Advertisement

ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ, ದೂರ ಪ್ರಯಾಣ ಸಂಭವ, ಎಲ್ಲರೂ ಶ್ಲಾಘಿಸುವಂತಹ ದಿನಚರಿ

07:19 AM Jan 28, 2023 | Team Udayavani |

ಮೇಷ: ಅಧ್ಯಯನಶೀಲರಿಗೆ, ಸರ್ಕಾರಿ ವೃತ್ತಿಪರರಿಗೆ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನವಾಗಿರುವುದು. ಅನಾಯಾಸ ಧನಾಗಮನ. ಗುರುಹಿರಿಯರ ಉತ್ತಮ ಸಹಕಾರ. ಅವಿವಾಹಿತರಿಗೆ ಯೋಗ್ಯ ವಧು ವರ ಪ್ರಾಪ್ತಿ. ಉಲ್ಲಾಸಭರಿತ ದಿನ.

Advertisement

ವೃಷಭ: ಸತ್ಕಾರ್ಯಕ್ಕೆ ಧನ ವ್ಯಯ. ದಾಂಪತ್ಯ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಹೋದರಾಗಿ ವರ್ಗದವರಿಂದ ಸುವಾರ್ತೆ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಫ‌ಲತೆ.

ಮಿಥುನ: ಉತ್ತಮ ಜನಸಂಪರ್ಕ. ಎಲ್ಲರೂ ಶ್ಲಾಘಿಸುವಂತಹ ದಿನಚರಿ. ಗೌರವ ಆದರಗಳು ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ. ನಷ್ಟ ವಸ್ತುಗಳಿಗಾಗಿ ಪುನಃ ಪ್ರಯತ್ನಿಸಿದರೆ ಸಿಗುವ ಸಮಯ. ದಂಪತಿಗಳಲ್ಲಿ ಪರಸ್ಪರ ಪ್ರೀತಿ ವೃದ್ಧಿ.

ಕರ್ಕ: ಉತ್ತಮ ಯೋಗ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಿಂದ ಕೀರ್ತಿ ಜನಮನ್ನಣೆ ಪ್ರಾಪ್ತಿ. ಆರೋಗ್ಯ ವೃದ್ಧಿ ನಿರೀಕ್ಷಿತ ಧನಸಂಚಯನ. ಮಾತಿನಲ್ಲಿ ತಾಳ್ಮೆ ಪ್ರಾಮಾಣಿಕತೆ ಇರಲಿ. ಗುರು ಹಿರಿಯರಲ್ಲಿ ಭಯ ಭಕ್ತಿಯ ನಡವಳಿಕೆಯಿಂದ ಗೌರವ.

ಸಿಂಹ: ಆರೋಗ್ಯ ಗಮನಿಸಿ. ದೂರದ ವ್ಯವಹಾರ ನಿರ್ವಹಿಸುವಾಗ ಅನಗತ್ಯ ಖರ್ಚಿನ ಬಗ್ಗೆ ಗಮನಹರಿಸಿ. ಬಂಧು ಮಿತ್ರರ ಸಹಕಾರ. ಅಧ್ಯಯನದಲ್ಲಿ ಪ್ರಗತಿ. ಹೊಸ ಚಿಂತನೆಗಳಿಗೆ ಆದ್ಯತೆ. ದಾಂಪತ್ಯ ತೃಪ್ತಿಕರ. ಅವಿವಾಹಿತರಿಗೆ ಸರಿಯಾದ ಸಂಬಂಧ ಒದಗುವ ಕಾಲ.

Advertisement

ಕನ್ಯಾ: ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಸಂತೋಷ. ಹೂಡಿಕೆಗಳಲ್ಲಿ ಆಸಕ್ತಿ. ಗೃಹೋಪಯೋಗಿ ಸಲಕರಣೆಗಳ ಖರೀದಿ. ಬಂಧು ಮಿತ್ರರ ಅವಲಂಭನೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ತೆ ತಕ್ಕ ಪ್ರತಿಫ‌ಲದಿಂದ ಮನಃತೃಪ್ತಿ.

ತುಲಾ: ಜ್ಞಾನ ವಿವೇಕ ನಿಷ್ಠೆಯಿಂದ ಕೂಡಿದ ಧಾರ್ಮಿಕ ಚಟುವಟಿಕೆಗಳು. ಗುರುಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಮಾನಸಿಕ ನೆಮ್ಮದಿ. ತೃಪ್ತಿದಾಯಕ ದಿನ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ವೃಶ್ಚಿಕ: ಆರೋಗ್ಯ ಗಮನಿಸಿ. ದೈಹಿಕವಾಗಿ ಹೆಚ್ಚು ಶ್ರಮ ವಹಿಸದೇ ಕಾರ್ಯಪ್ರವೃತ್ತರಾಗಿ. ದೀರ್ಘ‌ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಅಧಿಕ ಚಿಂತಸದಿರಿ. ಪರರಿಗೆ ಜವಾಬ್ದಾರಿ ವಹಿಸುವಾಗ ತಿಳಿದು ನಿರ್ಣಯಿಸಿ.

ಧನು: ನಿರೀಕ್ಷಿತ ಸ್ಥಾನಮಾನ ಗೌರವಾದಿ ಸಿಕ್ಕಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ. ದಂಪತಿ ಗಳಿಂದ ಸಾಮರಸ್ಯ ಕಾಪಾಡಲು ಅಧಿಕ ಪರಿಶ್ರಮ ಎದು ರಾದೀತು. ಹಣಕಾಸಿನ ವಿಚಾರದಲ್ಲಿ ಕೊರತೆ ಇರದು.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದ ತೃಪ್ತಿ. ಅನಿರೀಕ್ಷಿತ ಧನವೃದ್ಧಿ. ಅತೀ ಬುದ್ಧಿವಂತಿಕೆಯಿಂದ ಕೂಡಿದ ಮಾತುಗಳಿಂದ ಕಾರ್ಯವೈಖರಿ. ಮಕ್ಕಳ ವಿಚಾರದಲ್ಲಿ ಪರಿಶ್ರಮ ಹಾಗೂ ಸಫ‌ಲತೆ. ವಿದ್ಯಾರ್ಥಿಗಳಿಗೆ ಸುವಾರ್ತೆ.

ಕುಂಭ: ಆಸ್ತಿ ಸಂಚಯನದಲ್ಲಿ ಪ್ರಗತಿ. ದೂರ ಪ್ರಯಾಣ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ಗುರುಹಿರಿಯರಿಂದ ಉತ್ತಮ ಸಹಕಾರ ಪ್ರೋತ್ಸಾಹ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಪ್ರಗತಿ. ಸಾಲ ಬಾಧೆ ಕಾಡೀತು.

ಮೀನ: ಆರೋಗ್ಯ ವೃದ್ಧಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಪಾಲುಗಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಿತ್ರರೊಂದಿಗೆ ತಾಳ್ಮೆಯಿಂದ ವಿವೇಚನೆಯಿಂದ ನಡೆದುಕೊಳ್ಳಿ. ಅನಗತ್ಯ ಜವಾಬ್ದಾರಿ ತೆಗೆದುಕೊಳ್ಳದಿರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next