Advertisement

Daily Horoscope: ಆಲೋಚಿಸಿ ಮಾಡಿದ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭದಾಯಕ ಪ್ರಗತಿ

07:11 AM May 16, 2023 | Team Udayavani |

ಮೇಷ: ಆರೋಗ್ಯದಲ್ಲಿ ಮಧ್ಯಮ ಸುಖ. ಆಸ್ತಿ ವಿಚಾರದ ಸಂಪತ್ತುಗಳಲ್ಲಿ ಪ್ರಗತಿ. ಉತ್ತಮ ಧನಾರ್ಜನೆ. ಮಾನಸಿಕ ಒತ್ತಡದಿಂದ ಕೂಡಿದ ಕಾರ್ಯ ವೈಖರಿ. ವ್ಯಾಜ್ಯಗಳಿಗೆ ಅವಕಾಶ ನೀಡದಿರಿ. ಗುರುಹಿರಿಯರ ಮಾರ್ಗದರ್ಶನದಿಂದ ನೆಮ್ಮದಿ.

Advertisement

ವೃಷಭ: ಉತ್ಸಾಹದಿಂದ ಕೂಡಿದ ದಿನ. ಆರೋಗ್ಯದಲ್ಲಿ ಸುಧಾರಣೆ ಸಂತೋಷ. ನಿರೀಕ್ಷಿತ ಕಾರ್ಯಗಳಲ್ಲಿ ಸಫ‌ಲತೆ. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿಯ ಬದಲಾವಣೆ. ಯಶಸ್ಸು ಪ್ರಾಪ್ತಿ. ಸಾಂಸಾರಿಕವಾಗಿ ನೆಮ್ಮದಿಯ ದಿನ.

ಮಿಥುನ: ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಸಂದರ್ಭೋಚಿತವಾಗಿ ಆಲೋಚಿಸಿ ಮಾಡಿದ ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭದಾಯಕ ಪ್ರಗತಿ. ಧಾರ್ಮಿಕ ಚಟುವಟಿಕೆಗಳಲ್ಲಿಯೂ, ದೀರ್ಘ‌ ಪ್ರಯಾಣಗಳಲ್ಲಿಯೂ ಆಸಕ್ತಿ.

ಕರ್ಕ: ಆರೋಗ್ಯ ವೃದ್ಧಿ. ಶಿಸ್ತಿನಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಉತ್ತಮ ಜನರ ಒಡನಾಟ. ಗೃಹೋಪಕರಣ ವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಹೆಚ್ಚಿನ ಗಮನಹರಿಸುವುದು ಉತ್ತಮ.

ಸಿಂಹ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ದೃಢ ನಿರ್ಧಾರಗಳಿಂದ ಅಭಿವೃದ್ಧಿ. ಅನಿರೀಕ್ಷಿತ ಧನಾಗಮನ. ಆಸ್ತಿ ವಿಚಾರವಾಗಿ ಪ್ರಗತಿ. ಪತ್ರ ವ್ಯವಹಾರಗಳಲ್ಲಿ ಲಾಭ. ನೂತನ ಮಿತ್ರರ ಭೇಟಿ. ಅವಿವಾಹಿತರಿಗೆ ಕಂಕಣ ಭಾಗ್ಯ.

Advertisement

ಕನ್ಯಾ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಅನ್ಯರ ವಿಚಾರದಲ್ಲಿ ಜಾಗ್ರತೆಯಿಂದ ವ್ಯವಹರಿಸಿ. ಧನಾರ್ಜನೆಗೆ ಕೊರತೆಯಾಗದು. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ ಪಡೆಯಿರಿ.

ತುಲಾ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ಪರಸ್ಪರ ಪ್ರೋತ್ಸಾಹ ಸಹಕಾರ. ಉತ್ತಮ ಧನಾರ್ಜನೆ. ಅಧ್ಯಯನಶೀಲರಿಗೆ ಅನುಕೂಲಕರ ವಾತಾವರಣ.

ವೃಶ್ಚಿಕ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ದೈಹಿಕ ಶ್ರಮ ಅಧಿಕವಾದ್ದರಿಂದ ದೇಹಾಯಾಸ ತೋರೀತು. ದೀರ್ಘ‌ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಸುಖ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ.

ಧನು: ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯ ಸಾಧನೆ. ಗುರುಹಿರಿಯರ ಆರೋಗ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಸಣ್ಣ ಪ್ರಯಾಣ ಸಂಭವ. ಉದ್ಯೋಗದಲ್ಲಿ ಬದಲಾವಣೆಗೆ ಅವಕಾಶ. ಸಹೋದ್ಯೋಗಿ ಸಹಕಾರದಿಂದ ಪ್ರಗತಿ.

ಮಕರ: ದೇಶ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ‌ ಸಂಚಾರ ಸಂಭವ. ಗೌರವಾದಿ ಕೌಟುಂಬಿಕ ಸುಖ ವೃದ್ಧಿ. ಗೃಹೋಪಕರಣ ವಸ್ತುಗಳಿಗೆ ಖರ್ಚು. ಅಧ್ಯಯನಶೀಲರಿಗೆ ವಿಫ‌ುಲ ಅವಕಾಶ. ಆರೋಗ್ಯದಲ್ಲಿ ಪ್ರಗತಿ.

ಕುಂಭ: ಉತ್ತಮ ದೈಹಿಕ ಆರೋಗ್ಯ. ಧನಾರ್ಜನೆಗೆ ಸರಿಸಮವಾದ ಖರ್ಚು. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಹೆಚ್ಚಿದ ಜವಾಬ್ದಾರಿ. ಉದ್ಯೋಗ ವ್ಯವಹಾರದಲ್ಲಿ ಚರ್ಚೆಗೆ ಅಶಕಾಶ ನೀಡದಿರಿ. ಗುರುಹಿರಿಯರ ಉತ್ತಮ ಪ್ರೋತ್ಸಾಹ.

ಮೀನ: ದೇವತಾ ಕಾರ್ಯಗಳಲ್ಲಿ ಆಸಕ್ತಿ. ದೂರದ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಗುರುಗಳ ಸಹಕಾರ ಮಾರ್ಗದರ್ಶನದ ಸುಖ. ಬಹಳ ಸಮಯದಿಂದ ವಿಳಂಬಿತ ಕಾರ್ಯಗಳಲ್ಲಿ ಪ್ರಗತಿ. ಪರರಿಗೆ ಸಹಾಯಹಸ್ತ ಚಾಚುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯಿಸಿ. ವಿದ್ಯಾರ್ಥಿಗಳಿಗೆ ಗುರುಗಳ ಸಹಕಾರ ಮಾರ್ಗದರ್ಶನ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next