Advertisement

ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವುದು, ಅಧಿಕ ಧನ ಸಂಪಾದನೆ

07:20 AM Feb 18, 2023 | Team Udayavani |

ಮೇಷ: ಆರೋಗ್ಯ ಗಮನಿಸಿ. ಆಹಾರ ಸೇವನೆಯಲ್ಲಿ ಮಂಜಾಗ್ರತೆ ಅಗತ್ಯ. ಧಾರ್ಮಿಕ ಕಾರ್ಯಗಳಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲ. ಮಾತೃ ಸಮಾನರಿಂದ ನಿರೀಕ್ಷಿತ ಪ್ರೋತ್ಸಾಹ ಸಹಕಾರ ಲಭ್ಯ. ಉದ್ಯೋಗದಲ್ಲಿ ನಿರೀಕ್ಷಿತ ಧನಪ್ರಾಪ್ತಿ.

Advertisement

ವೃಷಭ: ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ದೂರ ಪ್ರಯಾಣ ತೀರ್ಥ ಕ್ಷೇತ್ರಗಳ ಸಂದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾ ಯಕ ಅಭಿವೃದ್ಧಿ ಬದಲಾವಣೆ. ಉತ್ತಮ ಧನಾರ್ಜನೆ ಉಳಿತಾಯಕ್ಕೆ ಚಿಂತನೆ. ಗೃಹದಲ್ಲಿ ಸಂತಸದ ದಿನ.

ಮಿಥುನ: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವುದು. ನೂತನ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ ಅಭಿವೃದ್ಧಿ. ನಿರೀಕ್ಷಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ. ಅಧಿಕ ಧನಸಂಪಾದನೆ. ಉತ್ತಮ ವಾಕ್‌ಚತುರತೆಯ ನಡೆ.

ಕರ್ಕ: ಆರೋಗ್ಯ ವೃದ್ಧಿ. ಗುರುಹಿರಿಯರ ಮಾರ್ಗದರ್ಶನ. ವಿವಾಹ ಭಾಗ್ಯ. ನೂತನ ಮಿತ್ರರ ಸಮಾಗಮ. ಗೃಹದಲ್ಲಿ ಸಂಭ್ರಮದ ವಾತಾವರಣ. ಉದ್ಯೋಗದಲ್ಲಿ ಶ್ರೇಯಸ್ಸು ಪ್ರಗತಿ, ಕಾರ್ಯಸಾಧನೆ. ಸಾಹಸದಿಂದ ಧನವೃದ್ಧಿ.

ಸಿಂಹ: ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ. ಪ್ರೋತ್ಸಾಹ ಧನ ಲಾಭ ಸಂಭವ. ಉದ್ಯೋಗಸ್ಥರಿಗೆ ಅಧಿಕ ಪರಿಶ್ರಮ, ಹೆಚ್ಚಿದ ಜವಾಬ್ದಾರಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಗೃಹ ಉಪಯೋಗಿ ವಸ್ತು ಸಂಗ್ರಹ.

Advertisement

ಕನ್ಯಾ: ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ಸಂಚಯನದಲ್ಲಿ ಆಸಕ್ತಿ. ಬಂಧು ಮಿತ್ರರ ಆಗಮನದಿಂದ ಹೆಚ್ಚಿದ ಖುಷಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ಆರ್ಥಿಕವಾಗಿ ಸುದೃಢ. ಹೆಚ್ಚಿದ ವರಮಾನ. ನೂತನ ಹೂಡಿಕೆ ಸಂಭವ.

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯಸಾಧಿಸಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಿಂದ ಅಧಿಕ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಮನೆಯಲ್ಲಿ ಸಂತಸದ ವಾತಾವರಣ. ಗುರುಹಿರಿಯರಿಗೆ ಹೆಚ್ಚಿದ ಜವಾಬ್ದಾರಿ.

ವೃಶ್ಚಿಕ: ದೀರ್ಘ‌ ಪ್ರಯಾಣದಿಂದ ದೇಹಾ ಯಾಸ ಸಂಭವ. ಆರೋಗ್ಯದ ಬಗ್ಗೆ ಉದಾ ಸೀನತೆ ಸಲ್ಲದು. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರುವುದು.

ಧನು: ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಸಾಂಸಾರಿಕ ಸುಖ ಮಧ್ಯಮ. ವಿದ್ಯಾರ್ಥಿಗಳು ಪರರ ಸಹಾಯ ಪಡೆದು ನಿರೀಕ್ಷಿತ ಸಾಧನೆ. ಧಾರ್ಮಿಕ ಕಾರ್ಯಗಳಲ್ಲಿ ಪರಿಶ್ರಮ.

ಮಕರ: ಆರೋಗ್ಯದಲ್ಲಿ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ವಿಚಾರದಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಬಗ್ಗೆ ಹೆಚ್ಚಿದ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಂಭವ.

ಕುಂಭ: ದೀರ್ಘ‌ ಪ್ರಯಾಣ ನಿರೀಕ್ಷಿತ ಸಫ‌ಲತೆ. ಉತ್ತಮ ಸ್ಥಾನಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ದಾಂಪತ್ಯ ಸುಖ ತೃಪ್ತಿದಾಯಕ.

ಮೀನ: ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲೆಯೊಂದಿಗೆ ವ್ಯವಹರಿಸಿ. ದೂರದ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫ‌ಲ.

Advertisement

Udayavani is now on Telegram. Click here to join our channel and stay updated with the latest news.

Next