Advertisement

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

07:19 AM Jun 15, 2024 | Team Udayavani |

ಮೇಷ: ಉದ್ಯೋಗಸ್ಥರು ಕಾರ್ಯ ನಿರ್ವಹಣೆಯಲ್ಲಿ ಯಶಸ್ವಿ. .ಕಟ್ಟಡ ನಿರ್ಮಾಣ ಗುತ್ತಿಗೆದಾರರು, ನಿರ್ಮಾಣ ಸಾಮಗ್ರಿ ವಿತರಕರು ಮೊದಲಾದವರಿಗೆ ಸಮಯದೊಂದಿಗೆ ಸೆಣಸಾಟ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ.

Advertisement

ವೃಷಭ: ಉದ್ಯೋಗಸ್ಥರಿಗೆ ಆಶಾದಾಯಕ ಪರಿಸ್ಥಿತಿ. ಸರಕಾರಿ ನೌಕರರಿಗೆ ಶುಭ ಸಮಾಚಾರ. ಸಹಕಾರಿ ಕ್ಷೇತ್ರದವರಿಗೆ ಜವಾಬ್ದಾರಿ ಹೆಚ್ಚಳ. ಮುದ್ರಣ ಕ್ಷೇತ್ರದವರಿಗೆ ಸಮಯದೊಂದಿಗೆ ಮೇಲಾಟ. ಗೃಹಿಣಿಯರ ಸ್ವಾವಲಂಬನೆ ಪ್ರಯತ್ನ.

ಮಿಥುನ: ಸರಕಾರಿ ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳು. ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ. ಕೃಷಿ ಸಾಧನಗಳು, ಕೃಷ್ಯುತ್ನನ್ನಗಳು, ರಸಗೊಬ್ಬರಗಳು ಮೊದಲಾದ ಸಾಮಗ್ರಿಗಳ ವಿತರಕರಿಗೆ ಲಾಭ. ಮನೆಯಲ್ಲಿ ದೇವತಾರ್ಚನೆ.

ಕರ್ಕಾಟಕ: ಹವಾಮಾನ ವೈಪರೀತ್ಯದಿಂದ ಹಿರಿಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ. ಮನೆಯಲ್ಲಿ ಅನುಕೂಲ ವಾತಾವರಣ.

ಸಿಂಹ: ಉತ್ಪಾದನೆಗಳಿಗೆ ಒಳ್ಳೆಯ ಬೇಡಿಕೆ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ.

Advertisement

ಕನ್ಯಾ: ಆಪ್ತರಿಂದ ನಿರೀಕ್ಷಿತ ಸಹಾಯ ಪ್ರಾಪ್ತಿ. ನಿಯೋಜಿತ ಕಾರ್ಯ ಮುಗಿಸಲು ಸಹೋದ್ಯೋಗಿಯ ಸಹಾಯ. ಅಪರೂಪದ ಗೆಳೆಯರ ಆಗಮನ. ವಿದೇಶದಿಂದ ಶುಭ ವಾರ್ತೆ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಗೋಚರ.

ತುಲಾ: ಉದ್ಯೋಗಸ್ಥರಿಂದ ಜವಾಬ್ದಾರಿಗಳ ಸಮರ್ಥ ನಿರ್ವಹಣೆ. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ. ಪರಿಸರ ಅಭಿವೃದ್ಧಿಯಲ್ಲಿ ಆಸಕ್ತಿ.ಅಪರೂಪದ ಬಂಧುಗಳ ಭೇಟಿ. ಗೃಹಿಣಿಯರಿಗೆ ನೆಮ್ಮದಿ.

ವೃಶ್ಚಿಕ: ಹಿರಿಯರ ಆರೋಗ್ಯ ಉತ್ತಮ. ಮನೆಯಲ್ಲಿ ಹಿತಕರ ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಪೀಠೊಪಕರಣ ನಿರ್ಮಾಪಕರಿಗೆ ಉತ್ತಮ ಬೇಡಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.

ಧನು: ವ್ಯಾಪಾರ ವಿಸ್ತರಣೆಗೆ ಚಿಂತನೆ. ಉಡುಪು ತಯಾರಿ, ಪೀಠೊಪಕರಣ ತಯಾರಿ ಮೊದಲಾದ ಕಸಬುದಾರರಿಗೆ ಕೈತುಂಬಾ ಕೆಲಸ. ಬೌದ್ಧಿಕ ಕಾರ್ಯಗಳಲ್ಲಿ ತೊಡಗಿರುವವರ ಮೇಲೆ ಒತ್ತಡ. ಮನೆಯಲ್ಲಿ ನೆಮ್ಮದಿಯ ವಾತಾವರಣ.

ಮಕರ: ಸಹನೆ, ಜಾಣತನಗಳಿಂದ ಕಾರ್ಯ ಸಾಧನೆ. ಸಹೋದ್ಯೋಗಿಗಳಿಂದ ಸಹಕಾರ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿ ಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಹಿರಿಯರ ಆರೋಗ್ಯ ಸುಧಾರಣೆ.

ಕುಂಭ: ಆರೋಗ್ಯ ಕಾಯ್ದುಕೊಳ್ಳುವ ಪ್ರಯತ್ನ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರಿಗೆ ಹೊಸ ಜವಾಬ್ದಾರಿಗಳು ಸನ್ನಿಹಿತ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ.

ಮೀನ: ಉದ್ಯೋಗಸ್ಥರಿಗೆ ನಿರಾತಂಕ ವಾತಾವರಣ. ವ್ಯವಹಾರಸ್ಥ ರಿಗೆ ಸರಕಾರಿ ಅಧಿಕಾರಿಗಳಿಂದ ಮತ್ತು ನೌಕರರಿಂದ ಸ್ಪಂದನ. ಕೆಲವು ವರ್ಗಗಳ ವ್ಯವಹಾರಸ್ಥರಿಗೆ ಅನಿರೀಕ್ಷಿತ ರೀತಿಯಲ್ಲಿ ಪ್ರಗತಿ. ವ್ಯವಹಾರ ನಿರ್ವಹಣೆಯಲ್ಲಿ ಸಂಗಾತಿಯಿಂದ ಸಕ್ರಿಯ ಸಹಕಾರ. ಮಕ್ಕಳ ಅಧ್ಯಯನಾಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next