Advertisement

ರಾಶಿ ಫಲ: ನಿರೀಕ್ಷಿತ ಧನಾಗಮನ, ಪಾಲುದಾರಿಕೆ ವಿಚಾರ ದಲ್ಲಿ ತಾಳ್ಮೆ, ಸಹನೆ ಅಗತ್ಯ

07:36 AM Mar 19, 2023 | Team Udayavani |

ಮೇಷ: ಅನಿರೀಕ್ಷಿತ ಧನಾಗಮ. ಉತ್ತಮ ಸ್ಥಾನ ಗೌರವ ಪ್ರಾಪ್ತಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ಗುರುಹಿರಿಯರಿಂದ ಪ್ರೋತ್ಸಾಹ ಇತ್ಯಾದಿ ಶುಭಫ‌ಲ. ಮನೆಯಲ್ಲಿ ಸಂತಸದ ವಾತಾವರಣ.

Advertisement

ವೃಷಭ: ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಪಾಲುದಾರಿಕಾ ವೃತ್ತಿ ಕ್ಷೇತ್ರದವರಿಗೆ ದೂರದ ವ್ಯವಹಾರದಲ್ಲಿ ಪ್ರಗತಿ. ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯ ವೃದ್ಧಿ. ಗುರುಹಿರಿಯ ರನ್ನು ಅನುಸರಿಸಿ ಅಭಿವೃದ್ಧಿ.

ಮಿಥುನ: ಮಿತ್ರರಿಂದಲೂ ಸಹೋದ್ಯೋಗಿ ಗಳಿಂದಲೂ ಸಿಗುವ ಸಹಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ನಿರೀಕ್ಷಿತ ಧನಾಗಮನ. ಪಾಲುದಾರಿಕೆ ವಿಚಾರ ದಲ್ಲಿ ತಾಳ್ಮೆ, ಸಹನೆ ಅಗತ್ಯ.

ಕರ್ಕ: ಉನ್ನತ ಸ್ಥಾನ ಸುಖ. ಗೌರವ ಆದರಾದಿಗಳು ವೃದ್ಧಿ. ಉತ್ತಮ ಧನಾರ್ಜನೆ. ಮಿತ್ರವರ್ಗದಿಂದ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಗುರುಹಿರಿಯರ ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣ ಸಂಭವ.

ಸಿಂಹ: ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಪುನರಾರಂಭಗೊಳ್ಳುವ ಸ್ಥಿತಿಯಿಂದ ನೆಮ್ಮದಿ. ಆದಾಯ ಉತ್ತಮವಾಗಿದ್ದರೂ ಖರ್ಚಿಗೆ ಹಲವು ಮಾರ್ಗ. ಮಾತನಾಡುವಾಗ ತಾಳ್ಮೆ ಎಚ್ಚರ ಅಗತ್ಯ. ಗುರುಹಿರಿಯರಿಂದ ಪ್ರೋತ್ಸಾಹ.

Advertisement

ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಒಗ್ಗಟ್ಟಿನಿಂದ ವ್ಯವಹರಿಸಿದರೆ ಅಧಿಕ ಧನಲಾಭ ಸಂಭವ. ದೂರದ ಕಾರ್ಯಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಕೂಡಿಬಂದಾವು. ಸಾಂಸಾರಿಕ ಸುಖ ತೃಪ್ತಿದಾಯಕ.

ತುಲಾ: ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾರ್ಜನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ. ಸ್ವಲ್ಪ ಮಾನಸಿಕ ಒತ್ತಡ. ಅನುರಾಗ ವೃದ್ಧಿ. ಗುರುಹಿರಿಯರಿಂದ ಉತ್ತಮ ಪ್ರೋತ್ಸಾಹ. ವಿದ್ಯಾರ್ಥಿ ಗಳಿಗೆ ಒಳ್ಳೆಯ ಅವಕಾಶ.

ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ. ಗೌರವಾದಿ ಸುಖ ಪ್ರಾಪ್ತಿ. ಆರ್ಥಿಕ ವಿಚಾರದಲ್ಲಿ ಮನಃಸಂತೋಷ. ದಾಂಪತ್ಯ, ಸಂಸಾರಿಕ ವಿಚಾರದಲ್ಲಿ, ಗುರುಹಿರಿಯರ ವಿಚಾರದಲ್ಲಿ ಸಂತಸದ ವಾತಾವರಣ. ಇತ್ಯಾದಿ ಶುಭಫ‌ಲ.

ಧನು: ಆರೋಗ್ಯದಲ್ಲಿ ಸುಧಾರಣೆ. ಮಿತ್ರರಲ್ಲಿ, ಪಾಲುದಾರರಲ್ಲಿ ತಾಳ್ಮೆ ಸಹನೆಯಿಂದ ವ್ಯವಹರಿಸಿ. ದುಡುಕು ನಿರ್ಧಾರಕ್ಕೆ ಅವಕಾಶ ನೀಡದಿರಿ. ಸಂತೋಷ ವೃದ್ಧಿ. ಉತ್ತಮ ಧನಾರ್ಜನೆ. ಗುರುಹಿರಿಯರ ಆರೋಗ್ಯದಲ್ಲಿ ಅಭಿವೃದ್ಧಿಯ ಸೂಚನೆ.

ಮಕರ: ಆರೋಗ್ಯ ಉತ್ತಮ. ಧನಾರ್ಜನೆಯ ವಿಚಾರದಲ್ಲಿ ಅಡೆತಡೆಗಳು ನಿವಾರಣೆ. ಸಹೋದ್ಯೋಗಿಗಳ, ಪಾಲುದಾರರ ಸಹಕಾರದಿಂದ ವ್ಯವಹಾರ ಪ್ರಗತಿ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಜವಾಬ್ದಾರಿಯುತ ನಡೆ.

ಕುಂಭ: ದೀರ್ಘ‌ ಪ್ರಯಾಣದಿಂದ ಆಯಾಸ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಸಾಧನೆ. ಅಧಿಕ ಧನ ಸಂಪಾದನೆಯ ಸಮಯ. ಗೃಹ, ಭೂಮಿ ಇತ್ಯಾದಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಆರೋಗ್ಯದಲ್ಲಿ ಗಮನಹರಿಸಿ.

ಮೀನ: ಉದ್ದೇಶಿತ ಕಾರ್ಯ ಸಾಧನೆಗಾಗಿ ದೀರ್ಘ‌ ಪ್ರಯಾಣ. ನಾಯಕತ್ವ ಗುಣವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮೇಲಾಧಿಕಾರಿಗಳ ವಿಶ್ವಾಸಕ್ಕಾಗಿ ಹೆಚ್ಚಿದ ಶ್ರಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಗುರುಹಿರಿಯರೊಂದಿಗೆ ತಾಳ್ಮೆ, ಸಹನೆಯಿಂದ ವ್ಯವಹರಿಸಿ. ದೇವತಾ ಸ್ಥಳ ಸಂದರ್ಶನ. ಉತ್ತಮ ಆರೋಗ್ಯ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next