Advertisement

ಮಂಗಳವಾರದ ರಾಶಿ ಫಲ; ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ, ನಿರೀಕ್ಷಿತ ಧನಾಗಮನ

07:25 AM Dec 06, 2022 | Team Udayavani |

ಮೇಷ: ಅನಿರೀಕ್ಷಿತ ಧನ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್‌ ಚತುರತೆ. ಗುರುಹಿರಿಯರಿಂದ ಸಂತೋಷ.

Advertisement

ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧುಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ, ಅನುರಾಗ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪರಿಶ್ರಮದಿಂದ ಮುನ್ನಡೆ.

ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ವಚ್ಛತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ನಿಮಿತ್ತ ಶ್ರಮ.

ಕರ್ಕ: ಸಣ್ಣ ಪ್ರಯಾಣ ಸಂಭವ. ನಿರೀಕ್ಷೆಗೂ ಮೀರಿದ ಧನಾಗಮನ. ಮನಃಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನ ಗೌರವ ವೃದ್ಧಿ. ಅಧಿಕಾರಯುತ ನಡೆಯಿಂದ ಸಫ‌ಲತೆ. ಬಂಧುಮಿತ್ರರ ಸಹಾಯ ಸಹಕಾರ ಲಭ್ಯ.

ಸಿಂಹ: ಆರೋಗ್ಯ ಸುಧಾರಣೆ. ಆಲೋಚಿಸಿದ ರೀತಿಯಲ್ಲಿ ಕಾರ್ಯವೃದ್ಧಿಯಾದುದರಿಂದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಜನಮನ್ನಣೆ. ಗೌರವ ಪ್ರಾಪ್ತಿ. ಮಾತಿನಲ್ಲಿ ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ನಷ್ಟ ಸಂಭವ. ದಾಂಪತ್ಯ ಸುಖ ವೃದ್ಧಿ.

Advertisement

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ನೇತೃತ್ವ. ಗುರುಹಿರಿಯರ ಸಲಹೆ ಸಹಕಾರ ಆಶೀರ್ವಾದ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾಗಿ ಧನವ್ಯಯ ತೋರೀತು. ಮಕ್ಕಳಿಂದ ತೃಪ್ತಿ. ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.

ತುಲಾ: ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯಶೈಲಿ. ಸ್ವಾರ್ಜಿತ ಧನ ಸಂಪತ್ತು ವೃದ್ಧಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ. ಮಾನಸಿಕ ನೆಮ್ಮದಿ. ಅವಿವಾಹಿತರಿಗೆ ವಿವಾಹ ಯೋಗ.

ವೃಶ್ಚಿಕ: ಅನಿರೀಕ್ಷಿತ ಧನ ಸಂಪತ್ತಿನ ವೃದ್ಧಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಂಧುಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಾಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ. ಗುರುಹಿರಿಯರ ಉತ್ತಮ ಸಹಕಾರ.

ಧನು: ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ, ಜವಾ ಬ್ದಾರಿ ಯಿಂದ ಯಶಸ್ಸು. ಹಣಕಾಸಿನ ವಿಚಾರ ದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ದಾಂಪತ್ಯ ತೃಪ್ತಿಕರ. ಸರಕಾರೀ ಕಾರ್ಯಗಳಲ್ಲಿ ಪ್ರಗತಿ. ದೂರದ ಮಿತ್ರರಿಂದ ಸಹಾಯ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗ ದಂತೆ ಕಾರ್ಯ ಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ ಅಗತ್ಯ. ಬಂಧುಮಿತ್ರರಲ್ಲಿ ನಿಷ್ಠುರ ವರ್ತನೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಮಾಡದಿರಿ.

ಕುಂಭ: ಸಣ್ಣ ಪ್ರಯಾಣ ಸಂಭವ. ಅಧ್ಯಯನ ದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಎಲ್ಲರ ಸಹಕಾರದಿಂದ ಪ್ರಗತಿ. ದೂರದ ಮಿತ್ರರ ಭೇಟಿ.

ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನ ಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ. ಆಸ್ತಿ ವಿಚಾರಗಳಲ್ಲಿ ಬದಲಾವಣೆ ಸಂಭವ. ಅಧ್ಯಯನದಲ್ಲಿ ತಲ್ಲೀನತೆಯಿಂದ ಮಾನಸಿಕ ತೃಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ. ದೇವತಾ ಸ್ಥಳ ಸಂದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next