Advertisement

Daily Horoscope: ಮಿತ್ರರ ಮೇಲೆ ಅವಲಂಬನೆಯಿಂದ ಕಾರ್ಯದಲ್ಲಿ ಹಿನ್ನಡೆ

07:17 AM Jul 29, 2023 | Team Udayavani |

ಮೇಷ: ದೀರ್ಘ‌ ಪ್ರಯಾಣದಿಂದ ಅನುಕೂಲ. ದೂರದ ವ್ಯಾಪಾರ ವ್ಯವಹಾರದಲ್ಲಿ ಲಾಭ. ಅನಿರೀಕ್ಷಿತ ಧನವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿದ ಜವಾಬ್ದಾರಿ ನಿರ್ವಹಣೆ. ಗೃಹದಲ್ಲಿ ಸಂತಸದ ವಾತಾವರಣ.

Advertisement

ವೃಷಭ: ನಿರೀಕ್ಷಿತ ಧನಸಂಪತ್ತು ವೃದ್ಧಿ. ಅಧಿಕ ಲಾಭ. ಉತ್ತಮ ವಾಕ್ಚಾತುರ್ಯ. ಜನಮನ್ನಣೆ. ಬರಹಗಾರರಿಗೆ ಪ್ರಾಶಸ್ತ್ಯ. ಅನ್ಯರಿಂದ ಸಹಾಯ ನಿರೀಕ್ಷಿಸದೆ ಸ್ವಂತ ಪರಿಶ್ರಮಕ್ಕೆ ಆದ್ಯತೆ ನೀಡಿ. ಆರೋಗ್ಯ ವೃದ್ಧಿ. ಮಾನಸಿಕ ನೆಮ್ಮದಿ. ಮಕ್ಕಳಿಂದ ಸಂತೋಷ.

ಮಿಥುನ: ಮಿತ್ರರ ಮೇಲೆ ಅವಲಂಬನೆಯಿಂದ ಕಾರ್ಯದಲ್ಲಿ ಹಿನ್ನಡೆ. ಪಾಲುಗಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಗುರು ಹಿರಿಯರೊಂದಿಗೆ ತಾಳ್ಮೆ, ಸಹನೆ ಲಾಭದಾಯಕ. ಆರೋಗ್ಯದಲ್ಲಿ ಸುಧಾರಣೆ. ವರಿಷ್ಠರೊಂದಿಗೆ ಚರ್ಚೆ ಬೇಡ.

ಕರ್ಕ: ಸಣ್ಣ ಪ್ರಯಾಣ. ಅಧಿಕ ಪರಿಶ್ರಮದಿಂದ ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ. ಉತ್ತಮ ವಾಕ್‌ಚಾತುರ್ಯದ ಕಾರ್ಯವೈಖರಿ. ಪಾಲುಗಾರಿಗೆ ವ್ಯವಹಾರದಲ್ಲಿ ತಾಳ್ಮೆ ಅವಶ್ಯ. ಮನೆಯಲ್ಲಿ ಸಂತೋಷ ಕಾಯ್ದುಕೊಳ್ಳಿ.

ಸಿಂಹ: ನೂತನ ಮಿತ್ರರ ಸಮಾಗಮದಿಂದ ಸಂತೋಷ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯೆ ಜ್ಞಾನ ಸಂಪಾದನೆಯಲ್ಲಿ ಯಶಸ್ಸು. ಪ್ರಯಾಣದಲ್ಲಿ ಸಂತೋಷ. ಉದ್ಯೋಗದಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ದಿ. ಮಕ್ಕಳಿಂದ ಉತ್ಸಾಹದ ಚಟುವಟಿಕೆ.

Advertisement

ಕನ್ಯಾ: ಪರರೊಂದಿಗೆ ಧನವ್ಯವಹಾರದಲ್ಲಿ ಜಾಗ್ರತೆ. ಸ್ತ್ರೀ ಪುರುಷರ ಬಾಂಧವ್ಯ ವೃದ್ದಿಗೆ ಶ್ರಮ. ಆಸ್ತಿ ಕ್ರಯ ವಿಕ್ರಯದಲ್ಲಿ ಸಫ‌ಲ. ಪಾರದರ್ಶಕತೆಗೆ ಆದ್ಯತೆ ಇರಲಿ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅನುಕೂಲದ ವಾತಾವರಣ.

ತುಲಾ: ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ದೂರ ಪ್ರಯಾಣದಿಂದ ವ್ಯರ್ಥ ಧನವ್ಯಯ. ಸತ್ಕರ್ಮದಿಂದ ಗೌರವಪೂರ್ವಕ ಧನಾಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ. ಗುರು ಹಿರಿಯರಿಂದ ಸಂದಭೋìಚಿತ ಸಹಾಯ.

ವೃಶ್ಚಿಕ: ಪರಿಶ್ರಮದಿಂದ ಆರೋಗ್ಯ ಸುದೃಢ. ದೀರ್ಘ‌ ಪ್ರಯಾಣ. ತಾಳ್ಮೆ ಅಗತ್ಯ. ಉದ್ಯೋಗದಲ್ಲಿ ಆಕಸ್ಮಾತ್‌ ಧನವೃದ್ಧಿ. ವ್ಯವಹಾರ ನಿಮಿತ್ತ ಮಿತ್ರರೊಂದಿಗೆ ಪ್ರಯಾಣ. ದಾಂಪತ್ಯ ತೃಪ್ತಿಕರ. ದೇವತಾ ಮಂತ್ರಾನುಷ್ಠಾನದಿಂದ ನೆಮ್ಮದಿ.

ಧನು: ಶಾರೀರಿಕ ಸುಖವೃದ್ಧಿ. ಸೌಂದರ್ಯಕ್ಕೆ ಪ್ರಾಧಾನ್ಯ. ಮನಸ್ಸು ಚಂಚಲ. ಸರಸ ಸಲ್ಲಾಪದಲ್ಲಿ ಆಸಕ್ತಿ. ಗಣ್ಯ ವ್ಯಕ್ತಿಗಳ ಸಂಪರ್ಕ. ಗುಪ್ತ ಧನವೃದ್ಧಿ. ಏಕಾಗ್ರತೆಯ ವ್ಯವಹಾರ. ಧಾರ್ಮಿಕ ಕಾರ್ಯಗಳಿಗೆ ಅಡಚಣೆ. ಸ್ವಪ್ರಯತ್ನದಿಂದ ವಿದ್ಯಾರ್ಜನೆ.

ಮಕರ: ಆರೋಗ್ಯ ವೃದ್ಧಿ. ಬುದ್ಧಿವಂತಿಕೆಯ ನಿಲುವು. ಹಣಕಾಸಿನಲ್ಲಿ ಕೃಪಣತೆ. ಚರ್ಚೆಯಿಂದ ಧನಲಾಭ. ಉದ್ಯೋಗ ವ್ಯವಹಾರಗಳಿಂದ ಸಂಪತ್ತು. ಸಣ್ಣ ಪ್ರಯಾಣ. ದೇವತಾ ಕಾರ್ಯಗಳ ನೇತೃತ್ವ. ವಿದ್ಯಾರ್ಥಿಗಳಿಗೆ ಗುರುಗಳ ಸೂಕ್ತ ಮಾರ್ಗದರ್ಶನ.

ಕುಂಭ: ಉತ್ತಮ ಆರೋಗ್ಯ. ನಿರೀಕ್ಷಿತ ಸ್ಥಾನ ಸುಖ. ಎಲ್ಲ ವಿಚಾರಗಳಲ್ಲಿ ಲಾಭ ನಿರೀಕ್ಷೆ. ಪ್ರಸಿದ್ಧಿಗಾಗಿ ಪರಿಶ್ರಮ. ಆಸ್ತಿ ವಿಚಾರಗಳಿಂದ ಅನಿರೀಕ್ಷಿತ ಧನಾಮನ. ಸಂಸಾರ ಸುಖ ವೃದ್ಧಿ. ಮಕ್ಕಳಿಂದ ಸಂತೋಷ. ಗುರು ಹಿರಿಯರಿಂದ ಸಹಕಾರ.

ಮೀನ: ಪರರ ಸಹಾಯದಿಂದ ಲಾಭ ಸಂಭವ. ಶಾಸ್ತ್ರ ಆಸಕ್ತಿ. ದೂರದ ವ್ಯವಹಾರದಲ್ಲಿ ಹೆಚ್ಚು ಧನಲಾಭ. ಪಾಲುಗಾರರಿಂದ ಸಹಕಾರ. ಹಿರಿಯರ ಆರೋಗ್ಯ ಗಮನಿಸಿ. ಪೂಜೆ ಪುರಸ್ಕಾರಗಳಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ. ಸಂಗೀತ ಸಾಹಿತ್ಯಗಳಲ್ಲಿ ಆಸಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next