Advertisement

ರಾಶಿ ಫಲ; ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ, ಪಾಲುಗಾರಿಕಾ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ

07:21 AM Jan 23, 2023 | Team Udayavani |

ಮೇಷ: ಸಂತಸದಿಂದ ಕೂಡಿದ ಸಮಯ. ದೀರ್ಘ‌ ಪ್ರಯಾಣ, ಧಾರ್ಮಿಕ ಕಾರ್ಯ ಗಳಲ್ಲಿ ಭಾಗವಹಿಸಿದ ತೃಪ್ತಿ. ಗುರುಹಿರಿಯರ ಆಶೀರ್ವಾದದ ಸುಖ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಗಣ್ಯರ ಭೇಟಿ. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ.

Advertisement

ವೃಷಭ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಸಂದರ್ಭಕ್ಕೆ ಸರಿಯಾಗಿ ಸಹಾಯ ಸಹಕಾರ ಒದಗಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖ ವೃದ್ಧಿ. ದೇವತಾ ಸ್ಥಳ ಸಂದರ್ಶನ.

ಮಿಥುನ: ಆರೋಗ್ಯದಲ್ಲಿ ಸುಧಾರಣೆ. ಮನೆಯ ಕಡೆ ವಿಶೇಷ ಗಮನಹರಿಸುವಿಕೆ. ಗೃಹೋಪ ವಸ್ತುಗಳ ಸಂಗ್ರಹ. ಮಿತ್ರರ ಭೇಟಿಯಿಂದ ಸಂತಸ ವೃದ್ಧಿ. ದೂರದ ವ್ಯವಹಾರಗಳಲ್ಲಿ ಹೆಚ್ಚಿದ ಧನ ಸಂಪಾದನೆ. ಪಾಲುಗಾರಿಕಾ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ.

ಕರ್ಕ: ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ. ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರಯಾಣ ದಲ್ಲಿ ವಿಳಂಬ ಅಡಚಣೆ ತೋರೀತು. ಧನಾಗಮನಕ್ಕೆ ಕೊರತೆಯಾಗದು. ಸಾಂಸಾರಿಕ ಸುಖ ತೃಪ್ತಿ ದಾಯಕ. ವಿದ್ಯಾರ್ಥಿಗಳಿಗೆ ಸ್ಥಾನ ಸುಖ ಲಭಿಸುವುದು.

ಸಿಂಹ: ಆರೋಗ್ಯದ ಬಗ್ಗೆ ಗಣನೀಯ ಎಚ್ಚರ ಅಗತ್ಯ. ಆಹಾರ ಸೇವನೆಯಲ್ಲಿ ಮುಂಜಾಗ್ರತೆ ವಹಿಸಿರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದಂಪತಿ ಗಳಲ್ಲಿ ಪರಸ್ಪರ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

Advertisement

ನ್ಯಾ: ಆರೋಗ್ಯ ವೃದ್ಧಿ. ಗೃಹ ಉಪಯೋಗಿ ವಸ್ತುಗಳ ಸಂಗ್ರಹ. ಬಂಧುಮಿತ್ರರ ಸಮಾಗಮ. ಆಸ್ತಿ ಸಂಚಯನಕ್ಕೆ ಆದ್ಯತೆ. ಹೂಡಿಕೆಗಳಲ್ಲಿ ಲಾಭ. ದಂಪತಿಗಳಲ್ಲಿ ಪರಸ್ಪರ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷದ ವಾರ್ತೆ. ವ್ಯವಹಾರಗಳಲ್ಲಿ ಗೌರವ ಪ್ರಾಪ್ತಿ.

ತುಲಾ: ದೀರ್ಘ‌ ಪ್ರಯಾಣ ಸಂಭವ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ. ಗುರುಹಿರಿಯರ ಮೇಲಧಿ ಕಾರಿ ಗಳ ಪೂರ್ಣ ಸಹಾಯ. ನಿರೀಕ್ಷೆಗೂ ಮೀರಿದ ಧನಾಗಮ. ಸಹೋದ್ಯೋಗಿಗಳಿಂದ ಹೆಚ್ಚಿನ ಲಾಭ. ಭೂಮ್ಯಾದಿ ವಿಚಾರಗಳಲ್ಲಿ ಚರ್ಚೆಯಿಂದ ಮುನ್ನಡೆ.

ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷೆಯಂತೆ ಸ್ಥಾನ ಲಾಭ. ಧನ ಸಂಪತ್ತು ಪ್ರಾಪ್ತಿ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿ. ಮಕ್ಕಳಿಂದಲೂ ಗೃಹದಲ್ಲಿ ಸಂತೋಷ ವೃದ್ಧಿ. ಸತ್ಕರ್ಮಕ್ಕೆ ಧನವ್ಯಯ.

ಧನು: ಸಣ್ಣ ಪ್ರಯಾಣ. ಸಹೋದ್ಯೋಗಿಗಳ ಮೇಲೆ ಅವಲಂಬನೆ. ನೂತನ ಮಿತ್ರರ ಭೇಟಿ. ಕೈತುಂಬ ವ್ಯವಹಾರ ಉದ್ಯೋಗಾವಕಾಶ. ದೂರದ ವ್ಯವಹಾರಗಳಿಂದ ಧನಲಾಭ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ, ಪುರಸ್ಕಾರ ಲಭ್ಯ.

ಮಕರ: ಭೂಮಿ ಆಸ್ತಿ ವಿಚಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಬದಲಾವಣೆ ಸಂಭವ. ಆದಾಯಕ್ಕೆ ಸಮನಾದ ವ್ಯಯ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.

ಕುಂಭ: ಆರೋಗ್ಯ ವೃದ್ಧಿ. ನಿರೀಕ್ಷೆಯಂತೆ ಸ್ಥಾನ ಸುಖಾದಿ ವೃದ್ಧಿ. ಹೆಚ್ಚಿದ ವರಮಾನ. ಕೆಲಸಕಾರ್ಯಗಳಲ್ಲಿ ತಲ್ಲೀನತೆ. ಅನಿರೀಕ್ಷಿತ ಬದಲಾವಣೆ. ಮಿತ್ರರಿಂದ ಸಹಕಾರ. ದಾಂಪತ್ಯ ಸುಖ ಮಧ್ಯಮ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಮೀನ: ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಭೂಮ್ಯಾದಿ ವ್ಯವಹಾರಗಳಲ್ಲಿ ಅಭಿವೃದ್ಧಿ. ಅಧ್ಯಯನನಿರತರಿಗೆ ಪರಿಕರ ಸೌಲಭ್ಯದ ಸುಖ. ದೀರ್ಘ‌ ಪ್ರಯಾಣ ಸಂಭವ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next