Advertisement

Daily Horoscope: ಹುರುಳಿಲ್ಲದ ವಿವಾದಗಳಿಂದ ದೂರವಿರಿ, ಮನೆಯಲ್ಲಿ ವಿವಾಹ ನಿಶ್ಚಯ

07:24 AM Dec 08, 2024 | Team Udayavani |

ಮೇಷ: ಇಂದು ಉದ್ಯೋಗದ ತಾಪತ್ರಯ ಗಳ ಚಿಂತೆ ಬೇಡ.  ವ್ಯವಹಾರದಲ್ಲಿ ವಿಶೇಷ ಯಶಸ್ಸು. ಸರಕಾರಿ ಉದ್ಯೋಗಸ್ಥರಿಗೆ ವಿರಾಮದ ಹರ್ಷಾನುಭವ. ಮಹಿಳಾ ಉದ್ಯಮಿಗಳಿಗೆ ನೆಮ್ಮದಿ.ಆಸ್ಪತ್ರೆಗೆ ಭೇಟಿ, ರೋಗಿಗಳಿಗೆ ಸಾಂತ್ವನ.

Advertisement

ವೃಷಭ: ನಿಕಟ ಭವಿಷ್ಯದ ಕಾರ್ಯಗಳ  ಕುರಿತು ಚಿಂತನೆ. ಖಾದಿಯ ಸಿದ್ಧ ಉಡುಪು ಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ಪ್ರಮುಖ ವ್ಯಕ್ತಿಯಿಂದ ಅಮೂಲ್ಯ ಸಲಹೆ. ಸಮಾಜದ ಹಿರಿಯ ಸಾಧಕರಿಗೆ ಸಮ್ಮಾನ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ.

ಮಿಥುನ: ಅಪೇಕ್ಷೆಪಟ್ಟವರಿಗೆ ಮಾತ್ರ ಸಲಹೆ ನೀಡಿ. ಉದ್ಯೋಗಸ್ಥರ ಹಳೆಯ  ಸಮಸ್ಯೆ ನಿವಾರಣೆ. ಹುರುಳಿಲ್ಲದ ವಿವಾದಗಳಿಂದ ದೂರವಿರಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ಉತ್ತರದ ಕಡೆಗೆ ಸಣ್ಣ ಪ್ರಯಾಣ ಸಂಭವ.

ಕರ್ಕಾಟಕ: ನಾಳೆಯ ಕೆಲಸಗಳ ಕುರಿತು ಹೆಚ್ಚು  ಚಿಂತೆ ಬೇಡ. ಕಿರಿಯ ಉದ್ಯಮಿಗಳ ಸ್ನೇಹಕೂಟ ಆಯೋಜನೆ. ಮಹಿಳೆಯರ ಸೊÌàದ್ಯೋಗ ಯೋಜನೆ  ಉತ್ಪನ್ನಗಳಿಗೆ ಕೀರ್ತಿ. ಗೆಳೆಯರ ನಡುವೆ ಸಾಹಿತ್ಯ, ಕಲೆಗಳ ಕುರಿತು ಚರ್ಚೆ.

ಸಿಂಹ: ಉದ್ಯಮಕ್ಕೆ ಹೊಸರೂಪ ನೀಡುವ ಕ್ರಮ ಮುಂದುವರಿಕೆ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಶಿಕ್ಷಿತ  ಕುಶಲಕರ್ಮಿಗಳಿಗೆ  ಉದ್ಯೋಗ ಪ್ರಾಪ್ತಿ. ಕುಟುಂಬದಲ್ಲಿ ಎಲ್ಲರಿಗೂ ನೆಮ್ಮದಿಯ ಅನುಭವ. ಬಂಧುಗಳ ಮನೆಯಲ್ಲಿ ವಿವಾಹ ನಿಶ್ಚಯ.

Advertisement

ಕನ್ಯಾ: ಸರಕಾರಿ ಉದ್ಯೋಗಸ್ಥರಿಗೆ ವಿರಾಮದ ಆನಂದ. ಸಹೋದ್ಯೋಗಿ ಮಿತ್ರರ ಸಂತೋಷ ಕೂಟ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.ಅಸಹಾಯಕರಿಗೆ ಸಹಾಯ ಮಾಡುವ ಅವಕಾಶ.

ತುಲಾ: ಕೆಲವು ಕ್ಷೇತ್ರಗಳವರಿಗೆ ಹಿತಶತ್ರುಗಳ ಕಾಟ.  ಉದ್ಯಮಿಗಳಿಗೆ ಮಾಮೂಲು ಪೈಪೋಟಿಯ ಅನುಭವ. ಉದ್ಯೋಗ ಅರಸುವವರಿಗೆ  ಆಶಾದಾಯಕ ವಾತಾವರಣ. ಲೇವಾದೇವಿ ವ್ಯವಹಾರ ದಲ್ಲಿ ನಷ್ಟ. ವಿದೇಶದಲ್ಲಿರುವ ಮಿತ್ರನ ಭೇಟಿ.

ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಯಾವುದೇ ತೊಂದರೆ ಆಗದು. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ.  ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಾಂಸಾರಿಕ ನೆಮ್ಮದಿ ಕೆಡಿಸುವವರಿಗೆ ಸೋಲು.

ಧನು: ಉದ್ಯಮಕ್ಕೆ ಹೊಸರೂಪ ನೀಡುವ ಯತ್ನ ಆರಂಭ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಬೆಳವಣಿಗೆಗೆ ಪೋ›ತ್ಸಾಹ. ಅಶಕ್ತರ ನೆರವಿನ ಯೋಜನೆಗಳಲ್ಲಿ ಭಾಗಿ. ಪ್ರಾಕೃತಿಕ ವಿಕೋಪಗಳ ಸಂತ್ರಸ್ತರಿಗೆ ನೆರವು.

ಮಕರ: ಬಂಧು, ಮಿತ್ರರ ಜತೆಯಲ್ಲಿ ವಿರಾಮದ ಆನಂದಾನುಭವ.  ಉದ್ಯಮಿ ಗಳಿಗೆ ಹಠಾತ್‌ ನಷ್ಟವಾಗುವ ಭೀತಿ.ಯಂತ್ರೋಪಕರಣ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಪ್ರಾಚೀನ ವಿದ್ಯೆಯಲ್ಲಿ ಸಾಧಕರ ಭೇಟಿ.

ಕುಂಭ:  ವಿರಾಮದಂದು ಮಂದಗತಿಯಲ್ಲಿ  ಸಾಗುವ  ಕೆಲಸ, ಕಾರ್ಯಗಳು. ಉದ್ಯೋಗಸ್ಥ ರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ.ಟೈಲರಿಂಗ್‌, ವೈಂಡಿಂಗ್‌ ಬಲ್ಲವರಿಗೆ ಅಧಿಕ ಆದಾಯ.ಕೃಷಿಕರಿಗೆ ಹವಾಮಾನ ವೈಪರೀತ್ಯದ ತೊಂದರೆ.

ಮೀನ: ಹಿರಿಯರ ಮನೆಯಲ್ಲಿ ಗುರುಹಿರಿಯರ ಭೇಟಿ.  ಸಾಮಾಜಿಕ  ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ, ನೊಂದವರಿಗೆ ಸಾಂತ್ವನ. ತಂದೆ-ತಾಯಿ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next