್ತಿ ಪ್ರಶಂಸೆ ಪ್ರಾಪ್ತಿ. ಉತ್ತಮ ವಾಕ್‌ ಚತುರತೆ ಮನೋರಂಜನೆ. ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next