Advertisement

Daily Horoscope: ದುಸ್ಸಾಧ್ಯವೆಂದು ಎಣಿಸಿದ ಕಾರ್ಯಗಳು ಸುಲಭ ಸಾಧ್ಯ

07:20 AM Dec 31, 2023 | Team Udayavani |

ಮೇಷ: ರಜೆಯ ಆನಂದವನ್ನು ಅನುಭವಿಸುವಷ್ಟು ಮನಸ್ಸು ಹಗುರವಾಗಿರಲಿ. ದೇಹ, ಮನಸ್ಸು ಎರಡಕ್ಕೂ ನೆಮ್ಮದಿ. ಬಂಧುಗಳಿಂದ ಅಪರೂಪದ ಭೇಟಿ. ಗೈಳೆಯನ ನೂತನ ಗೃಹ ಪ್ರವೇಶ. ಪಿತ್ರಾರ್ಜಿತ ಆಸ್ತಿಯಲ್ಲಿ ನಡಯುತ್ತಿರುವ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

Advertisement

ವೃಷಭ: ಹೊಸ ಸಪ್ತಾಹದ ನಿಯೋಜಿತ ಕಾರ್ಯಗಳಿಗೆ ಪೂರ್ವಸಿದ್ಧತೆ. ಉದ್ಯೋಗ ಕ್ಷೇತ್ರದ ಗೆಳೆಯರೊಂದಿಗೆ ಭೇಟಿ. ಕೃಷಿಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಯ ಕುರಿತು ಸಮಾಲೋಚನೆ ಕುಟುಂಬಸಹಿತ. ಊರಿನ ದೇವಾಲಯಕ್ಕೆ ಭೇಟಿ.

ಮಿಥುನ: ವಿರಾಮದ ದಿನ ಎಲ್ಲರಿಗೂ ನೆಮ್ಮದಿಯ ಅಮಭವ. ಉದ್ಯಮಿಗಳಿಗೆ ಸಮಾಧಾನದ ಸಮಾಚಾರ. ದೂರದ ನೆಂಟರ ಆಗಮನ. ವಸ್ತ್ರ, ಸಿದ್ಧ ಉಡುಪು, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ .

ಕರ್ಕಾಟಕ: ವ್ಯವಹಾರದ ಅಭಿವೃದ್ಧಿಯ ಕುರಿತು ಸವಿವರ ವಿಮರ್ಶೆ. ಕಿರಿಯ ಬಂಧುವಿನ ವಿದ್ಯಾರ್ಜನೆಗೆ ಸಹಾಯ. ಸಹೋದ್ಯೋಗಿಗಳಿಂದ ಸೌಹಾರ್ದ ಭೇಟಿ. ಗೃಹೋತ್ಪನ್ನಗಳಿಗೆ ವ್ಯಾಪಕ ಬೇಡಿಕೆ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ.

ಸಿಂಹ: ವಿರಾಮದ ದಿನ ಉದ್ಯಮಿ ಬಂಧುಗಳೊಡನೆ ಸಹಚಿಂತನೆ. ದೂರದ ಊರಿನಿಂದ ಬಂಧುಗಳ ಆಗಮನ. ಪೂರ್ಣಗೊಳ್ಳದ ಕಾಮಗಾರಿಗಳ ಸಮಸ್ಯೆ. ಉದ್ಯೋಗಾಸಕ್ತರಿಗೆ ನೌಕರಿ ಹುಡುಕಲು ಸಹಾಯ.

Advertisement

ಕನ್ಯಾ: ಕ್ರಿಯಾಶೀಲರಿಗೆ ಕೆಲಸದ ಬದಲಾವಣೆಯಲ್ಲೇ ವಿಶ್ರಾಂತಿಯ ಅನುಭವ. ಸ್ಥಳೀಯ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಮುಖರೊಂದಿಗೆ ಸಮಾಲೋಚನೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ.

ತುಲಾ: ದುಸ್ಸಾಧ್ಯವೆಂದು ಎಣಿಸಿದ ಕಾರ್ಯಗಳು ಸುಲಭಸಾಧ್ಯವಾಗುತ್ತವೆ. ಹಿರಿಯರ ಭವಿಷ್ಯದ ಕುರಿತು ನಿಶ್ಚಿಂತರಾಗಿರಿ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಕೃಷಿಕ್ಷೇತ್ರಕ್ಕೆ ಭೇಟಿಯಿತ್ತು ಕಾರ್ಯ ವೀಕ್ಷಣೆ.ಹತ್ತಿರದ ದೇವಮಂದಿರಕ್ಕೆ ಭೇಟಿ.

ವೃಶ್ಚಿಕ: ಅನಿರೀಕ್ಷಿತ ಮೂಲಗಳಿಂದ ಧನಾಗಮ. ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳ ಸಾಧನೆಗೆ ಸರ್ವತ್ರ ಪ್ರಶಂಸೆ. ಕೃಷಿಕ್ಷೇತ್ರಕ್ಕೆ ಪ್ರವೇಶದಿಂದ ಕಿರಿಯರಿಗೆ ಹೊಸ ಬದುಕಿನ ಆಶೆ. ಪಾಲುದಾರಿಕೆಯಲ್ಲಿ ಹೈನೋದ್ಯಮ ಆರಂಭ.

ಧನು: ತಾತ್ಕಾಲಿಕ ಹಿನ್ನಡೆಗಳಿಂದ ಬಿಡುಗಡೆ. ಸಹೋದ್ಯೋಗಿ ಮಿತ್ರರೊಂದಿಗೆ ಪ್ರಾಕೃತಿಕ ತಾಣಕ್ಕೆ ಭೇಟಿ. ಸಮಾಜದ ಸಮಗ್ರ ಏಳಿಗೆ. ಪರಿಸರ ಸ್ವತ್ಛತೆಯ ಕಾರ್ಯಗಳಲ್ಲಿ ಪಾಲುಗೊಳ್ಳುವಿಕೆ. ದೇವತಾನುಗ್ರಹ ಉತ್ತಮ.

ಮಕರ: ಸಾಮೂಹಿಕ ದೇವತಾರ್ಚನೆಯಲ್ಲಿ ಪಾಲುಗೊಳ್ಳುವ ಸಂದರ್ಭ. ಗುರುಸಮಾನ ವ್ಯಕ್ತಿಯಿಂದ ಮನೆಗೆ ಭೇಟಿ. ಧಾರ್ಮಿಕ ಗ್ರಂಥ ವಾಚನ. ಆಪ್ತ ಸಲಹೆಯಿಂದ ವ್ಯಕ್ತಿತ್ವ ವಿಕಾಸ ಕಾರ್ಯದಲ್ಲಿ ಮುನ್ನಡೆ.

ಕುಂಭ: ವೈವಿಧ್ಯಮಯ ಕಾರ್ಯಗಳಿಂದ ಮನೋಲ್ಲಾಸ. ವಿರಾಮದ ದಿನದಲ್ಲೂ ಹೊಸ ಕಾರ್ಯಗಳನ್ನು ನಿರ್ವಹಿಸಲು ಆಹ್ವಾನ.ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನ.

ಮೀನ: ಶನಿ ಪ್ರಭಾವದಿಂದ ಕಾರ್ಯ ವಿಳಂಬ .ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ವಿಶೇಷ ಯತ್ನ.ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಸಾಮಾಜಿಕ ಕಾರ್ಯಗಳಿಂದ ಕೀರ್ತಿ ವರ್ಧನೆ. ಆಸ್ಪತ್ರೆ, ಅನಾಥಾಲಯಗಳಿಗೆ ಭೇಟಿಯಿತ್ತು ಹಣ್ಣು , ಸಿಹಿತಿಂಡಿ ವಿತರಣೆ. ದಾಂಪತ್ಯ ಜೀವನ ಸುಖಮಯ, ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next