ಮೇಷ: ತಾಳ್ಮೆ, ಸಹನೆ ಕಳೆದುಕೊಳ್ಳದೇ ಕಾರ್ಯ ನಿರ್ವಹಿಸಿ. ಆರ್ಥಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಏರುಪೇರು ಸಂಭವ. ಮನೆ, ಆಸ್ತಿ ವಿಚಾರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.
ವೃಷಭ: ಅನಿರೀಕ್ಷಿತ ಸ್ಥಾನಮಾನ ಗೌರವಾದಿ ಸುಖ ಸಂಭವ. ಉದ್ಯೋಗ ವ್ಯವಹಾರದಲ್ಲಿ ಸಫಲತೆ. ದೈನಂದಿನ ಚಟುವಟಿಕೆಗಳಲ್ಲಿ ಪರಿಶುದ್ಧತೆಯಿಂದ ಮಾನಸಿಕ ನೆಮ್ಮದಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ.
ಮಿಥುನ: ಉತ್ತಮ ವಾಕ್‌ಚತುರತೆ. ದಾಕ್ಷಿಣ್ಯ ಪ್ರವೃತ್ತಿಯಿಂದ ನಷ್ಟ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಪ್ರಗತಿ. ಗುರುಹಿರಿಯರಿಂದ ಸಹಕಾರ ಮಾರ್ಗದರ್ಶನದ ಲಾಭ. ಗೃಹದಲ್ಲಿ ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.
ಕರ್ಕ: ನಿರೀಕ್ಷೆಯಂತೆ ಅಧಿಕ ಧನಾಗಮನ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ ಸಂಭವ. ಆಸ್ತಿ ಹೂಡಿಕೆ ವಿಚಾರಗಳಲ್ಲಿ ಪ್ರಗತಿ. ದೂರದ ಮಿತ್ರರಿಂದ ಸಹಾಯ ಸುವಾರ್ತೆ.
Related Articles
ಸಿಂಹ: ಹಲವಾರು ವಿಳಂಬಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಂಭವ. ದೂರದ ವ್ಯವಹಾರದಲ್ಲಿ ಧನಲಾಭ. ಮಾತಿನಲ್ಲಿ ಜಾಗ್ರತೆ ವಹಿಸುವುದರಿಂದ ಅಧಿಕ ಲಾಭ ಸಂಭವ. ವಿದ್ಯೆ ಜ್ಞಾನ ಗುರುಹಿರಿಯರಿಂದ ಅನುಕೂಲಕರ ಪರಿಸ್ಥಿತಿ.
ಕನ್ಯಾ: ಆರೋಗ್ಯ ವೃದ್ಧಿ. ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ಸಂಸಾರದಲ್ಲಿ ನೆಮ್ಮದಿ. ಮಕ್ಕಳಿಂದ ಸಂತೋಷ ವಾರ್ತೆ. ಧಾರ್ಮಿಕ ವಿಚಾರಗಳಲ್ಲಿ ಶಕ್ತಿ ವೃದ್ಧಿ. ಗೃಹೋಪಯೋಗ ವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ತುಲಾ: ಆರೋಗ್ಯ ವೃದ್ಧಿ. ಅತೀ ಆಸೆ ಮಾಡದೇ ಬಂದ ಅವಕಾಶ ಉಪಯೋಗಿಸಿಕೊಳ್ಳಿ. ಉತ್ತಮ ಜನ ಮನ್ನಣೆ. ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ. ನಿರೀಕ್ಷಿಸಿದ ಕಾರ್ಯ ಸಾಧಿಸಿದ ಸಮಾಧಾನ. ವಿದ್ಯಾರ್ಥಿಗಳಿಗೆ ಶುಭ ಫಲದ ದಿನ.
ವೃಶ್ಚಿಕ: ರಾಜಕೀಯ ನಾಯಕರಿಗೆ ಉತ್ತಮ ಜನಮನ್ನಣೆ. ಹೆಚ್ಚಿನ ಜವಾಬ್ದಾರಿ ಸಿಗುವ ಅವಕಾಶ. ನೂತನ ಮಿತ್ರರ ಸಮಾಗಮ. ಬಂಧುಗಳಿಂದ ಪ್ರೋತ್ಸಾಹ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಧನು: ಪಾಲುಗಾರಿಕಾ ವ್ಯವಹಾರಸ್ಥರೂ, ದಂಪತಿಗಳು ತಾಳ್ಮೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಪ್ರಯಾಣ ಅವಕಾಶ. ಸ್ಥಾನಮಾನದ ಕೊರತೆ ಕಾಣದು. ಜಲೋತ್ಪನ್ನ ವಸ್ತುಗಳಿಂದ ಲಾಭ. ಆರೋಗ್ಯ ಉತ್ತಮ.
ಮಕರ: ಪರದೇಶದ ಕಾರ್ಯಗಳಲ್ಲಿ ನಿರೀಕ್ಷಿತ ಗೌರವಾದಿ ಪ್ರಾಪ್ತಿ. ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಿತ್ರರಲ್ಲಿ, ಮಕ್ಕಳಲ್ಲಿ ತಾಳ್ಮೆಯಿಂದ ವರ್ತಿಸಿ. ಆಹಾರೋದ್ಯಮ, ಆಭರಣ, ವಸ್ತ್ರ ವ್ಯವಹಾರಸ್ಥರಿಗೆ ನಿರೀಕ್ಷಿತ ಲಾಭ
ಕುಂಭ: ಅನ್ಯರ ಸಹಾಯ ನಿರೀಕ್ಷಿಸದೆ ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಗುರಿ ಸಾಧಿಸಿರಿ. ಧನಾರ್ಜನೆಗೆ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ಯಶಸ್ಸು. ಗಣಿ, ಭೂವ್ಯವಹಾರ, ಆಹಾರೋದ್ಯಮದವರಿಗೆ ಅನುಕೂಲ.
ಮೀನ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ದೇಶ ವಿದೇಶದ ವಿದ್ಯಾಲಯದಲ್ಲಿ ಅವಕಾಶ. ದೀರ್ಘ ಪ್ರಯಾಣದಿಂದ ಲಾಭ. ರಾಜಕೀಯ ಕಾರ್ಯ ಕ್ಷೇತ್ರದಲ್ಲಿ ರಹಸ್ಯ ವ್ಯವಹಾರದಿಂದ ನಿರೀಕ್ಷಿತ ಸಾಧನೆ. ಅಭಿವೃದ್ಧಿದಾಯಕ ಧನಾರ್ಜನೆ.