Advertisement

ರಾಶಿ ಫಲ: ವಿದ್ಯೆ ಜ್ಞಾನ ವಿಚಾರದಲ್ಲಿ ಪ್ರಗತಿ, ಪರೋಪಕಾರ ಮಾಡುವಾಗ ತಿಳಿದು ಮಾಡಿ

07:19 AM Jan 29, 2023 | Team Udayavani |

ಮೇಷ: ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಹಠಮಾರಿತನದ ಪ್ರವೃತ್ತಿಯಿಂದ ನಷ್ಟ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಗಮನಿಸಿ. ಪರೋಪಕಾರ ಮಾಡುವಾಗ ತಿಳಿದು ಮಾಡಿ. ಹಿರಿಯರಿಂದ ಮಾರ್ಗದರ್ಶನ ಲಭ್ಯ.

Advertisement

ವೃಷಭ: ಧಾರ್ಮಿಕ ಸ್ಥಳಗಳ ಸಂದರ್ಶನ. ಗಣ್ಯ ವ್ಯಕ್ತಿಗಳ ಸಂಪರ್ಕ ಗೌರವ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಪ್ರಗತಿ. ಗುರುಹಿರಿಯರಿಂದ ಉತ್ತಮ ಸಲಹೆ ಸಹಕಾರ ಲಭ್ಯ.

ಮಿಥುನ: ವಿದ್ಯೆ ಜ್ಞಾನ ವಿಚಾರದಲ್ಲಿ ಪ್ರಗತಿ. ತಿಳಿದು ತಿಳಿಸಲಿಚ್ಛಿಸುವ ಪ್ರವೃತ್ತಿಯಲ್ಲಿ ಸಾಧನೆ. ಗುರುಹಿರಿಯರೊಂದಿಗೆ ಉತ್ತಮ ಬಾಂಧವ್ಯ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ. ದೂರದ ಬಂಧುಗಳಿಂದ ಸಂತೋಷದ ವಾರ್ತೆ ಸಹಕಾರ.

ಕರ್ಕ: ದೂರ ಪ್ರಯಾಣ. ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ಸಾಂಸಾರಿಕ ಸುಖ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು. ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಭೂಮ್ಯಾದಿ ವ್ಯವಹಾರಗಳಲ್ಲಿ ನಿರ್ಣಯ. ತೀರ್ಮಾನ.

ಸಿಂಹ: ನಿರೀಕ್ಷಿತ ಸ್ಥಾನ ಮಾನ ಪ್ರಾಪ್ತಿ. ರಾಜಕೀಯ, ಸಹಕಾರಿ ವ್ಯವಹಾರಗಳಲ್ಲಿ ಅಭಿವೃದ್ಧಿ. ಲೋಕಪ್ರೀಯತೆ ಜನಮನ್ನಣೆ. ನಿರೀಕ್ಷಿತ ಧನ ಸಂಪತ್ತು ವೃದ್ಧಿ. ಪರೋಪಕಾರದಿಂದ ಅಪವಾದ ತೊಂದರೆ ಸಂಭವ. ವಿಚಾರಮಾಡಿ ತೀರ್ಮಾನಿಸಿದರೆ ನೆಮ್ಮದಿ.

Advertisement

ಕನ್ಯಾ: ಉತ್ತಮ ವಾಕ್‌ ಚತುರತೆ. ಅಧಿಕ ಧನ ಸಂಪತ್ತು ಲಭಿಸಿದ ಸಂತೋಷ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಬುದ್ಧಿವಂತಿಕೆ ನಡೆಯಿಂದ ಯಶಸ್ಸು. ಜನಮನ್ನಣೆ. ಗೌರವ ಪ್ರಾಪ್ತಿ. ದಂಪತಿಗಳಲ್ಲಿ ಹೆಚ್ಚಿದ ಅನುರಾಗ.

ತುಲಾ: ಅನಿರೀಕ್ಷಿತ ಧನಾಗಮನ. ಉತ್ತಮ ವಾಕ್‌ ಚತುರತೆ. ಕೌಟುಂಬಿಕ ಸುಖ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ವರ್ತಕರಿಗೆ ಅವರವರ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ವಿವಾಹ ಯೋಗ.

ವೃಶ್ಚಿಕ: ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರು ಹಿರಿಯರ ಮೇಲಧಿಕಾರಿಗಳ ಪ್ರೀತಿ ವಿಶ್ವಾಸ ಗಳಿಕೆ. ಉತ್ತಮ ಧನಾರ್ಜನೆ. ಅಧ್ಯಯನಶೀಲರಿಗೆ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದಾಂಪತ್ಯ ಸುಖ ಅಭಿವೃದ್ಧಿ. ಉದಾರತೆ, ದೈರ್ಯ, ನಿಷ್ಠೆ ಕಾರ್ಯ ಚಟುವಟಿಕೆ.

ಧನು: ಮಾತೃ ಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿದ ಸಮಾದಾನ. ಗೃಹೋಪಕರಣ ವಸ್ತುಗಳ ಸಂಗ್ರಹ. ಉತ್ತಮ ಧನಾರ್ಜನೆ. ಸಣ್ಣ ಪ್ರಯಾಣ. ಪಾಲುಗಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ಮಕರ: ಪರದೇಶ ಮೂಲದಿಂದ ಧನಾಗಮ. ಪಾಲುದಾರರಿಂದ ಸಹಾಯ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಉತ್ತಮ ಪ್ರಗತಿ. ಸಂಶೋಧಕರಿಗೆ ಸಂದರ್ಭಕ್ಕೆ ಸರಿಯಾಗಿ ಸಹಾಯ ಪ್ರಾಪ್ತಿ. ಸಾಂಸಾರಿಕ ಸುಖದಲ್ಲಿ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಪ್ರಯಾಣ ಭಾಗ್ಯ.

ಕುಂಭ: ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಾತಿನಲ್ಲಿ ಕಠೊರತೆ ತೋರದಿರಿ. ದಂಪತಿಗಳು, ಪಾಲುದಾರಿಕಾ ವ್ಯವಹಾರಸ್ಥರು ತಾಳ್ಮೆಯಿಂದ ಕಾರ್ಯ ಸಾಧಿಸಿಕೊಳ್ಳಿ. ಪರದೇಶ ಸ್ಥಿತ ಮಿತ್ರರಿಂದ ಸಹಾಯ ಒದಗಿ ಬರುವುದು.

ಮೀನ: ಮಾನಸಿಕ ಆರೋಗ್ಯ ಉತ್ತಮ. ದೈಹಿಕ ಆರೋಗ್ಯ ಗಮನಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಸಾಹಸದಿಂದ ಧನಾರ್ಜನೆ ವೃದ್ಧಿ. ದೂರ ಪ್ರಯಾಣದಿಂದ ಕಾರ್ಯ ಸಫ‌ಲತೆ. ಕಾರ್ಮಿಕರು ಸಹೋದರರಲ್ಲಿ ತಾಳ್ಮೆ ಪ್ರೀತಿಯಿಂದ ಕಾರ್ಯ ನಿರ್ವಹಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next