Advertisement

Daily Horoscope: ಉತ್ತಮ ಧನಾರ್ಜನೆ, ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆಗೆ ಅವಕಾಶ

07:12 AM May 20, 2023 | Team Udayavani |

ಮೇಷ: ಮಾತೃ ಸಮಾನರಿಂದ ಮನಃಸಂತೋಷ. ಮಿತ್ರರ ಸಹಕಾರ. ಭೂಮಿ, ವಾಹನ, ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಉದ್ದೇಶಿತ ಕಾರ್ಯ ಸಫ‌ಲತೆಯಿಂದ ಸಂಭ್ರಮದ ವಾತಾವರಣ. ಗೃಹೋಪಕರಣ ವಸ್ತುಗಳ ಸಂಗ್ರಹ.

Advertisement

ವೃಷಭ: ಜನ ಸಂಪರ್ಕ ವೃದ್ಧಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ. ಗುರು ಹಿರಿಯರ ಉತ್ತಮ ಮಾರ್ಗದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ನೂತನ ಮಿತ್ರರ ಭೇಟಿ. ದೀರ್ಘ‌ ಪ್ರಯಾಣ ಸಂಭವ.

ಮಿಥುನ: ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆಗೆ ಅವಕಾಶ. ಆರೋಗ್ಯ ಸುಧಾರಣೆ. ಮಿತ್ರರಿಂದ ಸಹಾಯ. ಅನ್ಯರ ಜವಾಬ್ದಾರಿ ಹೊರುವಾಗ ಎಚ್ಚರಿಕೆ ವಹಿಸಿ. ದಾಂಪತ್ಯ ಸಮಾಧಾನಕರ.

ಕರ್ಕ: ಆರೋಗ್ಯ ಗಮನಿಸಿ. ನಿರೀಕ್ಷಿತ ಧನಾಗಮನವಿದ್ದರೂ ಹಲವು ವಿಧದಲ್ಲಿ ಖರ್ಚಿಗೆ ಮಾರ್ಗಗಳು ತೋರಿಬಂದಾವು. ದೂರ ಪ್ರಯಾಣ ಸಂಭವ. ಪಾಲುದಾರಿಕೆ ವ್ಯವಹಾರಗಳಲ್ಲಿ ಉದ್ಯೋಗದಲ್ಲಿ ಸಾಮರಸ್ಯ ಕಾಪಾಡಿರಿ.

ಸಿಂಹ: ಪರೋಪಕಾರದಿಂದ ಗೌರವ ಪೂಜ್ಯತೆಗೆ ಭಾಜನರಾಗುವ ಯೋಗ. ಉತ್ತಮ ಧನಾರ್ಜನೆ. ಪ್ರಯಾಣದಿಂದ ಲಾಭ. ಗುರುಹಿರಿಯರಿಂದ ಸುಖ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಅವಿವಾಹಿತರಿಗೆ ಸಂಬಂಧ ಕೂಡಿ ಬರುವ ಸಮಯ.

Advertisement

ಕನ್ಯಾ: ಆರೋಗ್ಯ ಗಮನಿಸಿ. ಪಾಲುದಾರಿಕೆ ವ್ಯವಹಾರ ಉದ್ಯೋಗಗಳಲ್ಲಿ ಅಭಿವೃದ್ಧಿ ತೋರಿದರೂ ಸಹನೆ ತಾಳ್ಮೆಯಿಂದ ವ್ಯವಹರಿಸಿ. ಉತ್ತಮ ಧನಾರ್ಜನೆ. ದೂರ ಪ್ರಯಾಣ ಸಂಭವ. ಗೃಹದಲ್ಲಿ ಸಂತಸದ ವಾತಾವರಣ.

ತುಲಾ: ದೀರ್ಘ‌ ಪ್ರಯಾಣ. ಅಧ್ಯಯನದಲ್ಲಿ ತತ್ಪರತೆ. ಧಾರ್ಮಿಕ ವಿಚಾರಗಳಲ್ಲಿ ಪಾಲ್ಗೊಳ್ಳು ವಿಕೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕವಾಗಿ ಸಂತೋಷ ವೃದ್ಧಿ. ಶುಭ ಸಮಾರಂಭ ಗಳಲ್ಲಿ ಭಾಗಿಯಾಗುವ ಅವಕಾಶ.

ವೃಶ್ಚಿಕ: ಉದಾರತೆ ಧೈರ್ಯ ಪರಾಕ್ರಮದಿಂದ ಕೂಡಿದ ದಿನಚರಿ. ಸ್ಪರ್ಧೆಗಳಲ್ಲಿ ಜಯ. ಹಣಕಾಸಿನ ವಿಚಾರದಲ್ಲಿ ಏರಿಳಿತ ಸಂಭವ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ.

ಧನು: ಆರೋಗ್ಯ ವೃದ್ಧಿ. ಬಂಧುಮಿತ್ರರ ಭೇಟಿ. ಗುರುಹಿರಿಯರ ಆಶೀರ್ವಾದ. ದೂರ ಪ್ರಯಾಣಕ್ಕೆ, ದೇವತಾ ಸ್ಥಳ ಸಂದರ್ಶನಕ್ಕೆ ಅವಕಾಶ ಒದಗಿಬಂದೀತು. ಗುರುಹಿರಿಯರಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ತಾಳ್ಮೆಯಿಂದ ವರ್ತಿಸಿ.

ಮಕರ: ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಉತ್ತಮ ಬೆಳವಣಿಗೆ. ಮಕ್ಕಳೊಂದಿಗೆ ಸಂತೋಷದ ಸಮಯ. ಗುರುಹಿರಿಯರಲ್ಲಿ ಚರ್ಚೆ ಸಂಭವ.

ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷಿಸಿದಂತೆ ಸ್ಥಾನ ಗೌರವ ಲಭಿಸಿದ ಖುಷಿ. ಸ್ಪರ್ಧೆಗಳಿಂದ ಜಯ. ವಿದ್ಯಾರ್ಥಿಗಳಿಗೆ ಅನುಕೂಲಕರ ಸನ್ನಿವೇಶ. ಸಾಂಸಾರಿಕ ಸುಖದಲ್ಲಿ ಪರಸ್ಪರರ ಸಹಕಾರ ಪ್ರೋತ್ಸಾಹ.

ಮೀನ: ಉತ್ತಮ ಆರೋಗ್ಯ. ಸ್ವಪ್ರಯತ್ನದಿಂದ ಕೂಡಿದ ಕಾರ್ಯ ವೈಖರಿ. ಭೂಮಾದಿ ವಿಚಾರಗಳಲ್ಲಿ ಪ್ರಗತಿ. ಸಾಂಸಾರಿಕ ಸುಖ ತೃಪ್ತಿದಾಯಕ. ಆರ್ಥಿಕ ಅಭಿವೃದ್ಧಿ. ಮಿತ್ರರಿಂದ ಸಹಕಾರ. ದೂರ ಪ್ರಯಾಣದಲ್ಲಿ ವಿಳಂಬ. ಅನ್ಯರ ಸಹಾಯ ನಿರೀಕ್ಷಿಸದಿರಿ. ದೇವತಾ ಸ್ಥಳ ಸಂದರ್ಶನ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next