Advertisement
ವೃಷಭ: ಭಾರೀ ಮುನ್ನೆಗೆತದ ಭರವಸೆಯೊಂದಿಗೆ ಸಪ್ತಾಹ ಆರಂಭ.ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಯುವಜನರನ್ನು ಸೆಳೆಯಲು ಮುಂದುವರಿದ ಪ್ರಯತ್ನ . ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ದೊರಕಿಸಲು ಸಹಾಯ. ಮನೆ ವಿಸ್ತರಣೆಗೆ ಯೋಜನೆ.
Related Articles
Advertisement
ಕನ್ಯಾ: ಜೀವನೋಪಾಯಕ್ಕೆ ಒಂದೇ ವೃತ್ತಿಯನ್ನು ಅವಲಂಬಿಸುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ತಂದೆಯ ಕಡೆಯ ಹಿರಿಯ ವ್ಯಕ್ತಿಯ ಸಹಕಾರ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲ ವಾತಾವರಣ.
ತುಲಾ: ಕಾಗದದ ಹುಲಿಗಳಿಗೆ ಹೆದರಬೇಡಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಹಿತಶತ್ರುಗಳಿಗೆ ಸೋಲು ಸನ್ನಿಹಿತ. ಗುರುಸ್ಥಾನದಲ್ಲಿರುವ ಹಿರಿಯರು ಮನೆಗೆ ಆಗಮನ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸು ಸಮಾಧಾನ. ಮಕ್ಕಳ ಪ್ರತಿಭೆಗೆ ಶಾಲೆಯಲ್ಲಿ ಪ್ರಶಂಸೆ .
ವೃಶ್ಚಿಕ: ಪ್ರತಿಕೂಲ ವಾತಾವರಣದಲ್ಲಿ ದೇಹ, ಮನಸ್ಸುಗಳ ಸ್ವಾಸ್ಥ್ಯವನ್ನು ಕಾಯ್ದುಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಕ್ಕೆ ಎದುರಾಳಿಗಳಿಂದ ಮತ್ತೆ ಪೈಪೋಟಿ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ತಾತ್ಕಾಲಿಕ ಸಮಸ್ಯೆ ನಿವಾರಣೆ.
ಧನು: ದೈವಭಕ್ತಿ, ಆತ್ಮವಿಶ್ವಾಸದೊಂದಿಗೆ ಪಟ್ಟು ಬಿಡದ ಪ್ರಯತ್ನದಿಂದ ಅಂತಿಮವಾಗಿ ಕಾರ್ಯಸಾಧನೆ. ಸಹೋದ್ಯೋಗಿಗಳಿಗೆ ಹರ್ಷ. ಬಾಲ್ಯದ ಒಡನಾಡಿಯಿಂದ ಸಣ್ಣ ಉದ್ಯಮ ಘಟಕದ ಸ್ಥಾಪನೆ .ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಜೇನು ಸಾಕಣೆ ಆರಂಭಿಸಲು ನಿರ್ಧಾರ.
ಮಕರ: ಮನಸ್ಸಿನ ಚಾಂಚಲ್ಯ ತೊಲಗಿಸುವ ಪ್ರಯತ್ನ ಸಾರ್ಥಕ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಪ್ರಯತ್ನ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.
ಕುಂಭ: ಹೆಸರಿಗೆ ಮಾತ್ರವಿರಾಮದ ದಿನ ಮುಗಿದ ಬಳಿಕ ಕಾರ್ಯರಂಗಕ್ಕೆ ಪ್ರವೇಶ.ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ.ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.
ಮೀನ: ಸಪ್ತಾಹ ಆರಂಭದ ದಿನ ಹಲವು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳನ್ನು ಗಮನಿಸುವ ಅನಿವಾರ್ಯತೆ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ. ಕಾರ್ಯ ನಿರ್ವಹಣೆಗೆ ಸಾರ್ವಜನಿಕರ ಪ್ರಶಂಸೆ. ಕೃಷಿ ಆಧಾರಿತ ಉದ್ಯಮ ಘಟಕ ಸ್ಥಾಪನೆ ಪ್ರಯತ್ನ ಮುನ್ನಡೆ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ.