Advertisement

ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ, ಆರೋಗ್ಯದಲ್ಲಿ ಸುಧಾರಿಕೆ

07:18 AM Mar 03, 2023 | Team Udayavani |

ಮೇಷ: ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಅಧಿಕ ಪರಿಶ್ರಮದಿಂದ ಸಫ‌ಲತೆ ಸ್ಥಾನ ಗೌರವಾದಿ ಲಭ್ಯ. ನೆಮ್ಮದಿ ಕಮ್ಮಿ. ಬಂಧುಮಿತ್ರರಿಗೆ ಹೆಚ್ಚಿದ ಒತ್ತಡ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಸ್ಪಷ್ಟ ನಿರ್ಧಾರದಿಂದ ನಿರೀಕ್ಷಿತ ಸಫ‌ಲತೆ.

Advertisement

ವೃಷಭ: ಮನೋರಂಜನೆಯಲ್ಲಿ ಕಾಲ ಕಳೆಯುವಿಕೆ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ಗೌರವಾದಿ ಪ್ರಗತಿ. ಅವಿವಾಹಿತರಿಗೆ ವಿವಾಹ ಯೋಗ. ಯೋಗ್ಯ ಸಂಬಂಧ ಒದಗಿ ಬರುವುದು.

ಮಿಥುನ: ಕೆಲಸದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನಃತೃಪ್ತಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಿಕೆ. ಹಿರಿಯರ ಆರೋಗ್ಯ ಗಮನಿಸಿ. ಮನೆಯಲ್ಲಿ ಸಂತಸದ ವಾತಾವರಣ.

ಕರ್ಕ: ಹಣಕಾಸಿನ ನಿರೀಕ್ಷೆಯಲ್ಲಿ ಸಫ‌ಲತೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯ ವೈಖರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ, ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಲಭ್ಯ.

ಸಿಂಹ: ದೂರ ಸಂಚಾರ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಅಭಿವೃದ್ಧಿ, ಪ್ರಗತಿ. ಗುರುಹಿರಿಯರ ಸಂದಭೋìಚಿತ ಸಹಾಯ ಸಹಕಾರ ಲಭ್ಯ. ಜವಾಬ್ದಾರಿಯುತ ಮಾತಿನಿಂದ ವ್ಯವಹಾರಗಳಲ್ಲಿ ಶ್ರೇಯಸ್ಸು. ಮಕ್ಕಳ ವಿಚಾರದಲ್ಲಿ ಜಾಗ್ರತೆ ವಹಿಸಿ.

Advertisement

ಕನ್ಯಾ: ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಬರುವುದು. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಬಂಧುಮಿತ್ರರ ಸಹಕಾರ. ಗೃಹ ಉಪಯೋಗ ವಸ್ತುಗಳ ಸಂಗ್ರಹ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಅಭಿವೃದ್ಧಿ.

ತುಲಾ: ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಲಾಭ, ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡು ವಂತಹ ಕಾರ್ಯ ವೈಖರಿ. ಸ್ವರ್ಜಿತ ಧನ ಸಂಪತ್ತು ವೃದ್ಧಿ. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ.

ವೃಶ್ಚಿಕ: ಅನಿರೀಕ್ಷಿತ ಧನಸಂಪತ್ತಿನ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಸಂಸಾರದಲ್ಲಿ ನೆಮ್ಮದಿ.

ಧನು: ಕೆಲಸ ಕಾರ್ಯಗಳಲ್ಲಿ ಚಾಣಕ್ಷತನ ಜವಾಬ್ದಾರಿಯಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪ್ರಗತಿಪರ ಬದಲಾವಣೆ. ಗುರುಹಿರಿಯರ ಆರೋಗ್ಯ ಸುಧಾರಣೆ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗದಂತೆ ಕಾರ್ಯ ಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ ಸಹಕಾರ ಅಗತ್ಯ. ಬಂಧುಮಿತ್ರರಲ್ಲಿ ನಿಷ್ಠೂರ ವರ್ತನೆ ಸಲ್ಲದು. ದೀರ್ಘ‌ ಪ್ರಯಾಣ ಸಂಭವ.

ಕುಂಭ: ಅಧ್ಯಯನದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಪ್ರಗತಿ. ದೂರದ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ ಲಭ್ಯ.

ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ. ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ದೇವತಾ ಸ್ಥಳ ಸಂದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next