Advertisement
ವಾಹನ, ಭೂಮಿ ಇತ್ಯಾದಿ ಆಸ್ತಿ ವಿಚಾರದಲ್ಲಿಯೂ, ಉದ್ಯೋಗ, ಸರಕಾರೀ ವ್ಯವಹಾರಗಳಲ್ಲಿ ಕೂಡಿದ ಚಟುವಟಿಕೆ. ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಧನಾರ್ಜನೆಗೆ ಕೊರತೆಯಾಗದು. ಸಂತೋಷದಿಂದ ಸಮಯ ಕಳೆಯುವಿರಿ.
Related Articles
Advertisement
ಆರೋಗ್ಯದ ಬಗ್ಗೆ ಗಮನವಿರಲಿ. ಅತಿಯಾದ ಕಾರ್ಯ ಒತ್ತಡ ಎದುರಾದೀತು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ಶ್ರಮ ಅಧಿಕವೆನಿಸೀತು. ಮಾತಿನಲ್ಲಿ ಸಹನೆ ಹಾಗೂ ಎಚ್ಚರವಿರಲಿ. ಹಣಕಾಸಿನ ಬಗ್ಗೆ ಎಚ್ಚರವಿರಲಿ.
ಕಟಕ:
ದೀರ್ಘ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಹೆಚ್ಚಿನ ಅವಕಾಶ ತೋರೀತು. ಗುರುಹಿರಿಯರ ಆರೋಗ್ಯ ಗಮನಿಸಿ.
ಸಿಂಹ:
ದೇಹಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧಿಸಿದ ತೃಪ್ತಿ. ಪತ್ರ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿದರಿಂದಲೂ ದೃಢ ನಿರ್ಧಾರದಿಂದ ಕಾರ್ಯ ಸಫಲತೆ.
ಕನ್ಯಾ:
ಆರೋಗ್ಯ ವೃದ್ಧಿ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಧನ ವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆಯ ನಡೆ ಅಗತ್ಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ.
ತುಲಾ:
ವಸ್ತ್ರ ಆಭರಣ ಖರೀದಿ. ವಿವಾಹಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ, ಸುಖ ಸಂತೋಷ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಸಾಂಸಾರಿಕವಾಗಿ ಉತ್ತಮ ದಿನ.
ವೃಶ್ಚಿಕ:
ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ. ಗೌರವಾದಿ ವೃದ್ಧಿ. ಬಂಧುಜನರೊಂದಿಗೆ ವಿಲಾಸ. ಧಾರ್ಮಿಕ ವಿಚಾರ ಆಸಕ್ತಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಗೃಹದಲ್ಲಿ ಸಂತೋಷದ ವಾತಾವರಣ.
ಧನು:
ಆರೋಗ್ಯ ವೃದ್ಧಿ. ಸತ್ಕರ್ಮ ಸದಾಚಾರತೆ, ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ ದಾನ ಧರ್ಮ ನಿರತ. ಗುರುಹಿರಿಯರ ಪ್ರೀತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ.
ಮಕರ:
ಪಾರದರ್ಶಕತೆಗೆ ಆದ್ಯತೆ ನೀಡಿ. ಯಾರ ಮಾತಿಗೂ ಮರುಳಾಗದಿರಿ. ಉದ್ಯೋಗ ವ್ಯವಹಾರಗಳಲ್ಲಿ ಆಸ್ತಿ ವಿಚಾರಗಳಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಅನ್ಯರ ಸಹಾಯ ಅಪೇಕ್ಷಿಸದೆ ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ.
ಕುಂಭ:
ನಯವಿನಯದಿಂದ ಕಾರ್ಯ ಪ್ರವೃತ್ತರಾಗಿ. ಯಾವುದೇ ಆತುರದ ನಿರ್ಧಾರ ಮಾಡದಿರಿ. ಪರರ ಮಾತನ್ನು ಆಲಿಸುವಾಗ ನಿಮ್ಮ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುಟ್ಟನ್ನು ಕಾಪಾಡಿಕೊಳ್ಳಿ. ಉತ್ತಮ ಧನಸಂಪತ್ತು ವೃದ್ಧಿ. ಆರೋಗ್ಯ ಗಮನಿಸಿ.
ಮೀನ:
ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಪ್ರತಿಸ್ಪರ್ಧಿಗಳಿಗೆ ಅವಕಾಶವಿಲ್ಲದಂತೆ ಕಾರ್ಯಮಗ್ನರಾಗಿ. ಉತ್ತಮ ಧನಾರ್ಜನೆ. ಮಾತಿನಲ್ಲಿ ಸ್ಪಷ್ಟತೆ ತಾಳ್ಮೆ ಇರಲಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ. ಸಾಂಸಾರಿಕವಾಗಿ ಉತ್ತಮ ದಿನ.