Advertisement

ರಾಶಿ ಫಲ: ಪರರಿಗೆ ಸಹಾಯ ಮಾಡಿದ ತೃಪ್ತಿ, ಉದ್ಯೋಗ ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ

07:33 AM Mar 09, 2023 | Team Udayavani |

ಮೇಷ: ವಿದ್ಯಾರ್ಥಿಗಳಿಗೆ ಅದೃಷ್ಟದ ದಿನ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೇವತಾ ಸನ್ನಿಧಾನಕ್ಕೆ ಭೇಟಿ. ಗುರುಹಿರಿಯರ ಆಶೀರ್ವಾದದಿಂದ ಸಕಲ ಕಾರ್ಯ ಜಯ ಸುಖ ಸಂತೋಷ ವೃದ್ಧಿ. ಅನಿರೀಕ್ಷಿತ ಧನ ಲಾಭ. ಆರೋಗ್ಯ ಸುದೃಢ.

Advertisement

ವೃಷಭ: ದೂರ ಸಂಚಾರ. ದೂರದ ವಿದೇಶ ವ್ಯವಹಾರಗಳಲ್ಲಿ ಪ್ರಗತಿ. ಹೆಚ್ಚಿದ ವರಮಾನ. ಸತ್ಕಾರ್ಯಕ್ಕೆ ಧನವ್ಯಯ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಅನಗತ್ಯ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ.

ಮಿಥುನ: ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯವೈಖರಿ. ಸಣ್ಣ ಪ್ರಯಾಣ. ಪರರಿಗೆ ಸಹಾಯ ಮಾಡಿದ ತೃಪ್ತಿ. ಉದ್ಯೋಗ ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ.

ಕರ್ಕ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ ಮೆಚ್ಚುಗೆ. ಅನಿರೀಕ್ಷಿತ ಪ್ರಗತಿ. ಗೃಹದಲ್ಲಿ ಧಾರ್ಮಿಕ ಚಟುವಟಿಕೆಗಳು. ನಡೆದು ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವ ಕಾಲ.

ಸಿಂಹ: ನಿರೀಕ್ಷಿಸಿದಂತೆ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫ‌ಲತೆ ಸ್ಥಾನ ಗೌರವಾದಿ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಜನಪದರಿಂದ ಮೆಚ್ಚುಗೆ. ಅಧಿಕಾರ ಪ್ರಾಪ್ತಿ. ಸಂದಭೋìಚಿತ ಮಾರ್ಗದರ್ಶನದಿಂದ ಜನಮನ್ನಣೆ. ಹೆಚ್ಚಿದ ವರಮಾನ. ಆರೋಗ್ಯದಲ್ಲಿ ಸುದಾರಣೆ.

Advertisement

ನ್ಯಾ: ಉಳಿತಾಯದ ಬಗ್ಗೆ ಚಿಂತನೆ ಹೂಡಿಕೆಗಳಲ್ಲಿ ಆಸಕ್ತಿ. ಎಲ್ಲಾ ವಿಚಾರಗಳಲ್ಲಿ ತಾಳ್ಮ ಸಹನೆ ಅಗತ್ಯ. ಅನಗತ್ಯ ವಿಚಾರಗಳಿಗೆ ತಲೆ ಕೊಡದಿರಿ. ಸಾಧ್ಯವಾದಷ್ಟು ಮೌನ ವಹಿಸುವುದು ಉತ್ತಮ. ದೇವತಾ ಸ್ಥಳ ಸಂದರ್ಶನದಿಂದ ನೆಮ್ಮದಿ.

ತುಲಾ: ದೀರ್ಘ‌ ಪ್ರಯಾಣ. ನೂತನ ಉದ್ಯೋಗ ವ್ಯವಹಾರ ಲಭ್ಯ. ಪರರ ಧನ ಸಂಪತ್ತಿನ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ಸ್ಥಾನ ಪ್ರಾಪ್ತಿಗೆ ಧನವ್ಯಯ. ದಾಂಪತ್ಯದಲ್ಲಿ ಕಲಹಕ್ಕೆ ಅವಕಾಶ ನೀಡದಿರಿ. ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ: ದೂರದ ಪ್ರಯಾಣ ನೂತನ ಮಿತ್ರರ ಸಮಾಗಮ. ಸಂತೋಷ. ಪಾರದರ್ಶಕತೆ ವ್ಯವಹಾರದಿಂದ ಜನಮನ್ನಣೆ. ಬಾಂಧವ್ಯ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣದಿಂದ ನೆಮ್ಮದಿ. ನಿರೀಕ್ಷಿತ ಫ‌ಲಿತಾಂಶ ಪ್ರಾಪ್ತಿ.

ಧನು: ಗೃಹ ವಾಹನ ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಸ್ಥಾನಮಾನ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ಗುರುಹಿರಿಯರ ಉತ್ತಮ ಮಾರ್ಗದರ್ಶನ ಲಭ್ಯ. ದಂಪತಿಗಳು ಪರಸ್ಪರ ಸಹಕಾರ ಪ್ರವೃತ್ತರಾಗಿರಿ.

ಮಕರ: ಆರೋಗ್ಯ ವೃದ್ಧಿ. ಸಮಾಜದಲ್ಲಿ ಗೌರವ ವೃದ್ಧಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ದಂಪತಿಗಳಲ್ಲಿ ಅನುರಾಗ ವೃದ್ಧಿ. ದೂರದ ವ್ಯವಹಾರಗಳಲ್ಲಿ ತಲ್ಲೀನತೆ. ಗೃಹದಲ್ಲಿ ಸಂತಸದ ವಾತಾವರಣ.

ಕುಂಭ: ದೂರ ಪ್ರಯಾಣದಲ್ಲಿ ಸಫ‌ಲತೆ. ನಿರೀಕ್ಷಿತ ಧನ ಸ್ಥಾನಮಾನ ಪ್ರಾಪ್ತಿ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಮಕ್ಕಳೊಂದಿಗೆ ಚರ್ಚೆ. ಗುರುಹಿರಿಯರ ಆರೋಗ್ಯ ಗಮನಿಸಿ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃ ತೃಪ್ತಿ.

ಮೀನ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನ ಸುಖ ಲಭ್ಯ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ಪರರ ಸಹಾಯದಿಂದ ಪ್ರಗತಿ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಶ್ರಮ.ದಂಪತಿಗಳು ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಅನಿರೀಕ್ಷಿತ ಧನ ಲಾಭ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next