Advertisement

ರಾಶಿ ಫಲ: ಎಲ್ಲರೂ ಶ್ಲಾಘಿಸುವಂತಹ ದಿನಚರಿ, ಗೌರವ ಆದರಗಳು ವೃದ್ಧಿ

07:18 AM Feb 03, 2023 | Team Udayavani |

ಮೇಷ: ದೈಹಿಕ ಮಾನಸಿಕ ಸುಖ ವೃದ್ಧಿ. ಅಧಿಕ ಶ್ರಮದಿಂದ ಕೂಡಿದ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಭೂಮಿ ವಾಹನ ಆಸ್ತಿ ವಿಚಾರದಲ್ಲಿ ಪ್ರಗತಿ. ದಾಂಪತ್ಯ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡವಿದ್ದರೂ ಕಾರ್ಯ ಸಾಧಿಸಿದ ತೃಪ್ತಿ.

Advertisement

ವೃಷಭ: ಜವಾಬ್ದಾರಿಯುತ ಕಾರ್ಯವೈಖರಿ ಯಿಂದ ಸ್ಥಾನ ಗೌರವಾದಿ ಸುಖ ಪ್ರಶಂಸೆ ಆರೋಗ್ಯ ವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ.

ಮಿಥುನ: ಉತ್ತಮ ಜನಸಂಪರ್ಕ. ಎಲ್ಲರೂ ಶ್ಲಾಘಿಸುವಂತಹ ದಿನಚರಿ. ಗೌರವ ಆದರಗಳು ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ. ನಷ್ಟ ವಸ್ತುಗಳಿಗಾಗಿ ಪುನಃ ಪ್ರಯತ್ನಿಸಿದರೆ ಸಿಗುವ ಸಮಯ. ದಂಪತಿಗಳಲ್ಲಿ ಪರಸ್ಪರ ಪ್ರೀತಿ ವೃದ್ಧಿ.

ಕರ್ಕ: ಉತ್ತಮ ಯೋಗ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಿಂದ ಕೀರ್ತಿ ಜನಮನ್ನಣೆ ಪ್ರಾಪ್ತಿ. ಆರೋಗ್ಯ ವೃದ್ಧಿ ನಿರೀಕ್ಷಿತ ಧನಸಂಚಯನ. ಮಾತಿನಲ್ಲಿ ತಾಳ್ಮೆ ಪ್ರಾಮಾಣಿಕತೆ ಇರಲಿ. ಗುರು ಹಿರಿಯರಲ್ಲಿ ಭಯ ಭಕ್ತಿಯ ನಡವಳಿಕೆಯಿಂದ ಗೌರವ.

ಸಿಂಹ: ನಿರೀಕ್ಷಿತ ಸ್ಥಾನ ಮಾನ ಪ್ರಾಪ್ತಿ. ರಾಜಕೀಯ, ಸಹಕಾರಿ ವ್ಯವಹಾರಗಳಲ್ಲಿ ಅಭಿವೃದ್ಧಿ. ಲೋಕಪ್ರೀಯತೆ ಜನಮನ್ನಣೆ. ನಿರೀಕ್ಷಿತ ಧನ ಸಂಪತ್ತು ವೃದ್ಧಿ. ಪರೋಪಕಾರದಿಂದ ಅಪವಾದ ತೊಂದರೆ ಸಂಭವ. ವಿಚಾರಮಾಡಿ ತೀರ್ಮಾನಿಸಿದರೆ ನೆಮ್ಮದಿ.

Advertisement

ಕನ್ಯಾ: ಉತ್ತಮ ವಾಕ್‌ ಚತುರತೆ. ಅಧಿಕ ಧನ ಸಂಪತ್ತು ಲಭಿಸಿದ ಸಂತೋಷ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಬುದ್ಧಿವಂತಿಕೆ ನಡೆಯಿಂದ ಯಶಸ್ಸು. ಜನಮನ್ನಣೆ. ಗೌರವ ಪ್ರಾಪ್ತಿ. ದಂಪತಿಗಳಲ್ಲಿ ಹೆಚ್ಚಿದ ಅನುರಾಗ.

ತುಲಾ: ಪರರ ಸಹಾಯದಿಂದ ಹೆಚ್ಚಿದ ಧನಲಾಭ. ಸಂದಭೋìಚಿತವಾದ ವಾಕ್‌ ಚತುರತೆಯಿಂದ ಕಾರ್ಯ ಸಫ‌ಲತೆ. ಹೆಚ್ಚಿದ ಸಾಂಸಾರಿಕ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ದೂರದ ಚಟುವಟಿಕೆಗಳಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ವೃಶ್ಚಿಕ: ಅನಿರೀಕ್ಷಿತ ಧನವೃದ್ಧಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಕುಟುಂಬ ಸುಖ ವೃದ್ಧಿ. ಆರೋಗ್ಯದ ಬಗ್ಗೆ ಹೆಚ್ಚಿದ ನಿಗಾ ವಹಿಸುವಿಕೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಧನು: ವಿದ್ಯಾರ್ಜನೆಯಲ್ಲಿ ಆಸಕ್ತಿ. ಅನಿರೀಕ್ಷಿತ ಸುಖ ವ್ಯವಸ್ಥೆಗಳು ಲಭಿಸುವುವು. ಪದವಿ ಪ್ರಾಪ್ತಿ. ಮಾನಸಿಕ ತೃಪ್ತಿ. ಯೋಚಿಸಿದಂತೆ ಕಾರ್ಯಗಳು ನಡೆಯುವುವು. ಗುರು ಹಿರಿಯರ ಮಾರ್ಗದರ್ಶನದ ಲಾಭ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವುದು.

ಮಕರ: ದೂರ ಪ್ರಯಾಣ. ಗುರುಹಿರಿಯರ ಅವಲಂಬನೆ ಪರಿಶ್ರಮ ನಿಷ್ಠೆಗೆ ತಕ್ಕ ಪ್ರತಿಫ‌ಲ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ ಮಾನ್ಯತೆ ಪ್ರಾಪ್ತಿ. ಗೃಹದಲ್ಲಿ ಸಂಭ್ರಮ. ಬಂಧು ಮಿತ್ರರ ಆಗಮನದಿಂದ ಮನಃಸಂತೋಷ.

ಕುಂಭ: ಉತ್ತಮ ಸ್ಥಾನ ಗೌರವದ ಸುಖ. ಆಸ್ತಿ ಸಂಗ್ರಹದಲ್ಲಿ ಆಸಕ್ತಿ. ನೂತನ ಮಿತ್ರರ ಭೇಟಿ. ಮಾತೃಸಮಾನರಿಂದ ಸಹಕಾರ ಪ್ರೋತ್ಸಾಹ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಆರೋಗ್ಯದಲ್ಲಿ ಸುಧಾರಣೆ. ಆರ್ಥಿಕವಾಗಿ ಸುದೃಢ.

ಮೀನ: ಪಾಲುದಾರಿಕ ವ್ಯವಹಾರದಲ್ಲಿ ತಾಳ್ಮೆ ಸಹನೆಯಿಂದ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಆಲೋಚಸಿ ನಿರ್ಣಯ ಮಾಡುವುದರಿಂದ ಯಶಸ್ಸು. ದಾಂಪತ್ಯದಲ್ಲಿ ಯಾ ಮನೆಯ ವಾತಾವರಣದಲ್ಲಿ ಹೆಚ್ಚಿನ ಚರ್ಚೆಗೆ ಆದ್ಯತೆ ನೀಡದಿರಿ.ಧನಾರ್ಜನೆಗೆ ಅತ್ಯುತ್ತಮ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next