ಮೇಷ: ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ವಿಶ್ವಾಸ ಪಾತ್ರರಾಗಿ ಜವಾಬ್ದಾರಿ ನಿರ್ವಹಿಸಿ. ಪರರ ಹಣ ನಿರ್ವಹಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ. ದೈರ್ಯ ಹಿಂಜರಿಕೆ ಹೆದರದೇ ಕೆಲಸ ಮಾಡಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ.
ವೃಷಭ: ಗೃಹ ವಾಹನಾದಿ ಸುಖ ವೃದ್ಧಿ. ನೂತನ ಬಂಧು ಮಿತ್ರರ ಸಂಗಮ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಜಾಣತನ ಜವಾಬ್ದಾರಿ ಪ್ರದರ್ಶಿಸಿ. ಜನಮನ್ನಣೆ ಲಭ್ಯ. ಉತ್ತಮ ಪ್ರಗತಿದಾಯಕ ಧನಾರ್ಜನೆ.
ಮಿಥುನ: ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ದೇವತಾ ಸ್ಥಳಗಳ ಸಂದರ್ಶನ. ಅವಿವಾಹಿತರಿಗೆ ವಿವಾಹ ಭಾಗ್ಯ. ಯೋಗ್ಯ ವಧು ವರ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರುಹಿರಿಯರಿಗೆ ಸಂತೋಷ.
ಕರ್ಕ: ದೀರ್ಘ ಪ್ರಯಾಣ. ಗುರುಹಿರಿಯರಿಗೆ ಸಂತೋಷಪ್ರದರಾಗಿರಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಸಾಮಾನ್ಯ ಧನ ವೃದ್ಧಿ.
Related Articles
ಸಿಂಹ: ಅನಗತ್ಯ ವಿಚಾರಗಳಲ್ಲಿ ತೊಡಗಿಸಿ ಕೊಂಡು ತೊಂದರೆ ಎಳೆದುಕೊಳ್ಳದಿರಿ. ದಾಕ್ಷಿಣ್ಯಕ್ಕೆ ಒಳಗಾಗದೆ ಜವಾಬ್ದಾರಿಯುತ ಮಾತುಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ದೂರ ಮಿತ್ರರಿಂದ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ.
ಕನ್ಯಾ: ಹಠಮಾಡದೇ ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗುವುದರಿಂದ ಎಲ್ಲಾ ವ್ಯವಹಾರಗಳಲ್ಲಿ ಗಣನೀಯ ಪ್ರಗತಿ. ಕೀರ್ತಿ ಶ್ಲಾಘನೆ ಲಭ್ಯ. ಜವಾಬ್ದಾರಿಯುತ ಮಾತಿನಿಂದ ಜನಪ್ರಶಂಸೆ. ವಿದ್ಯಾರ್ಥಿಗಳಿಗೆ ಜ್ಞಾನ ವಿಚಾರಗಳಿಗೆ ಸದ್‌ವ್ಯಯ.
ತುಲಾ: ಮನೋರಂಜನೆ ಉಲ್ಲಾಸದಲ್ಲಿ ಕಾಲ ಕಳೆಯುವಿಕೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ. ದೀರ್ಘ ಪ್ರಯಾಣ. ವಿವಾಹಾದಿ ವಿಚಾರಗಳಲ್ಲಿ ಆಸಕ್ತಿ. ವಿದೇಶದಲ್ಲಿ ಅಧ್ಯಯನ ಆಸಕ್ತರಿಗೆ ವಿಪುಲ ಅವಕಾಶಗಳು ಒದಗಿ ಬರುವುವು.
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಯೋಗ. ಉದ್ಯೋಗ ವ್ಯವಹಾರಗಳಲ್ಲಿ ಬಹು ಜನರ ಸಂಪರ್ಕ. ಅನ್ಯರ ಮೇಲೆ ಅವಲಂಬನೆ. ಗೃಹ ಉಪಯೋಗಿ ವಸ್ತುಗಳ ಸಂಗ್ರಹ. ವಾಹನಾದಿ ಸುಖ ವೃದ್ಧಿ. ಆಸ್ತಿ ಸಂಗ್ರಹ. ಮಿತ್ರರ ಸಹಕಾರ ಲಭ್ಯ.
ಧನು: ಹಠಮಾಡದೇ ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಪ್ರಗತಿ. ಗೌರವಾನ್ವಿತ ಧನ ಸಂಪಾದನೆ. ಸಾಂಸಾರಿಕ ಸುಖ ತೃಪ್ತಿದಾಯಕ. ಗೃಹದಲ್ಲಿ ಸಂತಸದ ವಾತಾವರಣ.
ಮಕರ: ದೂರ ಪ್ರಯಾಣ. ಗುರುಹಿರಿಯರ ಅವಲಂಬನೆ ಪರಿಶ್ರಮ ನಿಷ್ಠೆಗೆ ತಕ್ಕ ಪ್ರತಿಫಲ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ ಮಾನ್ಯತೆ ಪ್ರಾಪ್ತಿ. ಗೃಹದಲ್ಲಿ ಸಂಭ್ರಮ. ಬಂಧು ಮಿತ್ರರ ಆಗಮನದಿಂದ ಮನಃಸಂತೋಷ.
ಕುಂಭ: ಉತ್ತಮ ಸ್ಥಾನ ಗೌರವದ ಸುಖ. ಆಸ್ತಿ ಸಂಗ್ರಹದಲ್ಲಿ ಆಸಕ್ತಿ. ನೂತನ ಮಿತ್ರರ ಭೇಟಿ. ಮಾತೃಸಮಾನರಿಂದ ಸಹಕಾರ ಪ್ರೋತ್ಸಾಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕವಾಗಿ ಸುದೃಢ.
ಮೀನ: ಸಣ್ಣ ಪ್ರಯಾಣ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ. ಅಧ್ಯಯನದಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ವಿಫಲ ಸದವಕಾಶಗಳು ಒದಗಿ ಬರುವುವು. ಹೆಚ್ಚಿದ ಧನಾಗಮನ. ಉಳಿತಾಯಕ್ಕೆ ಆದ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ.