Advertisement

ರಾಶಿ ಫಲ: ಆರೋಗ್ಯ ಗಮನಿಸಿ, ದೂರದ ವ್ಯವಹಾರಗಳಲ್ಲಿ ಪ್ರಗತಿ

07:32 AM Feb 04, 2023 | Team Udayavani |

ಮೇಷ: ಘರ್ಷಣೆಗೆ ಅವಕಾಶ ನೀಡದೇ ಪಾರದರ್ಶಕತೆಗೆ ಆದ್ಯತೆ ನೀಡಿ ಕಾರ್ಯ ನಿರ್ವಹಿಸುವುದ ರಿಂದ ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಲಭ್ಯ. ಧನಾಗಮನ ಅತ್ಯುತ್ತಮ. ಭೂಮ್ಯಾದಿ ವ್ಯವಹಾರಗಳಲ್ಲಿ ಅನುಕೂಲಕರ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಶ್ರಮ.

Advertisement

ವೃಷಭ: ಧಾರ್ಮಿಕ ಕ್ಷೇತ್ರ ಸಂದರ್ಶನ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯಿಂದ ಕೂಡಿದ ಬದಲಾವಣೆ. ಸಾಂಸಾರಿಕ ಸುಖ ಮಧ್ಯಮ. ಸಹೋದ್ಯೋಗಿ ಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.

ಮಿಥುನ: ನಿರೀಕ್ಷೆಯಂತೆ ಉತ್ತಮ ವಾಕ್‌ ಚತುರತೆಯಿಂದ ಹೆಚ್ಚಿದ ಧನಲಾಭ. ಆರೋಗ್ಯ ಗಮನಿಸಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಸಹೋದರ ಸಮಾನರಿಂದ ಪ್ರೋತ್ಸಾಹ ಸಹಕಾರ. ವಿದ್ಯಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳ ನಿಮಿತ್ತ ಪರಿಶ್ರಮ.

ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ ಗಳಿಸಲು ಹೆಚ್ಚು ತಾಳ್ಮೆ ಪರಿಶ್ರಮ ಅಗತ್ಯ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಯಿಂದ ನೆಮ್ಮದಿ ಲಭಿಸೀತು. ಗುರು ಹಿರಿಯರ ಚರ್ಚೆಗೆ ಆಸ್ಪದ ನೀಡದಿರಿ.

ಸಿಂಹ: ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣದಲ್ಲಿ ಸರಿಯಾದ ನಿಯಮ ಪಾಲಿಸಿ. ಉದ್ಯೋಗ ವ್ಯವಹಾರದಲ್ಲಿ ಅತೀ ಉದಾರತೆಯಿಂದ ತೊಂದರೆ ಸಂಭವ. ಹಣಕಾಸಿನ ಬಗ್ಗೆ ಪಾರದರ್ಶಕತೆ ಇರಲಿ. ವಿಶ್ರಾಂತಿಗೆ ಗಮನಹರಿಸಿ.

Advertisement

ಕನ್ಯಾ: ಸ್ವಜನರಲ್ಲಿ ವಿಶ್ವಾಸ ಪ್ರೀತಿ ಆತ್ಮೀಯತೆ ತೋರುವುದರಿಂದ ಗೌರವಾದಿ ವೃದ್ಧಿ. ಜಲೋತ#ನ್ನ ವಸ್ತುಗಳ ಕ್ರಯ ವಿಕ್ರಯದಲ್ಲಿ ಹೆಚ್ಚಿದ ವರಮಾನ. ಉತ್ತಮ ವಾಕ್‌ಚತುರತೆಯಿಂದ ಜನರಂಜನೆ. ಸಾಂಸಾರಿಕ ಸುಖ ವೃದ್ಧಿ.

ತುಲಾ: ಹಠಮಾರಿತನ ಸಲ್ಲದು. ಸುಮ್ಮನೆ ನಿಷ್ಠುರಕ್ಕೆ ಕಾರಣವಾಗದಿರಿ. ತಾಳ್ಮೆ ಸಹನೆಯಿಂದ ವ್ಯವಹರಿಸಿ ನಿರೀಕ್ಷಿತ ಗುರಿಸಾಧಿಸಿಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚು ಪರಿಶ್ರಮ ಅಗತ್ಯ.

ವೃಶ್ಚಿಕ: ಆರೋಗ್ಯ ವೃದ್ಧಿ. ಹೆಚ್ಚಿದ ಸ್ಥಾನಮಾನ ಗೌರವ. ಬಂಧು ಮಿತ್ರರ ಸಹಕಾರ. ಕೈತುಂಬಾ ಉದ್ಯೋಗ ವ್ಯವಹಾರ ಸಂಭವ. ಸಾಂಸಾರಿಕ ಸುಖ ವೃದ್ಧಿ. ಗುರುಹಿರಿಯರ ಉತ್ತಮ ಮಾರ್ಗದರ್ಶನ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

ಧನು: ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಬದಲಾವಣೆ ಸಂಭವ. ದೀರ್ಘ‌ ಪ್ರಯಾಣದಿಂದ ಲಾಭ. ನೂತನ ಮಿತ್ರರ ಸಮಾಗಮ. ಆಸ್ತಿ ಭೂಮಿ ಕಟ್ಟಡ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಮಧ್ಯಮ. ಆಸ್ತಿ ವಿಚಾರದಲ್ಲಿ ತಲ್ಲೀನತೆ.

ಮಕರ: ಮಕ್ಕಳಿಂದ ಹೆಚ್ಚಿದ ಸಂತೋಷ. ಬಹು ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ವಿಫ‌ುಲ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ಅನಿರೀಕ್ಷಿತ ಧನಾಮನ ಹಾಗೂ ಹೆಚ್ಚಿದ ಉಳಿತಾಯ. ಧನಾರ್ಜನೆಯ ಅತ್ತುತ್ತಮ ಅವಕಾಶ.

ಕುಂಭ: ಆಸ್ತಿ ವಿಚಾರದಲ್ಲಿ ಪ್ರಗತಿ. ಬಂಧು ಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ. ಧನಾರ್ಜನೆಗೆ ಉತ್ತಮ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶ ಗೌರವಾದಿ ಪ್ರಾಪ್ತಿ. ದಾಂಪತ್ಯ ತೃಪ್ತಿದಾಯಕ.

ಮೀನ: ಗೃಹೋಪ ವಸ್ತುಗಳ ಸಂಗ್ರಹ. ಆರೋಗ್ಯ ಗಮನಿಸಿ. ಸಹೋದರ ಸಮಾನರಿಂದಲೂ ಉತ್ತಮ ಸಹಕಾರ ಸಂಭವ. ಹೆಚ್ಚಿದ ವರಮಾನ. ಗೃಹದಲ್ಲಿ ಸಂತಸದ ವಾತಾವರಣ. ಬಂಧು ಮಿತ್ರರ ಸಮಾಗಮ. ಸಂತಸದಿಂದ ಕೂಡಿದ ದಿನ.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next