Advertisement

ರಾಶಿ ಫಲ: ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ, ನಿರೀಕ್ಷಿತ ಧನಲಾಭ

07:38 AM Mar 16, 2023 | Team Udayavani |

ಮೇಷ: ಅತಿಯಾದ ಧಾರಾಳತನ ದಾನ ಧರ್ಮದಿಂದ ಆರ್ಥಿಕ ತೊಂದರೆ ಸಂಭವ. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ನೂತನ ಮಿತ್ರರ ಸಮಾಗಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಸುಖ. ಅರಣ್ಯ ಪ್ರದೇಶ ಮಾರ್ಗ ಪ್ರಯಾಣ.

Advertisement

ವೃಷಭ: ಸ್ತ್ರೀಯರ ಸಹಾಯದಿಂದ ಉತ್ತಮ ಸಂಪತ್ತು ಪ್ರಾಪ್ತಿ. ದಾಂಪತ್ಯ ಸುಖ. ಮಕ್ಕಳ ವಿಚಾರದಲ್ಲಿ ಚರ್ಚೆ ಗೊಂದಲಕ್ಕೆ ಅವಕಾಶ ನೀಡದಿರಿ. ರಾಜಕೀಯ ಕಾರ್ಯದಲ್ಲಿ ಪ್ರಗತಿ. ಗೃಹೋಪವಸ್ತುಗಳ ಖರೀದಿಗೆ ಧನವ್ಯಯ.

ಮಿಥುನ: ಜಲೋತ್ಪನ್ನ ವಸ್ತುಗಳ ವ್ಯವಹಾರದಿಂದ ಲಾಭ. ಮಿತ್ರರಲ್ಲಿ ಗುರುಹಿರಿಯರಲ್ಲಿ, ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ ಗುರಿ ತಲುಪಿ. ನಾನಾ ರೀತಿಯ ಸನ್ನಿವೇಶಗಳು ಎದುರಾಗುವ ಸಮಯ. ನಿರೀಕ್ಷಿತ ಧನಲಾಭ.

ಕರ್ಕ: ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವರಿಂದ ಮೋಸ ಹೋಗದಿರಿ. ಉದ್ಯೋಗ ಕ್ಷೇತ್ರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫ‌ಲ. ನಿರೀಕ್ಷಿತ ಧನಾಗಮ. ಗೃಹೋಪಯೋಗಿ ವಸ್ತುಗಳು, ವಾಹನಾದಿ ವಿಚಾರದಲ್ಲಿ ಶುಭಫ‌ಲ.

ಸಿಂಹ: ದೀರ್ಘ‌ ಪ್ರಯಾಣ. ದೈಹಿಕ ಶ್ರಮವಿದ್ದರೂ ಉತ್ತಮ ಬುದ್ಧಿಶಕ್ತಿ, ಧೈರ್ಯ ವೀರ್ಯ ಉದಾರಾದಿ ಗುಣಗಳಿಂದ ಕಾರ್ಯ ಕ್ಷೇತ್ರದಲ್ಲಿ ಜನಮನ್ನಣೆ. ಬರಹಗಾರರಿಗೆ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಗೌರವದ ಆದರದ ಸಮಯ.

Advertisement

ಕನ್ಯಾ: ಮಿತ್ರರಲ್ಲಿ, ಪಾಲುಗಾರರಲ್ಲಿ ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದಿರಿ. ನೇರವಾಗಿ ವ್ಯವಹರಿಸಿ ನಿರೀಕ್ಷಿತ ಲಾಭ ಪಡೆಯಿರಿ. ಜಲೋತ್ಪನ್ನ ವಸ್ತುಗಳ, ದೀರ್ಘ‌ ಪ್ರಯಾಣದ ವ್ಯವಹಾರಗಳು ಲಾಭದಾಯಕವಾಗಿರುವುದು.

ತುಲಾ: ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರ ಗಳಲ್ಲಿ ಹೆಚ್ಚಿನ ಜವಾಬ್ದಾರಿ ಒತ್ತಡ. ಉತ್ತಮ ಧನಾರ್ಜನೆ ಇದ್ದರೂ ಖರ್ಚಿಗೆ ಹಲವಾರು ಮಾರ್ಗಗಳು ಎದುರಾಗುವುವು. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ.

ವೃಶ್ಚಿಕ: ನಿರೀಕ್ಷಿತ ಸ್ಥಾನ ಗೌರವ ಆದರಾದಿ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಸಂತೋಷ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ತೃಪ್ತಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನ ಸಂಪಾದನೆಯಿಂದ ಆತ್ಮಸ್ಥೈರ್ಯ ವೃದ್ಧಿ.

ಧನು: ಭೂಮಿ, ಆಸ್ತಿ ವ್ಯವಹಾರದಲ್ಲಿ ಮುನ್ನಡೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸಹಾಯ ಒದಗಿ ಅಭಿವೃದ್ಧಿ. ಕುಟುಂಬಿಕರ ಉತ್ತಮ ಸಹಕಾರ, ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ. ಆರೋಗ್ಯದಲ್ಲಿ ಪ್ರಗತಿ.

ಮಕರ: ಧನಾರ್ಜನೆಗೆ ಸರಿಯಾದ ಖರ್ಚು. ಮಾತಿನಲ್ಲಿ ಹಿಡಿತವಿರಲಿ. ನೂತನ ಮಿತ್ರರ ಭೇಟಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಸಫ‌ಲತೆ. ಉತ್ತಮ ಆರೋಗ್ಯ ಭಾಗ್ಯ. ಉದ್ಯೋಗ, ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ.

ಕುಂಭ: ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ದೀರ್ಘ‌ ಪ್ರಯಾಣದಿಂದ ದೇಹಾಯಾಸ ತೋರೀತು. ವಿದ್ಯಾರ್ಥಿಗಳಿಗೆ ಸದವಕಾಶ ಕೂಡಿ ಬರುವುದು. ಆರೋಗ್ಯ ವೃದ್ಧಿ. ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿದ ಜವಾಬ್ದಾರಿ. ಸಂಸಾರದಲ್ಲಿ ನೆಮ್ಮದಿ.

ಮೀನ: ಸುದೃಢ ಆರೋಗ್ಯ. ಮಾತಿನಲ್ಲಿ ತಾಳ್ಮೆ ಹಿಡಿತವಿರಲಿ. ಅನಗತ್ಯ ಚರ್ಚೆಗೆ ಒಳಗಾಗಿ ಆರ್ಥಿಕ ನಷ್ಟಕ್ಕೆ ಒಳಗಾಗದಿರಿ. ಪಾಲುದಾರಿಕಾ ಕ್ಷೇತ್ರದಲ್ಲಿ, ಉದ್ಯೋಗ ವ್ಯವಹಾರಗಳಲ್ಲಿ ಪರಸ್ಪರ ಸಹಕಾರ ಪ್ರೋತ್ಸಾಹವಿರಲಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಆರೋಗ್ಯದಲ್ಲಿ ಸುಧಾರಣೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next