Advertisement

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

07:19 AM Dec 27, 2024 | Team Udayavani |

ಮೇಷ: ನಿಯೋಜಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ ಉದ್ಯಮದ ನೌಕರರಿಗೆ ಹೆಚ್ಚಿದ ಕಾರ್ಯೋತ್ಸಾಹ. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ ಹೆಚ್ಚಳ.

Advertisement

ವೃಷಭ: ಉದ್ಯೋಗಸ್ಥರಿಗೆ ಯಥಾಸ್ಥಿತಿಯ ಅನುಭವ. ಕೃಷಿ ಕ್ಷೇತ್ರದ ಪ್ರಯೋಗಗಳು ಯಶಸ್ವಿ. ಹಿತಮಿತವಾದ ನುಡಿಯಿಂದ ಕ್ಷೇಮ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯುವ ಪ್ರಯತ್ನ ವಿಫ‌ಲ.

ಮಿಥುನ: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು. ಉದ್ಯಮ ಅಭಿವೃದ್ಧಿಗೆ ಸಾಂಸ್ಥಿಕ ನೆರವು ಪ್ರಾಪ್ತಿ. ಸಿದ್ಧ ಉಡುಪು ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ. ನಿಯೋಜಿತ ಪ್ರಯಾಣ ಮುಂದೂಡಿಕೆ. ಶುಭ ಕಾರ್ಯದ ನಿಮಿತ್ತ ಪ್ರಯಾಣ.

ಕರ್ಕಾಟಕ: ಒಂದೇ ಬಾರಿಗೆ ಮೇಲೇರುವ ಹಂಬಲ ಬೇಡ. ಉದ್ಯೋಗದಲ್ಲಿ ಉನ್ನತಿಯ ಸೂಚನೆ. ಅಕಸ್ಮಾತ್‌ ಧನಾಗಮ ಯೋಗ. ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

ಸಿಂಹ: ಯೋಜನಾಬದ್ಧ ನಡೆಯಿಂದ ಯಶಸ್ಸು. ಉದ್ಯೋಗ ಕ್ಷೇತ್ರದಲ್ಲಿ ಅಗ್ರ ಸ್ಥಾನ. ಉದ್ಯಮಕ್ಕೆ ಸರ್ವತೋಮುಖ ಪ್ರಗತಿ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ.

Advertisement

ಕನ್ಯಾ: ವೃತ್ತಿಯಲ್ಲಿ ಪ್ರಾವೀಣ್ಯದಿಂದಾಗಿ ವಿಶೇಷ ಮನ್ನಣೆ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಆಭರಣ ತಯಾರಿ ಕೆಲಸ ಬಲ್ಲವರಿಗೆ ಸದವಕಾಶ.

ತುಲಾ: ಆಸಕ್ತಿಯ ವಿದ್ಯೆಯನ್ನು ಕಲಿಯಲು ಅನುಕೂಲ. ಉದ್ಯೋಗ ಸ್ಥಾನದಲ್ಲಿ ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಕುಟುಂಬದ ಹಿತೈಷಿ ಹಿರಿಯರ ಆಗಮನ. ದೇವತಾ ಸಾನ್ನಿಧ್ಯ ದರ್ಶನ. ಮಂಗಳಕಾರ್ಯಕ್ಕೆ ಮುನ್ನುಡಿ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಹಿಂದಿನದೇ ಸ್ಥಿತಿ ಮುಂದುವರಿಕೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಮಕ್ಕಳ ಹೊಸ ಉದ್ಯಮ ಪ್ರಗತಿಯಲ್ಲಿ. ಮನೆಗೆ ಹೊಸ ಅತಿಥಿಯ ಆಗಮನ.

ಧನು: ಪರಿಶ್ರಮವಿಲ್ಲದೆ ಬದುಕಿಲ್ಲ. ಹೊಸ ಕಾರ್ಯ ಮುಕ್ತಾಯಕ್ಕೆ ಎಲ್ಲರ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕಕ್ಕೆ ಸಮರ್ಥರ ನೇಮಕ. ಖಾದ್ಯ ಪದಾರ್ಥ ಉದ್ಯಮಕ್ಕೆ ದೊಡ್ಡ ಪ್ರಮಾಣದಲ್ಲಿ ಲಾಭ.

ಮಕರ: ಮಿತ್ರರಿಗೆ ಸಾಲ ಕೊಡುವಾಗ ಯೋಚಿಸಿ ನಿರ್ಧರಿಸಿ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಪ್ರಾಪ್ತ ವಯಸ್ಕರಿಗೆ ವಿವಾಹ ಯೋಗ. ಹಿತಶತ್ರುಗಳ ಒಳಸಂಚಿಗೆ ಸೋಲು. ದೇವತಾ ದರ್ಶನದಿಂದ ಒಳಿತಾಗಲಿದೆ.

ಕುಂಭ: ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣಸಾಮಗ್ರಿ, ಸ್ಟೇಶನರಿ ವಿತರಕರಿಗೆ ಹೊಸಬರ ಸಂಪರ್ಕ. ಸಮಾಜಸೇವಾ ಕಾರ್ಯಗಳ ನಾಯಕತ್ವ. ಹಳೆಯ ಊರಿನ ಗೆಳೆಯರ ಆಗಮನ.

ಮೀನ: ಬರುವ ಸಪ್ತಾಹದ ಒತ್ತಡಗಳಿಗೆ ಇಂದಿನಿಂದಲೇ ತಯಾರಿ. ಏಕಕಾಲಕ್ಕೆ ಹಲವು ವಿಭಾಗಗಳಿಂದ ಕೆಲಸಕ್ಕೆ ಬೇಡಿಕೆ. ಸರಕಾರಿ ಇಲಾಖೆಗಳವರಿಂದ ಸಹಕಾರ. ಉಪಕೃತ ಸಾರ್ವಜನಿಕರಿಂದ ಪ್ರಶಂಸೆ. ಕೃಷಿಕರ ಅನುಕೂಲಕ್ಕೆ ಹೊಸ ಕ್ರಮಗಳು. ಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next