Advertisement

ಶನಿವಾರದ ರಾಶಿ ಫಲ; ದೀರ್ಘ‌ ಪ್ರಯಾಣ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ

07:24 AM Dec 03, 2022 | Team Udayavani |

ಮೇಷ: ಉತ್ತಮ ಸಂತಸದಿಂದ ಕೂಡಿದ ಸಮಯ. ದೀರ್ಘ‌ ಪ್ರಯಾಣ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಗುರುಹಿರಿಯರ ಆಶೀರ್ವಾದದ ಸುಖ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ. ಗಣ್ಯರ ಭೇಟಿ. ಉದ್ಯೋಗದಲ್ಲಿ ಅಭಿವೃದ್ಧಿ.

Advertisement

ವೃಷಭ: ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಸಂದರ್ಭಕ್ಕೆ ಸರಿಯಾಗಿ ಸಹಾಯ ಸಹಕಾರ ಒದಗಿ ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಮುನ್ನಡೆ ಸಾಧಿಸಿದ ತೃಪ್ತಿ. ಉತ್ತಮ ಧನಾರ್ಜನೆ. ಸಾಂಸಾರಿಕ ಸುಖ ವೃದ್ಧಿ. ದೇವತಾ ಸ್ಥಳ ಸಂದರ್ಶನ.

ಮಿಥುನ: ಆರೋಗ್ಯದಲ್ಲಿ ಸುಧಾರಣೆ. ಮನೆಯ ಕಡೆ ಗಮನಹರಿಸುವಿಕೆ. ಗೃಹೋಪ ವಸ್ತುಗಳ ಸಂಗ್ರಹ. ಮಿತ್ರರ ಭೇಟಿಯಿಂದ ಸಂತಸ. ದೂರದ ವ್ಯವಹಾರಗಳಲ್ಲಿ ಧನ ಸಂಪಾದನೆ. ಪಾಲುಗಾರಿಕಾ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸಿ ಗುರಿ ಸಾಧಿಸಿ.

ಕರ್ಕ: ನಿರೀಕ್ಷಿತ ಸ್ಥಾನ ಗೌರವಕ್ಕೆ ಹೆಚ್ಚಿನ ಹೋರಾಟ. ಆರೋಗ್ಯದ ಬಗ್ಗೆ ಗಮನಹರಿಸಿ. ಪ್ರಯಾಣದಲ್ಲಿ ಅಡಚಣೆ ತೋರೀತು. ಧನಾಗಮಕ್ಕೆ ಕೊರತೆಯಾಗದು. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ ತೋರಿದರೂ ಸ್ಥಾನ ಸುಖ.

ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ್ದರಿಂದ ಸಂತಸದ ವಾತಾವರಣ. ಅಭಿವೃದ್ಧಿಯ ಧನಾರ್ಜನೆ. ಉತ್ತಮ ವಾಕ್‌ ಚತುರತೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ಗುರುಹಿರಿಯರ ವಿಚಾರದಲ್ಲಿ ಕಾಳಜಿ ವಹಿಸಿದ ತೃಪ್ತಿ.

Advertisement

ಕನ್ಯಾ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಿರತೆ. ನಿರೀಕ್ಷಿತ ಧನ ಸಂಪಾ ದನೆ. ಭೂಮಿ ಆಸ್ತಿ ಪತ್ರ ವ್ಯವಹಾರಾದಿಗಳಲ್ಲಿ ಜಾಗ್ರತೆಯ ನಡೆ. ಸಾಂಸಾರಿಕ ಸುಖ ತೃಪ್ತಿದಾಯಕ. ಮಕ್ಕಳಿಂದ ವಿಶೇಷ ಸುಖ. ಗುರುಹಿರಿಯರಿಂದ ಮಾರ್ಗದರ್ಶನ.

ತುಲಾ: ಅನಿರೀಕ್ಷಿತ ಧನಾಗಮನ. ಉತ್ತಮ ವಾಕ್‌ ಚತುರತೆ. ಕೌಟುಂಬಿಕ ಸುಖ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ವರ್ತಕರಿಗೆ ಅವರವರ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ. ವಿವಾಹ ಯೋಗ.

ವೃಶ್ಚಿಕ: ಅನಿರೀಕ್ಷಿತ ಅಧಿಕಾರ ಪ್ರಾಪ್ತಿ. ಗುರುಹಿರಿಯರ, ಮೇಲಧಿಕಾರಿಗಳ ಪ್ರೀತಿ ವಿಶ್ವಾಸ ಗಳಿಕೆ. ಉತ್ತಮ ಧನಾರ್ಜನೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ದಾಂಪತ್ಯ ಸುಖ ಅಭಿವೃದ್ಧಿ. ಉದಾರತೆ, ಧೈರ್ಯ, ನಿಷ್ಠೆ, ಕಾರ್ಯ ಚತುರತೆಯಿಂದ ಜನಮನ್ನಣೆ.

ಧನು: ಮಾತೃಸಮಾನರ ಆರೋಗ್ಯದ ಬಗ್ಗೆ ಗಮನಹರಿಸಿದ ಸಮಾಧಾನ. ಗೃಹೋಪಕರಣ ವಸ್ತುಗಳ ಸಂಗ್ರಹ. ಉತ್ತಮ ಧನಾರ್ಜನೆ. ಸಣ್ಣ ಪ್ರಯಾಣ. ಪಾಲುಗಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ಮಕರ: ಪರದೇಶ ಮೂಲದಿಂದ ಧನಾಗಮ. ಪಾಲುದಾರರಿಂದ ಸಹಾಯ. ಜಲೋತ್ಪನ್ನ ವಸ್ತುಗಳ ಕ್ರಯವಿಕ್ರಯದಲ್ಲಿ ಉತ್ತಮ ಪ್ರಗತಿ. ಸಂಶೋಧಕರಿಗೆ ಸಂದರ್ಭಕ್ಕೆ ಸರಿಯಾಗಿ ಸಹಾಯ ಪ್ರಾಪ್ತಿ. ಸಾಂಸಾರಿಕ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಪ್ರಯಾಣ ಸುಖ.

ಕುಂಭ: ಉತ್ತಮ ಧನಾರ್ಜನೆ. ಆರೋಗ್ಯ ವೃದ್ಧಿ. ಮಾತಿನಲ್ಲಿ ಕಠೊರತೆ ತೋರದಿರಿ. ದಂಪತಿಗಳು, ಪಾಲುದಾರಿಕಾ ವ್ಯವಹಾರಸ್ಥರು ತಾಳ್ಮೆ ಯಿಂದ ಕಾರ್ಯ ಸಾಧಿಸಿಕೊಳ್ಳಿ. ಪರದೇಶ ಸ್ಥಿತ ಮಿತ್ರರಿಂದ ಸಹಾಯ ಒದಗುವುದು. ಪ್ರಯಾಣದಿಂದ ಅನುಕೂಲ.

ಮೀನ: ಮಾನಸಿಕ ಆರೋಗ್ಯ ಉತ್ತಮ. ದೈಹಿಕ ಆರೋಗ್ಯ ಗಮನಹರಿಸಿ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಸಾಹಸದಿಂದ ಧನಾರ್ಜನೆ ವೃದ್ಧಿ. ದೂರ ಪ್ರಯಾಣದಿಂದ ಕಾರ್ಯ ಸಫ‌ಲತೆ. ಕಾರ್ಮಿಕರು ಸಹೋದರರಲ್ಲಿ ತಾಳ್ಮೆಯಿಂದಲೂ ಪ್ರೀತಿಯಿಂದಲೂ ಕಾರ್ಯ ನಿರ್ವಹಿಸಿ ಪ್ರಗತಿ ಗಳಿಸಿ. ಗೃಹದಲ್ಲಿ ಸಂತಸದ ವಾತಾವರಣ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next