Advertisement

ರಾಶಿ ಫಲ: ದೂರದ ವ್ಯವಹಾರಗಳಲ್ಲಿ ಉತ್ತಮ ಧನಸಂಪತ್ತು ವೃದ್ಧಿ, ಅವಿವಾಹಿತರಿಗೆ ವಿವಾಹ ಭಾಗ್ಯ

08:02 AM Mar 12, 2023 | Team Udayavani |

ಮೇಷ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆಗಳು ನಿವಾರಣೆಯಾಗಿ ನೆಮ್ಮದಿ. ನಿರೀಕ್ಷಿತ ಸಫ‌ಲತೆ. ಉತ್ತಮ ಧನಸಂಗ್ರಹ. ಬಂಧುಮಿತ್ರರ ಸಹಾಯ ಸಹಕಾರ ಪ್ರಾಪ್ತಿ. ಮಕ್ಕಳ ನಿಮಿತ್ತ ಪ್ರಯಾಣ ಖರ್ಚು.

Advertisement

ವೃಷಭ: ದೀರ್ಘ‌ ಪ್ರಯಾಣ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ಧನವ್ಯಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರದ ವ್ಯವಹಾರಗಳಲ್ಲಿ ಪ್ರಗತಿ.

ಮಿಥುನ: ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಮಾನರಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸೀತು. ದೂರದ ವ್ಯವಹಾರಗಳಲ್ಲಿ ಉತ್ತಮ ಧನಸಂಪತ್ತು ವೃದ್ಧಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

ಕರ್ಕ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ಮಾತಿನಲ್ಲಿ ತಾಳ್ಮೆ ಇರಲಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ನಿರ್ಣಯ ಸಾಧ್ಯ. ಗುರುಹಿರಿಯರ ರಕ್ಷೆಯಿಂದ ಕಾರ್ಯ ಸಫ‌ಲತೆ.

ಸಿಂಹ: ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಜನಪರರೊಂದಿಗೆ ತಾಳ್ಮೆ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಅನ್ಯಥಾ ಚರ್ಚೆಗೆ ಆಸ್ಪದ ನೀಡದಿರಿ. ಧನಾರ್ಜನೆಗೆ ಕೊರತೆ ಕಾಣದು. ಸಾಂಸಾರಿಕ ಸುಖ ಮಧ್ಯಮ.

Advertisement

ಕನ್ಯಾ: ದೀರ್ಘ‌ ಪ್ರಯಾಣ ಸಂಭವ. ದೂರದ ವ್ಯವಹಾರದಿಂದ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ. ಮಕ್ಕಳಿಂದಲೂ ಗುರುಹಿರಿಯರಿಂದಲೂ ಸುಖ ಸಂತೋಷ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಬದಲಾವಣೆ. ಅಧ್ಯಯನಶೀಲರಿಗೆ ಸರ್ವ ಸೌಲಭ್ಯ ಲಭ್ಯ.

ತುಲಾ: ಸಣ್ಣ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಪರಾಕ್ರಮ ಧೈರ್ಯ, ಶೌರ್ಯ ಪ್ರದರ್ಶನ. ಸಂಪತ್ಸಮೃದ್ಧಿ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ, ಗೌರವ ಸುಖಾದಿ ಲಭ್ಯ. ದೂರದ ಮಿತ್ರರಿಂದ ಸಹಕಾರ ಲಭಿಸೀತು.

ವೃಶ್ಚಿಕ: ಮಕ್ಕಳಿಂದ ಸಂತೋಷ ವೃದ್ಧಿ. ವಿದ್ಯಾ, ಜ್ಞಾನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಲಭ್ಯ. ಮೇಲಾಧಿಕಾರಿಗಳಿಂದ ಪ್ರೋತ್ಸಾಹ. ದಾನ ಧರ್ಮ ಮಾಡಿದ ತೃಪ್ತಿ. ಇತ್ಯಾದಿ ಶುಭಫ‌ಲ.

ಧನು: ನಿರೀಕ್ಷಿತ ಧನ ಸಂಚಯನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅನಗತ್ಯ ಚರ್ಚೆಗೆ ಅವಕಾಶ ಕಲ್ಪಿಸದಿರಿ. ಅಧ್ಯಯನಕ್ಕೆ ಆದ್ಯತೆ. ನೂತನ ಮಿತ್ರರ ಭೇಟಿಯಿಂದ ಸಂತೋಷ.

ಮಕರ: ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರೊಂದಿಗೆ ಸಂಭ್ರಮದ ವಾತಾವರಣ. ದೂರದ ಮಿತ್ರರೊಂದಿಗೆ ಸಮಾಲೋಚನೆ. ದಂಪತಿಗಳಲ್ಲಿ ಪರಸ್ಪರ ಸಹಕಾರ. ಉತ್ತಮ ಧನ ಸಂಪಾದನೆ.

ಕುಂಭ: ಆರೋಗ್ಯ ಗಮನಿಸಿ. ದೈಹಿಕ ಶ್ರಮ. ಅಧಿಕ ಬುದ್ಧಿವಂತಿಕೆ ಚುರುಕುತನದ ಪ್ರದರ್ಶನ. ಜನಾನುರಾಗಿ ವರ್ತನೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಗಳಿಸುವ ಯೋಗ. ಕೆಲಸಕಾರ್ಯಗಳಲ್ಲಿ ಸ್ಪಷ್ಟತೆ.

ಮೀನ: ನಿರೀಕ್ಷಿತ ಸ್ಥಾನ ಗೌರವ ದೊರಕಿದ ಸಂತೋಷ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣನಡತೆಯಿಂದ ಜನಾದಾರ ಗೌರವ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಆರೋಗ್ಯ ಸುದೃಢ. ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next