ಮೇಷ: ಸರಕಾರಿ ವ್ಯವಹಾರಗಳಲ್ಲಿ ಪ್ರಗತಿ. ಅಪೇಕ್ಷಿಸಿದಂತೆ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ಅಭಿವೃದ್ಧಿಗಾಗಿ ಧನವ್ಯಯ ಸಂಭವ. ಅವಿವಾಹಿತರಿಗೆ ವಿವಾಹ ಭಾಗ್ಯ.
ವೃಷಭ: ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಮಯ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ವಾತಾವರಣ. ಸಾಂಸಾರಿಕವಾಗಿ ನೆಮ್ಮದಿಯ ದಿನ.
ಮಿಥುನ: ಅಧ್ಯಯನದಲ್ಲಿ ತಲ್ಲೀನತೆ ಪ್ರಗತಿ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಸಹೋದ್ಯೋಗಿಗಳಿಂದ ಸಹೋದರ ಸಮಾನರಿಂದ ಸಂದರ್ಭೋಚಿತ ಸಹಾಯ ಸಂಭವ. ಗೃಹದಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ತೋರಬಹುದು.
ಕರ್ಕ: ಆರೋಗ್ಯ ಗಮನಿಸಿ. ನಿರ್ಲಕ್ಷ್ಯ ಮಾಡದಿರಿ. ತಾಳ್ಮೆಯಿಂದ ಕೆಲಸ ಕಾರ್ಯ ನಿರ್ವಹಿಸಿ. ಆರ್ಥಿಕ ವಿಚಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ಮಧ್ಯಮ. ಗುರುಹಿರಿಯರ ಸಹಕಾರ ಲಭ್ಯ. ವಿದ್ಯಾರ್ಥಿಗಳಿಗೆ ಅನುಕೂಲ ಪರಿಸ್ಥಿತಿ.
Related Articles
ಸಿಂಹ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಹೆಚ್ಚಿದ ದೇಹಾಯಾಸ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷೆಗೂ ಮೀರಿದ ಧನಾರ್ಜನೆ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ನಿರೀಕ್ಷಿಸಿದ ಸ್ಥಾನಮಾನ ಲಭ್ಯ.
ಕನ್ಯಾ: ಸುದೃಢ ಆರೋಗ್ಯ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ವರಮಾನ. ಆಲೋಚಿಸಿದ ರೀತಿಯಲ್ಲಿ ಕೆಲಸ ಕಾರ್ಯಗಳು ಸಾಧಿಸಿದ್ದರಿಂದ ಮಾನಸಿಕ ತೃಪ್ತಿ. ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂತಸದ ವಾತಾವರಣ.
ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ದೂರ ಪ್ರಯಾಣ ಸಂಭವ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹಠಮಾರಿತನ ಸಲ್ಲದು. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ ಪ್ರಗತಿ. ಅನಗತ್ಯ ಹಣಕಾಸಿನ ಖರ್ಚಿಗೆ ಆಸ್ಪದ ನೀಡದಿರಿ.
ವೃಶ್ಚಿಕ: ಗೃಹದಲ್ಲಿ ಅತಿಥಿಗಳ ಆಗಮನದಿಂದ ಸಂತಸ. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉತ್ತಮ ಧನವೃದ್ಧಿ. ಮಿತ್ರರಿಂದ ಲಾಭ. ಮನೋರಂಜನೆಯ ದಿನ.
ಧನು: ಉತ್ತಮ ಧನಾಗಮನ. ದೂರ ಪ್ರಯಾಣ. ಧಾರ್ಮಿಕ ಸ್ಥಳ ಸಂದರ್ಶನದಿಂದ ಮನಃಸಂತೋಷ. ಗುರುಹಿರಿಯರಿಂದ ಪ್ರೋತ್ಸಾಹ. ಮಕ್ಕಳ ನಿಮಿತ್ತ ಹೆಚ್ಚಿದ ಪರಿಶ್ರಮ. ಆರೋಗ್ಯದ ಕಡೆ ಗಮನಹರಿಸಿ. ಮಿತ್ರರಿಂದ ಸಹಾಯ.
ಮಕರ: ದೂರ ಪ್ರಯಾಣ. ದೂರದ ಊರು ಗಳಲ್ಲಿ ಉಳಿತಾಯದ ಆಲೋಚನೆ. ಕುಟುಂಬ ಸಮೇತರಾಗಿ ಸಮಾರಂಭಗಳಲ್ಲಿ ಪಾಲ್ಗೊಳ್ಳು ವಿಕೆಯಿಂದ ಸಂತಸ. ಗುರುಹಿರಿಯರಿಂದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ.
ಕುಂಭ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ತಾಯಿ ಸಮಾನ ವರ್ಗದವರಿಂದ ಪ್ರೋತ್ಸಾಹ. ಮಾರ್ಗದರ್ಶನ. ಹಣಕಾಸಿನ ವಿಚಾರದಲ್ಲಿ ವ್ಯವಹಾರದಲ್ಲಿ ಪ್ರಗತಿ. ಸೇವಕ ವರ್ಗದವರಿಗೆ ಲಾಭ. ದಾಂಪತ್ಯ ತೃಪ್ತಿಕರ.
ಮೀನ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಸಫಲತೆ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ. ಜನಮನ್ನಣೆ ಪ್ರಾಪ್ತಿ. ನಿರೀಕ್ಷಿಸಿದಂತೆ ಸಹಾಯ. ದಂಪತಿಗಳು ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಸಂತೋಷ. ಆಹಾರೋದ್ಯಮ, ವಸ್ತ್ರೋದ್ಯಮ, ಆಭರಣೋದ್ಯಮದವರಿಗೆ ಲಾಭ.