Advertisement

Daily Horoscope: ಕೆಲವರ ಉದ್ಯೋಗದ ಸ್ಥಾನ ಬದಲಾವಣೆ, ಆರ್ಥಿಕ ವ್ಯವಹಾರ ಸುಧಾರಣೆ

07:33 AM Jun 13, 2024 | Team Udayavani |

ಮೇಷ: ಸಮಸ್ಯೆಗಳಿಂದ ಸುಲಭವಾಗಿ ಬಿಡುಗಡೆ. ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಮಕ್ಕಳ ವಿವಾಹ ಸಮಸ್ಯೆಗೆ ಪರಿಹಾರ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಎಲ್ಲರಿಗೂ ಆರೋಗ್ಯ ಮತ್ತು ಆನಂದದ ಅನುಭವ.

Advertisement

ವೃಷಭ: ಯೋಜನಾಬದ್ಧ ನಡೆ ಇರಲಿ. ಹಿತಶತ್ರುಗಳ ಬಾಧೆಯಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಗೌರವದ ಸ್ಥಾನ. ಉದ್ಯಮದಲ್ಲಿ ಹೊಸಬರಿಂದ ಪೈಪೋಟಿ. ಉತ್ಪನ್ನಗಳ ಸುಧಾರಣೆಗೆ ನೌಕರರ ಸಹಕಾರ. ಮನೆಯಲ್ಲಿ ನೆಮ್ಮದಿ.

ಮಿಥುನ: ಸಂಬಂಧಗಳ ನಡುವೆ ಸಮತೋಲನ ಪಾಲನೆ. ಕೆಲವರ ಉದ್ಯೋಗದ ಸ್ಥಾನ ಬದಲಾವಣೆ. ಆರ್ಥಿಕ ವ್ಯವಹಾರ ಸುಧಾರಣೆ. ಪಾಲುದಾರಿಕೆ ವ್ಯಾಪಾರದಿಂದ ಅನುಕೂಲ. ವ್ಯವಹಾರದ ಸಂಬಂಧ ಪೂರ್ವದ ಕಡೆಗೆ ಪ್ರವಾಸ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಅಧಿಕ ಜವಾಬ್ದಾರಿ. ಶ್ರದ್ಧೆ, ನಿಷ್ಠೆಗೆ ಮನ್ನಣೆ. ಹೊಸ ಉದ್ಯಮ ಆರಂಭಕ್ಕೆ ಚಿಂತನೆ. ಸಂಸಾರದಲ್ಲಿ ಸಾಮರಸ್ಯ. ದೇವತಾ ಕಾರ್ಯದಲ್ಲಿ ಭಾಗಿ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.

ಸಿಂಹ: ಕಾರ್ಯಪದ್ಧತಿ ಬದಲಾಯಿಸಲು ಚಿಂತನೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಸಂತೃಪ್ತಿ. ಕುಟುಂಬದಲ್ಲಿ ಪ್ರೀತಿಯ ವಾತಾವರಣ. ಮಕ್ಕಳ ಧಾರ್ಮಿಕ ಶಿಕ್ಷಣಕ್ಕೆ ಪ್ರೋತ್ಸಾಹ.

Advertisement

ಕನ್ಯಾ: ಬದುಕಿನ ಜಂಜಾಟಗಳ ನಡುವೆ ಆನಂದವನ್ನು ಅರಸುವ ಪ್ರಯತ್ನ. ವಿಶೇಷ ವ್ಯಕ್ತಿಗಳ ಪರಿಚಯ. ಉದ್ಯೋಗ ಸ್ಥಳದಲ್ಲಿ ಸ್ಥಿರ ಪರಿಸ್ಥಿತಿ. ಉದ್ಯಮ ಅಭಿವೃದ್ಧಿಗೆ ವಿಶೇಷ ಕ್ರಮಗಳು. ಸಂಸಾರದ ನೆಮ್ಮದಿ ಕೆಡಿಸಲು ಹಿತಶತ್ರುಗಳ ಪ್ರಯತ್ನ.

ತುಲಾ: ಉದ್ಯೋಗದಲ್ಲಿ ಹಿರಿಯರಿಗೆ ಹೊಸ ಜವಾಬ್ದಾರಿ. ಹೊಸ ಸಹೋದ್ಯೋಗಿಗಳ ಸೇರ್ಪಡೆ. ಸರಕಾರಿ ನೌಕರರಿಗೆ ಅಧಿಕ ಕೆಲಸ. ಗೃಹೋಪಯೋಗಿ ಸಾಧನಗಳ ಖರೀದಿ. ಇಷ್ಟಾರ್ಥ ಸಿದ್ಧಿಗಾಗಿ ದೇವತಾರ್ಚನೆ. ಎಲ್ಲರ ಆರೋಗ್ಯ ವೃದ್ಧಿ.

ವೃಶ್ಚಿಕ: ಅರಸದೆ ಬಂದ ಸುಖದಿಂದ ಆನಂದ. ಉದ್ಯೋಗದಲ್ಲಿ ವೇತನ ವೃದ್ಧಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿಗಳ ವಿತರಕರಿಗೆ ಲಾಭ. ಕೃಷಿ ಕ್ಷೇತ್ರದಲ್ಲಿ ಹೊಸಬರಿಗೆ ಮಾರ್ಗದರ್ಶನ. ಹಿರಿಯರು, ಟೈಲರಿಂಗ್‌ ಕೆಲಸ ಬಲ್ಲವರಿಗೆ ಬೇಡಿಕೆ.

ಧನು: ಕಷ್ಟಗಳ ನಡುವೆ ಮಿಂಚಿ ಹೋಗುವ ಸುಖ. ಉದ್ಯೋಗಿಗಳಿಗೆ ಸಮಾಧಾನ. ಹತ್ತಿರದ ದೇವತಾ ಕ್ಷೇತ್ರಕ್ಕೆ ಅವಸರದ ಭೇಟಿ. ಬಂಧುಗಳ ಕುಟುಂಬ ನಡುವಿನ ವ್ಯಾಜ್ಯ ಸಂಧಾನ ದಿಂದ ಪರಿಹಾರ.

ಮಕರ: ಚುರುಕಿನ ಕಾರ್ಯವೈಖರಿಗೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮ ವಿಸ್ತರಣೆ ನಿರಾತಂಕ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ. ಬಂಧುವರ್ಗದಲ್ಲಿ ವಿವಾಹ ನಿಶ್ಚಯ.

ಕುಂಭ: ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಬೆಳವಣಿಗೆ ಸುಗಮ. ಉತ್ಪನ್ನಗಳ ಆಕರ್ಷಣೆ ಹೆಚ್ಚಿಸಲು ಚಿಂತನೆ. ಮುದ್ರಣ ಸಾಮಗ್ರಿ, ಸ್ಟೇಶನರಿ ರಖಂ ವ್ಯವಹಾರಸ್ಥರಿಗೆ ಆದಾಯ ವೃದ್ಧಿ. ಆಯುರ್ವೇದ ಔಷಧ ವಿತರಕರಿಗೆ ಲಾಭ.

ಮೀನ: ಉದ್ಯೋಗ ಸ್ಥಾನದಲ್ಲಿ ಜಯ ಹಾಗೂ ಕೀರ್ತಿ ಎರಡೂ ಲಭ್ಯ. ಸರಕಾರಿ ಕಾರ್ಯಾಲಯಗಳಲ್ಲಿ ಶೀಘ್ರ ಸ್ಪಂದನ. ಆಸ್ತಿ ವಿಸ್ತರಣೆ ಪ್ರಯತ್ನದಲ್ಲಿ ಮುನ್ನಡೆ. ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next