Advertisement

Daily Horoscope: ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಗಳಿಗೆ ಮನ್ನಣೆ

07:25 AM Dec 08, 2023 | Team Udayavani |

ಮೇಷ: ಲಕ್ಷ್ಮೀ ಕಟಾಕ್ಷ ನಿಮಗಾಗಿದೆ. ಅಕಸ್ಮಾತ್‌ ಧನಾಗಮ. ಉದ್ಯೋಗದಲ್ಲಿ ಅನಿರೀಕ್ಷಿತವಾದ ಪ್ರೋತ್ಸಾಹ. ಉದ್ಯಮದ ನೌಕರರಿಗೆ ಇಮ್ಮಡಿ ಕಾರ್ಯೋತ್ಸಾಹ. ಶೇರು ವ್ಯವಹಾರದಲ್ಲಿ ಲಾಭ. ಕೃಷಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

Advertisement

ವೃಷಭ: ಸಾಮರ್ಥ್ಯಕ್ಕೆ ತಕ್ಕ ಸ್ಥಾನದ ನಿರ್ವಹಣೆಯ ವಿಷಯದಲ್ಲಿ ಆತಂಕ ಬೇಡ. ಉದ್ಯೋಗ ನಿರ್ವಹಣೆಯಲ್ಲಿ ತೋರಿದ ಮುತುವರ್ಜಿಗೆ ಮೆಚ್ಚುಗೆ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಅಬಾಧಿತ. ಬಂಧುವರ್ಗದಲ್ಲಿ ಶುಭಕಾರ್ಯ.

ಮಿಥುನ: ಸಾಧನೆಯಿಂದ ಗಳಿಸಿದ ಭಗವಂತನ ಅನುಗ್ರಹದಿಂದ ಆಪತ್ತುಗಳು ದೂರ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಗಳಿಗೆ ಮನ್ನಣೆ. ನೌಕರರ ಮೇಲಿನ ವಾತ್ಸಲ್ಯ ಪ್ರಕಟನೆಯಿಂದ ಕಾರ್ಯ ಸಾಧನೆ ಸುಲಭ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ.

ಕರ್ಕಾಟಕ: ನಿಯಮಬದ್ಧವಾದ ಕಾರ್ಯವೈಖರಿಯಿಂದ ಯಶಸ್ಸು. ಉದ್ಯೋಗ ಸ್ಥಾನದಲ್ಲಿ ನಾಯಕನ ಪಟ್ಟ. ವಸ್ತ್ರ, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿಯಲ್ಲಿ ಹೊಸ ಪ್ರಯೋಗ ಆರಂಭ.

ಸಿಂಹ: ಹಲವು ಬಗೆಯ ಕಾರ್ಯಗಳನ್ನು ಮಾಡಿ ಮುಗಿಸಿದ ಮುಗಿಸಿದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಗೌರವದ ಸ್ಥಾನ ಭದ್ರ. ಆಪ್ತರಿಂದ ಅಪೇಕ್ಷಿತ ಮಟ್ಟ ದಲ್ಲಿ ಸಹಾಯ. ಉದ್ಯೋಗಾಸಕ್ತ ಹುಡುಗರಿಗೆ ಮಾರ್ಗ ದರ್ಶನ. ಐಟಿ ಉದ್ಯೋಗಿಗಳಿಗೆ ಮಾನಸಿಕ ಒತ್ತಡ.

Advertisement

ಕನ್ಯಾ: ಯಶಸ್ಸಿಗೆ ಅಡ್ಡಗಾಲು ಹಾಕುವ ಹಿತಶತ್ರುಗಳ ಹೂಟವನ್ನು ವಿಫ‌ಲಗೊಳಿಸುವ ಪ್ರಯತ್ನ ಯಶಸ್ವಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಮೇಲಧಿಕಾರಿಗಳಿಗೆ ಹರ್ಷ. ಉದ್ಯಮದ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಕುಟುಂಬದ ಹಿರಿಯರ ಭೇಟಿ.

ತುಲಾ: ಸ್ಥಿರಚಿತ್ತ ಸಾಧನೆಯಿಂದ ಕಾರ್ಯದಲ್ಲಿ ಜಯ. ಸ್ವಪ್ನದಲ್ಲಿ ಇಷ್ಟದೇವರ ದರ್ಶನ. ಉದ್ಯೋಗಸ್ಥಾನದಲ್ಲಿ ಸಹೋದ್ಯೋಗಿಗಳಿಗೆ ಸಹಾಯ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ಮಕ್ಕಳ ಪ್ರತಿಭಾ ಪ್ರದರ್ಶನದಿಂದ ಪೋಷಕರಿಗೆ ಹರ್ಷ.

ವೃಶ್ಚಿಕ: ಹಲವು ಕಾರ್ಯಕ್ಷೇತ್ರಗಳಲ್ಲಿ ಒಂದೇ ಬಗೆಯ ಸಮಾಧಾನದ ದಿನ. ಉದ್ಯಮ ನೌಕರ ರಿಂದ ಗೌರವ ಸಲ್ಲಿಕೆ. ಲೇವಾದೇವಿ ವ್ಯವಹಾರ ದಲ್ಲಿ ಮಧ್ಯಮ ಲಾಭ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ.

ಧನು: ಮನಸ್ಸನ್ನು ಅಂತರ್ಮುಖೀಯಾಗಿಸುವ ಪ್ರಯತ್ನ. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟು ವಟಿಕೆಗಳಲ್ಲಿ ಆಸಕ್ತಿ. ದೀರ್ಘ‌ಕಾಲ ತಪ್ಪಿಹೋಗಿದ್ದ ಗೆಳೆಯರ ಸಂಪರ್ಕ ಮತ್ತೆ ಆರಂಭ. ಉದ್ಯಮದ ನೌಕರ ವೃಂದಕ್ಕೆ ಹರ್ಷ. ಕೃಷಿ ಚಟುವಟಿಕೆಗಳ ವಿಸ್ತರಣೆ ಆರಂಭ.

ಮಕರ: ಕಾರ್ಯರಂಗಕ್ಕೆ ಅಸಂಸ್ಕೃತರ ಪ್ರವೇಶದಿಂದ ತೊಂದರೆ. ಉದ್ಯೋಗ ಸ್ಥಾನದಲ್ಲಿ ಸ್ವತ್ಛತೆ ಪಾಲನೆಗೆ ವ್ಯವಸ್ಥೆ. ಸ್ವಂತ ವೃತ್ತಿ ಆರಂಭಿಸಲು ಆಪ್ತರ ಮಾರ್ಗದರ್ಶನ. ಬಂಗಾರ ಖರೀದಿಗೆ ಧನವ್ಯಯ. ಬಂಧುಗಳ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ದ್ವಿಚಕ್ರ ವಾಹನ ಚಾಲನೆ ಕಲಿಯಲು ನಿರ್ಧಾರ.

ಕುಂಭ: ಎಲ್ಲ ದರ್ಜೆಗಳ ಉದ್ಯೋಗಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಜವಾಬ್ದಾರಿ. ಉದ್ಯಮ ಸ್ಥಾನದ ಅಭಿವೃದ್ಧಿ ಕಾರ್ಯಗಳ ನೇತೃತ್ವ. ಉತ್ಪನ್ನ ಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ.

ಮೀನ: ಸಂಸಾರ, ಉದ್ಯೋಗ, ವ್ಯವಹಾರಗಳ ಪಾತ್ರ ನಿರ್ವಹಣೆಯಲ್ಲಿ ಯಶಸ್ವಿ. ಉದ್ಯೋಗ ಸ್ಥಾನದಲ್ಲಿ ವೃತ್ತಿಬಾಂಧವರ ಸಂಪೂರ್ಣ ಸಹಕಾರ. ಸರಕಾರಿ ಇಲಾಖೆಯ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಕೃಷಿ, ಪಶುಪಾಲನೆ, ಮತ್ತು ಜೇನು ವ್ಯವಸಾಯಗಳ ಕಡೆಗೆ ಸೆಳೆತ.

Advertisement

Udayavani is now on Telegram. Click here to join our channel and stay updated with the latest news.

Next