Advertisement

Daily Horoscope: ದೂರದ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ

07:19 AM May 09, 2023 | Team Udayavani |

ಮೇಷ: ಅನಿರೀಕ್ಷಿತ ಅದೃಷ್ಟ ಪ್ರಾಪ್ತಿ. ಭಾಗ್ಯವೃದ್ಧಿ. ದೂರ ಪ್ರಯಾಣ. ಗುರುಹಿರಿಯರ ಪ್ರೋತ್ಸಾಹದಿಂದ ಪ್ರಗತಿ. ಧೈರ್ಯ ಪರಾಕ್ರಮ ಪ್ರದರ್ಶನ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ.

Advertisement

ವೃಷಭ: ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ನೂತನ ಮಿತ್ರರ ಭೇಟಿ. ಅನಿರೀಕ್ಷಿತ ಧನಾಗಮನ. ಗೃಹದಲ್ಲಿ ಸಂತೋಷದ ವಾತಾವರಣ. ಆಸ್ತಿ ಸಂಗ್ರಹಿಸುವಿಕೆಯಲ್ಲಿ ಹೆಚ್ಚಿದ ಆಸಕ್ತಿ. ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯವೈಖರಿ.

ಮಿಥುನ: ಜವಾಬ್ದಾರಿಯುತ ಕೆಲಸ ನಿರ್ವಹಣೆಯಿಂದ ಜನಮನ್ನಣೆ. ಗೌರವ ಆದರತೆ ಲಭ್ಯ. ಸ್ವಚ್ಚತೆ, ಪಾರದರ್ಶಕತೆಗೆ ಆದ್ಯತೆ. ದೂರದ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ,

ನೇತೃತ್ವ.

ಕರ್ಕ: ಹೆಚ್ಚಿದ ಸ್ಥಾನ ಗೌರವ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಾಯ ಸಹಕಾರ. ಉದ್ಯೋಗದಲ್ಲಿ ಜನಪ್ರಿಯತೆ ಅಭಿವೃದ್ಧಿ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಒದಗುವ ಸಮಯ. ಹೆಚ್ಚಿದ ಧನಾರ್ಜನೆ.

Advertisement

ಸಿಂಹ: ಆರೋಗ್ಯದಲ್ಲಿ ಗಣನೀಯ ವೃದ್ಧಿ. ಸ್ಥಾನ ಗೌರವಾದಿ ಪ್ರಾಪ್ತಿ. ಮಾತಿನಲ್ಲಿ ಜಾಗರೂಕರಾಗಿ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಹಣಕಾಸಿನ ಒತ್ತಡ ಎದುರಾದೀತು. ಮಿತ್ರರ ಸಹಾಯ ಸಹಕಾರ ಲಭ್ಯ. ಗುರುಹಿರಿಯರ ಆಶೀರ್ವಾದದಿಂದ ಪ್ರಗತಿ.

ನ್ಯಾ: ಅವಿವಾಹಿತರಿಗೆ ವಿವಾಹ ಯೋಗ. ಸಾಮಾಜಿಕ ಚಟುವಟಿಕೆಗಳಲ್ಲಿ ಜನಪ್ರಿಯತೆ. ನಾಯಕತ್ವ ಗುಣಕ್ಕೆ ಪ್ರಾಶಸ್ತ್ಯ. ನಷ್ಟ ದ್ರವ್ಯ ಲಭಿಸುವ ಸಾಧ್ಯತೆ. ಗೃಹ ಉಪಕರಣ ವಸ್ತುಗಳ ಸಂಗ್ರಹ. ಬಂಧುಮಿತ್ರರ ಸಹಕಾರ. ಆರ್ಥಿಕ ವೃದ್ಧಿ.

ತುಲಾ: ಆರೋಗ್ಯ ವೃದ್ಧಿ. ವಸ್ತ್ರ ಆಭರಣ ಖರೀದಿ. ವಿವಾಹಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ಸುಖ ಸಂತೋಷ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.

ವೃಶ್ಚಿಕ: ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ. ಗೌರವ ವೃದ್ಧಿ. ಬಂಧುಜನ ರೊಂದಿಗೆ ವಿಲಾಸ. ಧಾರ್ಮಿಕ ವಿಚಾರ ಆಸಕ್ತಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಮಕ್ಕಳಿಂದ ಸಂತಸ.

ಧನು: ಆರೋಗ್ಯ ವೃದ್ಧಿ. ಸತ್ಕರ್ಮ ಸದಾಚಾರತೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ ದಾನ ಧರ್ಮ ಕಾರ್ಯಗಳಲ್ಲಿ ನಿರತ. ಗುರು ಹಿರಿಯರ ಪ್ರೀತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ.

ಮಕರ: ಪಾರದರ್ಶಕತೆಗೆ ಆದ್ಯತೆ ನೀಡಿ. ಯಾರ ಮಾತಿಗೂ ಮರುಳಾಗದಿರಿ. ಅನ್ಯರ ಸಹಾಯ ಅಪೇಕ್ಷಿಸದೆ ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ. ಉದ್ಯೋಗ ವ್ಯವಹಾರಗಳಲ್ಲಿ , ಆಸ್ತಿ ವಿಚಾರಗಳಲ್ಲಿ ಸ್ಪಷ್ಟತೆ ಇರಲಿ. ಮಕ್ಕಳಿಂದ ಸುಖ ಸಂತೋಷ.

ಕುಂಭ: ನಯ ವಿನಯದಿಂದ ಕಾರ್ಯ ಪ್ರವೃತ್ತರಾಗಿ. ಯಾವುದೇ ಆತುರದ ನಿರ್ಧಾರ ಮಾಡದಿರಿ. ಪರರ ಮಾತನ್ನು ಆಲಿಸುವಾಗ ನಿಮ್ಮ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುಟ್ಟನ್ನು ಕಾಪಾಡಿಕೊಳ್ಳಿ. ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು.

ಮೀನ: ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಪ್ರತಿಸ್ಪರ್ಧಿಗಳಿಗೆ ಅವಕಾಶವಿಲ್ಲದಂತೆ ಕಾರ್ಯಮಗ್ನರಾಗಿ. ಉತ್ತಮ ಧನಾರ್ಜನೆ. ಮಾತಿನಲ್ಲಿ ಸ್ಪಷ್ಟತೆ, ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ. ಸಾಂಸಾರಿಕವಾಗಿ ಉತ್ತಮ ದಿನ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಉತ್ತಮ ಮಾರ್ಗದರ್ಶನ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next