Advertisement

ರಾಶಿ ಫಲ: ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನಃತೃಪ್ತಿ, ಕೀರ್ತಿ ಸಂಪಾದನೆ

07:24 AM Feb 08, 2023 | Team Udayavani |

ಮೇಷ: ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಅಧಿಕ ಪರಿಶ್ರಮದಿಂದ ಸಫ‌ಲತೆ ಸ್ಥಾನ ಗೌರವಾದಿ ಲಭ್ಯ. ನೆಮ್ಮದಿ ಕಮ್ಮಿ. ಬಂಧು ಮಿತ್ರರಿಗೆ ಹೆಚ್ಚಿದ ಒತ್ತಡ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಸ್ಪಷ್ಟ ನಿರ್ಧಾರದಿಂದ ನಿರೀಕ್ಷಿತ ಫ‌ಲ ಲಭ್ಯ.

Advertisement

ವೃಷಭ: ಮನೋರಂಜನೆಯಲ್ಲಿ ಕಾಲಕಳೆಯುವಿಕೆ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ಗೌರವಾದಿ ಪ್ರಗತಿ. ಅವಿವಾಹಿತರಿಗೆ ವಿವಾಹ ಯೋಗ. ಯೋಗ್ಯ ಸಂಬಂಧ ಒದಗಿಬರುವುದು. ಬಹುವಿಧದಿಂದ ಧನ ಸಂಚಯನ.

ಮಿಥುನ: ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಮನಃತೃಪ್ತಿ. ಕೀರ್ತಿ ಸಂಪಾದನೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಿಕೆ. ದಾಂಪತ್ಯ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ.

ಕರ್ಕ: ಹಣಕಾಸಿನ ನಿರೀಕ್ಷೆಯಲ್ಲಿ ಸಫ‌ಲತೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯವೈಖರಿ. ದೂರದ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಲಭ್ಯ. ಗೃಹದಲ್ಲಿ ಸಂಭ್ರಮದ ವಾತಾವರಣ.

ಸಿಂಹ: ದೂರ ಸಂಚಾರ. ಸ್ಥಾನ ಗೌರವಾದಿ ವಿಚಾರಗಳಲ್ಲಿ ಅಭಿವೃದ್ಧಿ ಪ್ರಗತಿ. ಗುರುಹಿರಿಯರ ಸಂದಭೋìಚಿತ ಸಹಾಯ ಸಹಕಾರ ಲಭ್ಯ. ಜವಾಬ್ದಾರಿಯುತ ಮಾತಿನಿಂದ ವ್ಯವಹಾರಗಳಲ್ಲಿ ಶ್ರೇಯಸ್ಸು ಸಂಭವ.

Advertisement

ಕನ್ಯಾ: ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವುದು. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಆರೋಗ್ಯದಲ್ಲಿ ಗಣನೀಯ ವೃದ್ಧಿ. ಬಂಧು ಮಿತ್ರರ ಸಹಕಾರ. ಗೃಹ ಉಪಯೋಗಿ ವಸ್ತುಗಳ ಸಂಗ್ರಹ. ಆಸ್ತಿ ವಾಹನಾದಿ ವಿಚಾರಗಳಲ್ಲಿ ಅಭಿವೃದ್ಧಿ.

ತುಲಾ: ಮಕ್ಕಳ ಬಗ್ಗೆ ವಿಶೇಷ ಗಮನ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಪ್ರಗತಿ. ತಾಳ್ಮೆಯಿಂದ ನಡೆದುಕೊಳ್ಳಿ. ಮೇಲಧಿಕಾರಿಗಳ ಪ್ರೀತಿ ಪ್ರಾಪ್ತಿ. ನಿರೀಕ್ಷಿಸಿದಂತೆ ಅಧಿಕ ಧನಲಾಭ. ಉತ್ತಮ ವಾಕ್‌ಪಟುತ್ವ. ಜನಮನ್ನಣೆ ಕುಟುಂಬ ಸುಖ ವೃದ್ಧಿ.

ವೃಶ್ಚಿಕ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಮಾನಸಿಕ ನೆಮ್ಮದಿ ಕಂಡುಬರುವುದು ಬಂಧುಮಿತ್ರರಿಗಾಗಿ ಹೆಚ್ಚಿನ ಸಮಯ ಕಳೆಯುವಿಕೆ.ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್‌ಚತುರತೆ.

ಧನು: ಆರೋಗ್ಯ ಗಮನಿಸಿ. ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮಾನಾಗಿರುವುದು. ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕತೆ.

ಮಕರ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ ಕೆಲಸ ವ್ಯವಹಾರಗಳ ಜವಾಬ್ದಾರಿ. ಗೌರವ ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ ಜ್ಞಾನ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ.

ಕುಂಭ: ಮನೋರಂಜನೆ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳಿಂದ ಶುಭ ವಾರ್ತೆ. ಅಧಿಕ ಧನ ವ್ಯಯ ಸಂಭವ. ಆತುರದ ನಿರ್ಣಯ ಮಾಡದಿರಿ. ಸಾಧನಕಾರರಿಗೆ ಶೈಕ್ಷಣಿಕರಂಗದಲ್ಲಿ ಉತ್ತಮ ಅವಕಾಶ. ದಾಕ್ಷಿಣ್ಯ ತೊರೆದು ವ್ಯವಹರಿಸಿ.

ಮೀನ: ಸತ್ಕರ್ಮದಲ್ಲಿ ಆಸಕ್ತಿ. ಆತುರದ ನಿರ್ಣಯ ಮಾಡದಿರಿ. ಸಾಧನಕಾರರಿಗೆ ಶೈಕ್ಷಣಿಕರಂಗದಲ್ಲಿ ಉತ್ತಮ ಅವಕಾಶ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next