ಮೇಷ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಗೌರವದಿಂದ ಕೂಡಿದ ಧನಾರ್ಜನೆ. ದೂರ ಪ್ರಯಾಣ. ಅವಿವಾಹಿತರಿಗೆ ಕಂಕಣ ಭಾಗ್ಯ. ಸಾಂಸಾರಿಕ ಸುಖ ವೃದ್ಧಿ. ಸರಕಾರೀ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸಹೋದರ ಸಮಾನರ ನಿಮಿತ್ತ ಧನ ವ್ಯಯ.
ವೃಷಭ: ಅವಿವಾಹಿತರಿಗೆ ವಿವಾಹ ಭಾಗ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಸಫಲತೆ. ಸ್ಥಾನಮಾನ ಗೌರವಾದಿಗಳು ವೃದ್ಧಿ. ಹಣಕಾಸಿನ ಉಳಿತಾಯ. ಭೂಮ್ಯಾದಿ ವ್ಯವಹಾರಗಳಲ್ಲಿ ಲಾಭ.
ಮಿಥುನ: ದೈರ್ಯ ಶೌರ್ಯ ಜವಾಬ್ದಾರಿಯಿಂದ ಕೆಲಸ ನಿರ್ವಹಣೆ. ಪರಿಶ್ರಮದಿಂದ ಸಫಲತೆ. ಆರೋಗ್ಯ ಗಮನಿಸಿ. ಮಾನಸಿಕ ಒತ್ತಡಕ್ಕೆ ಒಳಗಾಗದಿರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ. ಸಾಂಸಾರಿಕ ಸುಖ ತೃಪ್ತಿದಾಯಕ. ಬಂಧುಮಿತ್ರರಿಂದ ಸಹಾಯ ಸಹಕಾರ.
ಕರ್ಕ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತಸ. ಗುರುಹಿರಿಯರ ಆಶೀರ್ವಾದದಿಂದ ಸಂತೋಷ. ಗೃಹೋಪಕರಣ ವಸ್ತುಗಳ ಸಂಗ್ರಹ. ಆಸ್ತಿ ವಿಚಾರದಲ್ಲಿ ನಿರೀಕ್ಷಿತ ಪ್ರಗತಿ. ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿ.
Related Articles
ಸಿಂಹ: ದೈಹಿಕ ಆರೋಗ್ಯದ ಬಗ್ಗೆ ಗಮನಹರಿಸಿ. ಅಧಿಕ ಒತ್ತಡಕ್ಕೆ ಅವಕಾಶ ಕೊಡದಿರಿ. ಹಣಕಾಸಿನ ವಿಚಾರದಲ್ಲಿ ಮಂದಗತಿಯಲ್ಲಿ ಪ್ರಗತಿ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಚರ್ಚೆಗೆ ಅವಕಾಶ ಕಲ್ಪಿಸದಿರಿ. ಗುರುಹಿರಿಯರಲ್ಲಿ ಸಮಾಧಾನದಿಂದ ವ್ಯವಹರಿಸಿ. ಮಕ್ಕಳಿಂದ ಸಂತೋಷ.
ಕನ್ಯಾ: ದೀರ್ಘ ಪ್ರಯಾಣ ಸಂಭವ. ಪಾಲುಗಾರಿಕಾ ಕ್ಷೇತ್ರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ದಂಪತಿಗಳಲ್ಲಿ ಅನ್ಯೋನ್ಯತೆಗೆ ಕೊರತೆಯಾಗದಿರಲಿ. ಹಿರಿಯರಿಂದ, ಮಕ್ಕಳಿಂದ ಸುಖ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ.
ತುಲಾ: ಪರ ಸ್ತ್ರೀ ಪುರುಷರಿಂದ ಸಹಾಯ. ಕೆಲಸ ಕಾರ್ಯಗಳಲ್ಲಿ ಚುರುಕುತನ ಬುದ್ಧಿವಂತಿಕೆಯಿಂದ ಕೂಡಿದ ಪ್ರವೃತ್ತಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಗೃಹದಲ್ಲಿ ಮನೋರಂಜನೆಯ ಸಂಭ್ರಮ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.
ವೃಶ್ಚಿಕ: ದೂರ ಪ್ರಯಾಣ. ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ. ಮಿತ್ರರ ಸಹಕಾರ. ನಿರಂತರ ಧನ ಸಂಚಯನ. ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸಾಮಾಜಿಕ ಸುಧಾರಣೆ ಕಾರ್ಯಗಳಲ್ಲಿ ಆಸಕ್ತಿ.
ಧನು: ಕೆಲಸ ಕಾರ್ಯಗಳಲ್ಲಿ ಮಗ್ನತೆ. ನಿರೀಕ್ಷಿಸಿದಂತೆ ಸಫಲತೆ. ಕೀರ್ತಿ ಶ್ರೇಯಸ್ಸು ಲಭಿಸಿದ ಸಂತೋಷ. ಪರಊರು ಪರ, ದೇಶದ ವ್ಯವಹಾರಗಳಲ್ಲಿ ನೆಮ್ಮದಿ. ಅನಿರೀಕ್ಷಿತ ಧನಲಾಭ. ದಾಂಪತ್ಯ ಸುಖ ತೃಪ್ತಿದಾಯಕ. ಉತ್ತಮ ಧನಾರ್ಜನೆ.
ಮಕರ: ಆರೋಗ್ಯ ಗಮನಿಸಿ. ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಮಿತ್ರರಿಂದ ಸಹಾಯ. ಸೇವಾವರ್ಗದವರಿಂದ ಸಹಕಾರ. ಉದ್ಯೋಗದಲ್ಲಿ ಪ್ರಗತಿ. ಹಠಮಾಡದೇ ಕಾರ್ಯಪ್ರವೃತ್ತರಾಗಿ. ದಂಪತಿಗಳಲ್ಲಿ ಪರಸ್ಪರ ಸಹಕಾರ.
ಕುಂಭ: ವಿದ್ಯೆ ಅಧ್ಯಯನ ಸಂಬಂಧ ವಿಚಾರಗಳಲ್ಲಿ ಪ್ರಗತಿ. ಉತ್ತಮ ಸ್ಥಾನ ಗೌರವಾದಿ ಪ್ರಾಪ್ತಿ. ಸಂದಭೋìಚಿತವಾಗಿ ಪ್ರತಿಭೆ ಪ್ರದರ್ಶನದಿಂದ ಕೆಲಸ ಕಾರ್ಯಗಳಲ್ಲಿ ಸಫಲತೆ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.
ಮೀನ: ದೂರ ಪ್ರಯಾಣ. ನೂತನ ಮಿತ್ರರ ಭೇಟಿ. ಗೃಹೋಪ ವಸ್ತುಗಳ ಸಂಗ್ರಹ. ಮಿತ್ರರಿಂದ ಉತ್ತಮ ಸಹಕಾರ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಕ್ಕಳಿಂದ ಸುವಾರ್ತೆ.